ಡಿ.23: ಪುಸ್ತಕ ಬಿಡುಗಡೆ ಮತ್ತು ಗಾಯನಗೋಷ್ಠಿ ಕಾರ್ಯಕ್ರಮ

0
371

 
ಮಂಗಳೂರು ಪ್ರತಿನಿಧಿ ವರದಿ
ಬಿಳಿಚುಕ್ಕೆ ಪ್ರಕಾಶನ, ಮಂಗಳೂರು ಸಂಸ್ಥೆಯ ವತಿಯಿಂದ ಪುಸ್ತಕ ಬಿಡುಗಡೆ ಮತ್ತು ಗಾಯನಗೋಷ್ಠಿ ಕಾರ್ಯಕ್ರಮವು ಡಿಸೆಂಬರ್ 23 ರಂದು ಸಂಜೆ 6.30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
 
 
ಕಾರ್ಯಕ್ರಮದಲ್ಲಿ ಇತ್ತೀಚೆಗೆ ದಿವಂಗತರಾದ ಮಂಗಳೂರಿನ ಛಾಯಾಚಿತ್ರಗಾರ, ಪತ್ರಕರ್ತ ಹಾಗೂ ಬರಹಗಾರ ಅಹ್ಮದ್ ಅನ್ವರ್ ರವರ `ಪಯಣಿಗನ ಪದ್ಯಗಳು’ ಹಾಗೂ ಹಿರಿಯ ಬಹುಭಾಷಾ ಸಾಹಿತಿ ಮುಹಮ್ಮದ್ ಬಡ್ಡೂರ್ ರವರ ‘ಬಡ್ಡೂರರ ಸದ್ದುಗಳು’ ಕವನ ಸಂಕಲನ, ಅನುಪಮ ಮಹಿಳಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ.ರವರ ‘ನಿನಗಾಗಿ’(ಕಾದಂಬರಿ) ಮತ್ತು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ.ಕೆ.ಕುಕ್ಕಿಲರವರ ‘ಸರಸ-ಸಲ್ಲಾಪ’(ಲಲಿತ ಪ್ರಬಂಧ) ಎಂಬ ನಾಲ್ಕು ಪುಸ್ತಕಗಳು ಬಿಡುಗಡೆಯಾಗಲಿದೆ.
 
 
 
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಹಾಗೂ ಖ್ಯಾತ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಭಾಗವಹಿಸಲಿದ್ದಾರೆ. ಅಲ್ಲದೆ, ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರವೂಫ್ ಪುತ್ತಿಗೆ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕಾಧ್ಯಕ್ಷೆ ಕೆ.ಎ.ರೋಹಿಣಿ, ನ್ಯೂಸ್‍ಕನ್ನಡ ವೆಬ್ ಪೋರ್ಟಲ್ ನಿರ್ದೇಶಕರಾದ ಇಮ್ರಾನ್ ಖಾನ್ ಎರ್ಮಾಳ್ ಶುಭಕೋರಲಿದ್ದಾರೆ.
 
 
ಬಳಿಕ ನಡೆಯುವ ಗಾಯನಗೋಷ್ಠಿಯಲ್ಲಿ ಮುಹಮ್ಮದ್ ಬಡ್ಡೂರ್, ನಾದ ಮಣಿನಾಲ್ಕೂರು, ಶರೀಫ್ ನಿರ್ಮುಂಜೆ, ಬಶೀರ್ ಅಹ್ಮದ್ ಕಿನ್ಯಾ, ಉಮರ್ ಮೌಲವಿ ಮಡಿಕೇರಿ, ಅಝ್ಹರುಲ್ಲಾ ಖಾಸಿಮಿ, ಸಲೀಮ್ ಬೋಳಂಗಡಿ ಭಾಗವಹಿಸಲಿದ್ದಾರೆ ಎಂದು ಬಿಳಿಚುಕ್ಕೆ ಪ್ರಕಾಶನದ ಅಧ್ಯಕ್ಷರಾದ ಎಸ್.ಎಂ.ಮುತ್ತಲಿಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here