ಡಿ.28ರಿಂದ ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸ

0
483

ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದಲ್ಲಿ ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಡಿ.28ರಿಂದ ಜ.15ರವರೆಗೆ ಬರ ಪರಿಸ್ಥಿತಿ ಅಧ್ಯಯನ ನಡೆಯಲಿದೆ. ಪ್ರಮುಖ ಬಿಜೆಪಿ ನಾಯಕ ನೇತೃತ್ವದಲ್ಲಿ ಬರ ಪರಿಸ್ಥಿತಿ ಅಧ್ಯಯನ ತಂಡ ರಚನೆಯಾಗಿದೆ.
 
 
 
ಶಾಸಕರು, ವಿಧಾನ ಪರಿಷತ್ ಸದಸ್ಯರ ತಂಡ ರಚನೆಯಾಗಿದೆ. ಈ ತಂಡ ಬರಪೀಡಿತ ಜಿಲ್ಲೆ, ತಾಲೂಕು ಪ್ರದೇಶಗಳಿಗೆ ಭೇಟಿ ನೀಡಲಿದೆ. ಪ್ರತಿ ಜಿಲ್ಲೆಗೂ ಬಿಜೆಪಿ ತಂಡಗಳು ಭೇಟಿ ನೀಡಲಿದೆ.
 
 
 
ಅಧ್ಯಯನ ಪ್ರವಾಸದ ವೇಳೆ ರೈತರ ಅಹವಾಲು ಸ್ವೀಕರಿಸಲಿದ್ದಾರೆ. ಬೆಳೆ ನಷ್ಟ, ರೈತರ ಬ್ಯಾಂಕ್ ಸಾಲ, ಕೌಟುಂಬಿಕ ಹಿನ್ನೆಲೆ, ಸದ್ಯದ ಸ್ಥಿತಿಗತಿಗಳ ಕುರಿತು ಬರ ಪರಿಸ್ಥಿತಿ ಅಧ್ಯಯನ ತಂಡ ಮಾಹಿತಿ ಸಂಗ್ರಹಿಸಲಿದೆ. ಬಳಿಕ ಕ್ರೋಢಿಕೃತ ವರದಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲು ಬಿಜೆಪಿ ನಾಯಕರ ತಂಡ ನಿರ್ಧರಿಸಲಿದೆ.

LEAVE A REPLY

Please enter your comment!
Please enter your name here