ಡಾ. ರಾಜ್‍ ಅವರ 88ನೇ ಜನ್ಮ ದಿನಾಚರಣೆ

0
412

 
ಬೆಂಗಳೂರು ಪ್ರತಿನಿಧಿ ವರದಿ
ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ದಿವಂಗತ ಡಾ. ರಾಜ್‍ಕುಮಾರ್ ಅವರ ಜನ್ಮದ ದಿನದ ಅಂಗವಾಗಿ ಏಪ್ರಿಲ್ 24 ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿನ ರವೀಂದ್ರ ಕಲಾಮಂದಿರದಲ್ಲಿ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
 
 
 
ಸಮಾರಂಭದ ಉದ್ಫಾಟನೆಯನ್ನು ರಾಜ್ಯ ಮೂಲಭೂತ ಸೌಲಭ್ಯ ಅಭಿವೃದ್ದಿ, ವಾರ್ತಾ ಹಾಗೂ ಹಜ್ ಖಾತೆ ಸಚಿವ ಆರ್. ರೋಷನ್ ಬೇಗ್ ಅವರು ನೆರವೇರಿಸುವರು. ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್, ವಿಧಾನ ಪರಿಷತ್ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ರಾಜ್ಯ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಉಪಸ್ಥಿತರಿರುವರು.
 
 
 
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ. ಜಾರ್ಜ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಉಪಸಭಾಪತಿ ಮರೀತಿಬ್ಬೇಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಉಪಾಧ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ, ಹಿರಿಯ ಚಲನಚಿತ್ರ ನಿರ್ಮಾಪಕರಾದ ಪಾರ್ವತಮ್ಮ ರಾಜ್‍ಕುಮಾರ್ ಅವರು ಪಾಲ್ಗೊಳ್ಳುವರು.
 
 
 
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಆರ್.ವಿ. ದೇವರಾಜ್ ವಹಿಸುವರು. ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಪ್ರಮುಖರಾದ ಡಾ. ಶ್ರೀನಾಥ್, ವಿ. ರವಿಚಂದ್ರನ್, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕೃತಿ ಡಾ. ರಾಜ್‍ಕುಮಾರ್ ಸಮಗ್ರ ಚರಿತ್ರೆಯ ಲೇಖಕ ದೊಡ್ಡ ಹಲ್ಲೂರು ರುಕ್ಕೋಜಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ವಿಜಯಲಕ್ಷ್ಮೀ ಅರಸು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ, ಗೋವಿಂದು ಅವರು ಪಾಲ್ಗೊಳ್ಳುವರು.
 
 
 
ಅಂದು ಸಂಜೆ 5-00 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಹಿನ್ನಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಮತ್ತು ತಂಡದವರಿಂದ ಡಾ. ರಾಜ್‍ಕುಮಾರ್ ಅವರ ಅಭಿನಯದ ಚಲನಚಿತ್ರಗಳ ಗಾಯನ ಹಾಗೂ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.

LEAVE A REPLY

Please enter your comment!
Please enter your name here