ಡಿಕೆ'ಗೆ ಕೆಪಿಸಿಸಿ ಪಟ್ಟ

0
193

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಮೇಜರ್‌ ಸರ್ಜರಿ ಮಾಡಲು ಕಾಂಗ್ರೆಸ್ ಹೈಕಮಾಂಡ್‌ ತೀರ್ಮಾನಿಸಿದ್ದು, ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯ ಇಂಧನ ಇಲಾಖೆ ಸಚಿವ ಡಿ ಕೆ ಶಿವಕುಮಾರ್ ನೇಮಕವಾಗುವ ಸಾಧ್ಯತೆ ಇದೆ ಎಂದು ಎಐಸಿಸಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿರುವ ಗೃಹ ಸಚಿವ ಡಾ.ಪರಮೇಶ‍್ವರ್ ಅವರು, ಶಿವಕುಮಾರ್ ಅವರ ಹೆಸರನ್ನು ಸೂಚಿಸಿದ್ದಾರೆ. ಅಲ್ಲದೆ ಡಿಕೆ ಶಿವಕುಮಾರ್ ಗೆ ಅಧ್ಯಕ್ಷ ಹುದ್ದೆ ನೀಡಲು ಹೈಕಮಾಂಡ್ ಒಲವು ತೊರಿದೆ. ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಡಿಕೆ ಅವರು ಕೂಡ ಅದ್ಯಕ್ಷ ಸ್ಥಾನ ನಿರ್ವಹಿಸಲು ಸಿದ್ಧ ಎಂದು ಎಐಸಿಸಿಗೆ ಸ್ಪಷ್ಟಪಡಿಸಿದ್ದಾರೆ.
 
 
ವಿಧಾನಪರಿಷತ್, ರಾಜ್ಯಸಭೆ ಚುನಾವಣೆ ನಂತರ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರಾಗುವಂತೆ ಸಚಿವ ಎ ಮಂಜುಗೆ ಆಫರ್ ನೀಡಿತ್ತು ಎನ್ನಲಾಗಿದೆ. ಎ. ಮಂಜು ಅಧ್ಯಕ್ಷಗಿರಿಗೆ ಹಿಂಜರಿದಿದ್ದರಿಂದ ಡಿಎಕಶಿಯತ್ತ ಒಲವು ತೋರಿದೆ.

LEAVE A REPLY

Please enter your comment!
Please enter your name here