ಡಿಜಿಟಲ್ ಇಂಡಿಯಾಕ್ಕೆ ಕೇಂದ್ರ ಹೆಜ್ಜೆ

0
424

ರಾಷ್ಟ್ರೀಯ ಪ್ರತಿನಿಧಿ ವರದಿ
ಡಿಜಿಟಲ್ ಪೇಮೆಂಟ್ ಗೆ ಮತ್ತೊಂದು ಆ್ಯಪ್
‘ಡಿಜಿಟಲ್ ಇಂಡಿಯಾ’ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಸರ್ಕಾರದಿಂದಲೇ ನೂತನ ಆ್ಯಪ್ ಬಿಡುಗಡೆ ಮಾಡಿದೆ.
 
 
 
ಡಿಜಿಟಲ್ ಪೇಮೆಂಟ್ ಮಾಡಲು ಮತ್ತೊಂದು ಆ್ಯಪ್ ಬಿಡುಗಡೆಯಾಗಿದೆ. ದೆಹಲಿಯಲ್ಲಿ ನಡೆದ ಡಿಜಿಧನ್ ಮೇಳಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಮೊಬೈಲ್ ಆ್ಯಪ್ ನ್ನು ಲೋಕಾರ್ಪಣೆಗೊಳಿಸಿದ್ದಾರೆ.
 
 
 
ಈ ವೇಳೆ ಮಾತನಾಡಿದ ಪ್ರಧಾನಿ ಡಿಜಿಟಲ್ ಪೇಮೆಂಟ್, ವ್ಯವಹಾರವನ್ನು ಸುಲಭಗೊಳಿಸುತ್ತದೆ. ಆ್ಯಪ್ ನಿಂದ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಪ್ರಧಾನಿ ಆ್ಯಪ್ ಬಗ್ಗೆ ವಿವರ ನೀಡಿದ್ದಾರೆ.
 
 
 
ನಾವು ನಗದಿನಿಂದ ನಗದು ರಹಿತ ವ್ಯವಹಾರದತ್ತ ಹೆಜ್ಜೆ ಇಟ್ಟಿದ್ದೇವೆ. ಕ್ಯಾಶ್ ಲೆಸ್ ಪೇಮೆಂಟ್ ಪ್ರೋತ್ಸಾಹಿಸಲು ಲಕ್ಕಿ ವಿಜೇತರಿಗೆ ಬಹುಮಾನ ಘೋಷಿಸಲಾಗಿದೆ. ಇವತ್ತು ನಾಲ್ವರಿಗೆ 1 ಸಾವಿರ ರೂಪಾಯಿ ಬಹುಮಾನ ಕೊಟ್ಟಿದ್ದು ಖುಷಿಯಾಗಿದೆ ಎಂದು ಪ್ರಧಾನಿ ಡಿಜಿ ಧನ್ ಮೇಳದಲ್ಲಿ ತಿಳಿಸಿದ್ದಾರೆ.
 
 
ಕ್ರಿಸ್ ಮಸ್ ದಿನ ಸರ್ಕಾರ ಹೊಸ ಉಡುಗೊರೆಯನ್ನು ಘೋಷಿಸಿತ್ತು. ಡಿಜಿಟಲ್ ವಹಿವಾಟು ನಡೆಸುವವರಿಗೆ ಬಹುಮಾನ ಪ್ರಕಟಿಸಿದೆ. ಒಟ್ಟು 100 ದಿನಗಳ ಕಾಲ ಬಹುಮಾನ ನೀಡಲಾಗುತ್ತದೆ. ಏಪ್ರಿಲ್ 14ಕ್ಕೆ ಮೆಗಾ ಬಹುಮಾನ ಘೋಷಿಸಲಾಗುತ್ತದೆ. ಲಕ್ಕಿ ಡ್ರಾ ವಿಜೇತರಿಗೆ 1 ಕೋಟಿ ರೂ. ಮೆಗಾ ಬಹುಮಾನ ನೀಡಲಾಗುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.
 
 
ಅನಕ್ಷರಸ್ಥರನ್ನು ಹೆಬ್ಬಟ್ಟು ಎಂದು ಕರೆಯಲಾಗುತ್ತಿತ್ತು. ನಿಮ್ಮ ಹೆಬ್ಬೆಟ್ಟು ಇನ್ನು ಮುಂದೆ ನಿಮ್ಮ ಬ್ಯಾಂಕ್ ಆಗಲಿದೆ. ಹೆಬ್ಬೆರಳಿದ್ದರೆ ಸಾಕಿ ಎಲ್ಲ ತರಹ ವ್ಯವಹಾರ ನಡೆಸಬಹುದು. ಈ ಹೊಸ ಆ್ಯಪ್ ನಲ್ಲಿ ಹೆಬ್ಬೆಟ್ಟು ಒತ್ತುವುದರ ಮೂಲಕ ವಹಿವಾಟು ನಡೆಯುತ್ತದೆ. ಇಂದು ಭೀಮ್ ಆ್ಯಪ್ ಬೀಡುಗಡೆಯಾಗಿದ್ದು, ಈ ಆ್ಯಪ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ. ಜಗತ್ತಿನ ಅತ್ಯದ್ಭುತ ಆಪ್ ಗಳಲ್ಲಿ ಭೀಮ್ ಆ್ಯಪ್ ಒಂದಾಗಲಿದೆ. ಅಂಬೇಡ್ಕರ್ ಬಹುಜನರ ಹಿತ ಬಹುಜನರಿಗೆ ಸುಖ ಎಂದಿದ್ದರು. ಇನ್ನು ಮುಂದೆ ಭಾರತದಲ್ಲಿ ಹೆಬ್ಬೆಟ್ಟೆಂದರೆ ಅಭಿವೃದ್ಧಿ ಸಂಕೇತವಾಗಿದೆ. ಬಯೋಮೆಟ್ರಿಕ್ ಮೂಲಕ ಆ್ಯಪ್ ನಲ್ಲಿ ಎಲ್ಲಾ ವ್ಯವಹಾರ ನಡೆಯಲಿದೆ ಎಂದು ಪ್ರದಾನಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here