ಡೆಂಗ್ಯೂ- ಚಿಕೂನ್ ಗುನ್ಯಾ

0
525

ವಿಶೇಷ ಲೇಖನ
ಮಳೆಗಾಲದಲ್ಲಿ ಮೆಲ್ಲನೆ ಚಳಿ ಜ್ವರ ಬಂದರೆ ಸಾಕು, ಡೆಂಗ್ಯೂ, ಚಿಕೂನ್ ಗುನ್ಯಾ ಇರಬಹುದೇ ಎಂದು ಭಯಬೀಳುವುದು ಸಹಜವಾಗಿದೆ. ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ರೋಗಗಳು ಸೊಳ್ಳೆ ಕಡಿತದಿಂದಲೇ ಉಂಟಾಗುತ್ತದೆ. ಆದರೆ ಈ ಎರಡು ಕಾಯಿಲೆಗಳಿಗೆ ಸಾಮ್ಯತೆ, ವ್ಯತ್ಯಾಸಗಳಿವೆ.
 
 
dengue-chikungunyavaarte
ಡೆಂಗ್ಯೂ ಬಗ್ಗೆ…
ಡೆಂಗ್ಯೂ ಅಪಾಯಕಾರಿಯಾದ ತೀವ್ರ ಜ್ವರದ ಲಕ್ಷಣವಾಗಿದ್ದು, ಉಷ್ಣವಲಯದ ರೋಗವಾಗಿದೆ. ನಗರ ಪ್ರದೇಶದಲ್ಲಿ ಹೆಚ್ಚು ಕಂಡುಬರುತ್ತದೆ. ಇದು ಫ್ಲೇವವೈರಸ್ ಪ್ರಜಾತಿ, ಫ್ಲೇವೈವಿರೈಡೇ ಕುಟುಂಬದ ನಾಲ್ಕು ನಿಕಟವಾಗಿ ಸಂಬಂಧಿಸಿದ ವೈರಾಣು ಸಿಯರಟೈಪ್‌ಗಳಿಂದ ಉಂಟಾಗುತ್ತವೆ.
ಡೆಂಗ್ಯೂ ಲಕ್ಷಣ:
ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ವಿಶಿಷ್ಟ ಚರ್ಮದ ಗುಳ್ಳೆಗಳ ಅಥವಾ ದಡಸಲು/ದದ್ದುಗಳನ್ನು ಒಳಗೊಂಡಿರಬಹುದು. ಗುಣಮುಖವಾಗಲು ಸಾಮಾನ್ಯವಾಗಿ ಕಡಿಮೆ ಎಂದರೆ ಎರಡು ರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅಪರೂಪದ ಸಂದರ್ಭಗಳಲ್ಲಿ ಈ ಒಂದು ಸಣ್ಣ ಪ್ರಮಾಣದ ರೋಗವು ಮಾರಣಾಂತಿಕವಾದ ಡೆಂಗಿ ಹೆಮರಾಜಿಕ್ ಜ್ವರವಾಗಿ ಪರಿಣಮಿಸಬಹುದು. ಪರಿಣಾಮವಾಗಿ ರಕ್ತಸ್ರಾವ, ರಕ್ತದ ಕಿರುಬಿಲ್ಲೆಗಳು ಕಡಿಮೆ ಮಟ್ಟಕ್ಕೆ ಇಳಿಯುಯವುದು. ಹಾಗೂ ರಕ್ತದ ಪ್ಲಾಸ್ಮಾದ ಸೋರಿಕೆ, ಅಥವಾ ಡೆಂಗಿಯ ಗಾಬರಿ ಲಕ್ಷಣಗಳಾದ, ಅಪಾಯಕಾರಿ ಕಡಿಮೆ ರಕ್ತದ ಒತ್ತಡ ಸಂಭವಿಸುತ್ತದೆ.
ಕಂಡು ಬರುವ ಪ್ರದೇಶಗಳು:
ಇದು, ಉತ್ತರ ಆರ್ಜಂಟೀನಾ, ಉತ್ತರ ಆಸ್ಟ್ರೇಲಿಯಾ, ಸಂಪೂರ್ಣ ಬಾಂಗ್ಲಾದೇಶ, ಬಾರ್ಬೇಡೋಸ್, ಬಲಿವೀಯಾ,, ಕ್ಯಾಂಬೋಡಿಯಾ, ಕೋಸ್ಟಾ ರೀಕಾ, ಡಮಿನಿಕಾದ ಗಣರಾಜ್ಯ, ಗ್ವಾಟಮಾಲಾ, ಗಾಯಾನಾ, ಹಾಂಡೂರಸ್, ಭಾರತ, ಇಂಡನೀಷ್ಯಾ, ಜಮೇಯ್ಕಾ, ಮಲೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ, ಪ್ಯಾನಮಾ, ಪ್ಯಾರಗ್ವಾಯ್, ಫಿಲಪೀನ್ಸ್, ಪ್ವೆರ್ಟ ರೀಕೋ, ಸಮೋವಾ, ಸಿಂಗಪೋರ್, ಶ್ರೀಲಂಕಾ, ಸೂರನಾಮ್, ತೈವಾನ್, ಥಾಯ್‌ಲಂಡ್, ಟ್ರಿನಿಡ್ಯಾಡ್, ಮತ್ತು ವಿಯೆಟ್ನಾಮ್, ಹಾಗೂ ದಕ್ಷಿಣ ಚೀನಾವನ್ನು ಒಳಗೊಂಡಂತೆ, ಉಷ್ಣವಲಯಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ.
ಮನೆಮದ್ದು:
ಕಿತ್ತಳೆ ಹಣ್ಣು: ಇದರಲ್ಲಿ ಪೋಷಕಾಂಶ ಮತ್ತು ವಿಟಮಿನ್ಸ್ ಇದ್ದು, ಜೀರ್ಣಕ್ರಿಯೆಗೆ ಸಹಾಯ, ಮೂತ್ರ ವಿಸರ್ಜನೆಗೆ ಆಗಾಗ ಹೋಗುವಂತೆ ಮಾಡುವುದು. ಇದರಿಂದ ರೋಗಿಗೆ ಹಣ್ಣು ಕೊಡುವುದರಿಂದ ಶರೀರದಿಂದ ಡೆಂಗ್ಯೂ ಬ್ಯಾಕ್ಟೀರಿಯಾಗಳು ಹೊರ ಹೋಗುವುದು.
ಪಪ್ಪಾಯಿ: ಪಪ್ಪಾಯಿನಲ್ಲಿ ಡೆಂಗ್ಯೂ ಜ್ವರ ಕಮ್ಮಿ ಮಾಡುವ ಔಷಧೀಯ ಗುಣವಿದೆ. ಪ್ರತಿನಿತ್ಯ ಪಪ್ಪಾಯಿ ಎಲೆಯ ರಸವನ್ನು 1 ಚಮಚದಷ್ಟು ತೆಗೆದುಕೊಂಡರೆ ಬೇಗನೆ ಕಡಿಮೆಮಾಡುವುದು.
ಹರ್ಬಲ್ ಟೀ: ಡೆಂಗ್ಯೂ ಜ್ವರ ಕಮ್ಮಿ ಮಾಡಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು. ಅದರಲ್ಲೂ ಏಲಕ್ಕಿ ಹಾಕಿದ ಹರ್ಬಲ್ ಟೀ ತುಂಬಾ ಒಳ್ಳೆಯದು.
ಸೂಪ್, ಹಣ್ಣಿನ ರಸವನ್ನು ಒಂದು ದಿನದಲ್ಲಿ ಎರಡೂವರೆ ಲೀಟರ್‌ಗಳವರೆಗೆ ಕುಡಿಯಬೇಕು.
ಡೆಂಗಿ ಲಕ್ಷಣಗಳು ಕಾಣಿಸಿಕೊಂಡಾಗ ದಿನಕ್ಕೆ 2-3 ಎಳನೀರು ಸೇವನೆ ಇರಲಿ. ಇದು ದೇಹಕ್ಕೆ ಪುಷ್ಟಿ ನೀಡುತ್ತದೆ.
ಜ್ವರ ಬಂದಾಗ ಸಾಮಾನ್ಯ ಆಹಾರಕ್ಕಿಂತ ಗಂಜಿ ಸೇವನೆ ಒಳ್ಳೆಯದು. ಇದರೊಂದಿಗೆ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ದ್ರವ ಸಿಗುತ್ತದೆ. ಇದು ಸುಸ್ತನ್ನೂ ಕಡಿಮೆಗೊಳಿಸುತ್ತದೆ.
ನಿಂಬೆ ಜ್ಯೂಸ್ ನಿಮ್ಮಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಹಾಗೂ ಡೆಂಗಿ ವೈರಸ್ ಅನ್ನು ನಾಶಪಡಿಸಲು ಸಹಕಾರಿ. ನಿಂಬೆಯೊಂದಿಗೆ ತರಕಾರಿ ಜ್ಯೂಸ್ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.
 
 
 
ಚಿಕೂನ್ ಗುನ್ಯಾ:
ಇದು ಕೂಡ ಡೆಂಗ್ಯೂ ರೀತಿ ವೈರಸ್ ನಿಂದ ಹರಡುತ್ತದೆ. ಸಿಎಚ್ ಐಕೆವಿ ವೈರಸ್ ನಿಂದ ಚಿಕೂನ್ ಗುನ್ಯಾ ವೈರಸ್ ಹಬ್ಬುತ್ತದೆ. 1952ರಲ್ಲಿ ಮೊದಲ ಬಾರಿ ದಕ್ಷಿಣ ತಾಂಜಾನಿಯಾದಲ್ಲಿ ಸಿಎಚ್ ಐಕೆವಿ ವೈರಸ್ ಗಳು ಕಂಡುಬಂದವು. ಬಳಿಕ 1958ರಲ್ಲಿ ಮೊದಲ ಬಾರಿ ಬ್ಯಾಂಕಾಕ್ ನಲ್ಲಿ ವೈರಸ್ ಕಾಣಿಸಕೊಳ್ಳುವ ಮೂಲಕ ಏಷ್ಯಾ ರಾಷ್ಟ್ರಗಳು ಕಾಲಿಟ್ಟಿತ್ತು.
ಲಕ್ಷಣ:
ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಗಂಟಲುನೋವು, ತಲೆನೋವು, ವಾಂತಿ, ತುರಿಕೆ ಕಾಣಿಸಿಕೊಳ್ಳುತ್ತದೆ. ಚಿಕನ್‌ಗನ್ಯಾ ವೈರಾಣುವು ಎರಡರಿಂದ ಐದು ದಿನಗಳವರೆಗೆ ಮಾತ್ರ ಇರುವ ಕಾಯಿಲೆಯ ತೀವ್ರವಾದ ಜ್ವರಲಕ್ಷಣದ ಅವಸ್ಥೆಯೊಂದಿಗೆ ಪ್ರಕಟವಾಗುತ್ತದೆ. ತರುವಾಯ ಕೈಕಾಲುಗಳ ಕೀಲುಗಳನ್ನು ಬಾಧಿಸುವ ವಿಸ್ತೃತ ಕೀಲು ನೋವು ರೋಗದೊಂದಿಗೆ ಕಾಣಿಸಿಕೊಳ್ಳುತ್ತದೆ.
ಚಿಕಿತ್ಸೆ:
ಚಿಕೂನ್ ಗುನ್ಯಾಕ್ಕೆ ಔಷಧ ಇಲ್ಲ. ಆದರೆ ಲಕ್ಷಣಗಳನ್ನು ಆಧರಿಸಿ ಔಷಧ ನೀಡಲಾಗುತ್ತದೆ.
 
 
ಮಾರಕ ಕಾಯಿಲೆಯಾದ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಜ್ವರ ತಡೆಗಟ್ಟಲು ಯಾವುದೇ ಔಷಧ ಕಂಡುಹಿಡಿಯಲಾಗಿಲ್ಲ. ಆದರೆ ಆರಂಭಿಕ ಹಂತದಲ್ಲೇ ವೈರಸ್ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಮಾರಣಾಂತಿಕವಾಗಲಾರದು. ಮುಂಜಾಗ್ರತೆ ಕ್ರಮವಾಗಿ ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚವಾಗಿಟ್ಟುಕೊಂಡು, ಸೊಳ್ಳೆಗಳ ನಿಯಂತ್ರಣ ಮಾಡಬಹುದು.

LEAVE A REPLY

Please enter your comment!
Please enter your name here