ಡಿ.13ಕ್ಕೆ ರಜಾ ದಿನ

0
383

ಬೆಂಗಳೂರು ಪ್ರತಿನಿಧಿ ವರದಿ
ಮುಸ್ಲಿಂರ ಪವಿತ್ರ ಹಬ್ಬ ಈದ್-ಮಿಲಾದ್ (ಪ್ರಾಫೆಟ್ ಮೊಹಮ್ಮದನ ಜನುಮದಿನ) ಪ್ರಯುಕ್ತ ಸಾರ್ವತ್ರಿಕ ರಜಾವನ್ನು ಸೋಮವಾರದ ಬದಲು ಮಂಗಳವಾರ ಡಿಸೆಂಬರ್ 13ಕ್ಕೆ ನೀಡಲಾಗಿದೆ.
 
 
ಈ ಮೊದಲು ಸೋಮವಾರ ರಜಾ ಎಂದು ಘೋಷಿಸಲಾಗಿತ್ತು. ಸೆಂಟ್ರಲ್ ಮೂನ್ ಕಮಿಟಿಯ ಅಭಿಪ್ರಾಯದಂತೆ 2016ನೇ ಸಾಲಿನ ಈದ್-ಮಿಲಾದ್ ಹಬ್ಬದ ಆಚರಣೆಗೆ ಡಿಸೆಂಬರ್ 12ರಂದು ಘೋಷಿಸಿದ ರಜಾವನ್ನು ರದ್ದುಗೊಳಿಸಿ, ಡಿಸೆಂಬರ್ 13ರ ಮಂಗಳವಾರದಂದು ಸಾರ್ವತ್ರಿಕ ರಜಾ ಘೋಷಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here