ಡಾ.ರಾಜ್ ಚರಿತ್ರೆಗೆ 'ಸ್ವರ್ಣಕಮಲ'

0
406

 
ಸಿನಿ ಪ್ರತಿನಿಧಿ ವರದಿ
‘ಡಾ.ರಾಜ್ ಕುಮಾರ್ ‘ಸಮಗ್ರ ಚರಿತ್ರೆ’ ಪುಸ್ತಕಕ್ಕೆ ಪ್ರಶಸ್ತಿ ದೊರಕಿದೆ. ಡಾ.ರಾಜ್ ಅವರ ಪುಸ್ತಕಕ್ಕೆ ರಾಷ್ಟ್ರೀಯ ‘ಸ್ವರ್ಣ ಕಮಲ’ ಪ್ರಶಸ್ತಿ ಲಭಿಸಿದೆ.
 
 
 
ಇಂದು ನವದೆಹಲಿಯಲ್ಲಿ ಪ್ರಶಸ್ತಿ ಪುರಸ್ಕಾರ ಘೋಷಣೆಯಾಗಿದ್ದು, ಪ್ರಶಸ್ತಿಯೊಂದಿಗೆ 75 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನೊಳಗೊಂಡಿದೆ. ದೊಡ್ಡಹುಲ್ಲೂರು ರುಕ್ಕೋಜಿ ಈ ಪುಸ್ತಕವನ್ನು ಬರೆದಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಘೊಷಣೆ ವೇಳೆ ಡಾ. ರಾಜ್ ಅವರ ಸಮಗ್ರ ಚರಿತ್ರೆಗೆ ಪ್ರಶಸ್ತಿ ಘೋಷಣೆಯಾಗಿದೆ.
 
 
 
ಪ್ರೀತಿ ಪುಸ್ತಕ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ. ಪುಸ್ತಕ ರಚನೆಗೆ ಸತತ 15 ವರ್ಷಗಳ ಕಾಲ ಕಠಿಣ ಪರಿಶ್ರಮವಿದೆ. ಅಂದಾಜು 87 ಲಕ್ಷ ರೂ.ವೆಚ್ಚದಲ್ಲಿ ಪುಸ್ತಕ ರಚನೆಯಾಗಿದೆ. ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆ 2 ಸಂಪುಟದಲ್ಲಿ ಲಭ್ಯವಾಗಲಿದೆ. 1080 ಪುಟಗಳ ಸಂಪುಟವೊಂದರಲ್ಲಿ ಡಾ.ರಾಜ್ ಜೀವನ, ಡಾ.ರಾಜ್ ಅವರು 1060 ಪುಟಗಳ 2ನೇ ಸಂಪುಟದಲ್ಲಿ ಚಲನಚಿತ್ರಗಳ ಬಗ್ಗೆ ಸಮಗ್ರ ಮಾಹಿತಿಯಿದೆ.

LEAVE A REPLY

Please enter your comment!
Please enter your name here