ಡಿ30ರೊಳಗೆ ಮಾತ್ರ ಅವಕಾಶ

0
482

ನವದೆಹಲಿ ಪ್ರತಿನಿಧಿ ವರದಿ
ಅಕ್ರಮ…ಸಕ್ರಮ…
ಸರ್ಕಾರದಿಂದ ಬ್ಯಾನ್ ಆದ 500 ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಡಿ.30ರವರೆಗೆ ಅವಕಾಶ ನೀಡಲಾಗಿದೆ.
 
 
 
ಜಮೆ ಮಾಡುವ ರದ್ದಾದ ನೋಟುಗಳಿಗೆ ದಾಖಲೆಗಳು ಇಲ್ಲದಿದ್ದರೂ ಸಕ್ರಮಕ್ಕೆ ಸರ್ಕಾರ ಅವಕಾಶ ನೀಡಿದೆ. ಸ್ವಯಂ ಪ್ರೇರಣೆಯಿಂದ ಆದಾಯ ತೆರಿಗೆ ಇಲಾಖೆ ಗಮನಕ್ಕೆ ತಂದರೆ ಒಟ್ಟು ಮೊತ್ತದ ಶೇ.50ರಷ್ಟು ತೆರಿಗೆ ಕೊಡಬೇಕು. ಉಳಿದ ಹಣ ಸಕ್ರಮಕ್ಕೆ ಆದಾಯ ತೆರಿಗೆ ಇಲಾಖೆ ಅವಕಾಶ ನೀಡಿದೆ.
 
 
 
ಸಕ್ರಮವಾದ ಮೊತ್ತದ ಅರ್ಧ ಭಾಗ 4 ವರ್ಷಗಳ ಕಾಲ ಖಾತೆಯಿಂದ ತೆಗೆಯುವುದಕ್ಕೆ ಅವಕಾಶ ಇಲ್ಲ. ಒಂದು ವೇಳೆ ದಾಖಲೆ ರಹಿತ ಹಣವನ್ನು ಸ್ವಯಂ ಪ್ರೇರಣೆಯಿಂದ ಘೋಷಣೆ ಮಾಡದೇ ಇದ್ದರೆ ಶೇ.90ರಷ್ಟು ತೆರಿಗೆ ಮತ್ತು ದಂಡ ವಿಧಿಸಲಾಗುತ್ತದೆ.
 
 
 
ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಆದಾಯ ತೆರಿಗೆ ಕಾಯ್ದೆಗೆ ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿಯೇ ತಿದ್ದುಪಡಿ ತರಲು ಚಿಂತನೆ ನಡೆಸಿದೆ.

LEAVE A REPLY

Please enter your comment!
Please enter your name here