ಡಾ. ರಾಜ್ ಆಸ್ತಿ ಹಂಚಿಕೆ

0
318

ನಮ್ಮ ಪ್ರತಿನಿಧಿ ವರದಿ
ದಿವಂಗತ ವರನಟ ಡಾ.ರಾಜ್‍ಕುಮಾರ್ ಅವರ ಆಸ್ತಿ ಸೋಮವಾರ ಅಧಿಕೃತವಾಗಿ ವಿಭಜನೆಯಾಗಿದೆ. ಡಾ.ರಾಜ್ ಅವರು ಆಸ್ತಿಯನ್ನು ಅವರ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ.
 
 
ಡಾ. ರಾಜ್ ಕುಮಾರ್ ಅವರ ಹುಟ್ಟೂರಾದ ಚಾಮರಾಜನಗರದಲ್ಲಿರುವ ಗಾಜನೂರಿನಲ್ಲಿರುವ ಐವತ್ತು ಎಕರೆಗೂ ಹೆಚ್ಚು ಆಸ್ತಿಯನ್ನು ನಿನ್ನೆ ಅಧಿಕೃತವಾಗಿ ಮಕ್ಕಳಿಗೆ ಹಂಚಿಕೆ ಮಾಡಲಾಗಿದೆ.
 
 
 
ರಾಜ್ ಕುಮಾರ್ ಅವರ ಪುತ್ರರಾದ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಮಾರ್ ಅವರ ಇಬ್ಬರು ಪುತ್ರಿಯರಾದ ಲಕ್ಷ್ಮೀ ಗೋವಿಂದರಾಜ್ ಮತ್ತು ಪೂರ್ಣಿಮಾ ರಾಮ್ ಕುಮಾರ್ ಅವರ ಹೆಸರಿಗೆ ಭಾಗ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here