ಡಾ.ಮೋಹನನಾರಾಯಣರಿಗೆ ರಾಷ್ಟೃಮಟ್ಟದ ಪ್ರಶಸ್ತಿ

0
252

ಉಜಿರೆ ಪ್ರತಿನಿಧಿ ವರದಿ
ಪಂಚಾಯ್ತಿ ರಾಜ್ ಕ್ಷೇತ್ರದಲ್ಲಿನ ವಿಶೇಷ ಸಾಧನೆ-ಸಂಶೋಧನೆ ಹಾಗೂ ಸಮರ್ಪಣಾ ಭಾವದ ಸೇವೆಯನ್ನು ಗುರುತಿಸಿ ಉಜಿರೆ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಮೊಹನನಾರಾಯಣ ಅವರು ರಾಷ್ಟ್ರಮಟ್ಟದ ಪ್ರತಿಷ್ಟಿತ ಭಾರತ ವಿಕಾಸ ಅವಾರ್ಡ್ ಹಿರಿಮೆಗೆ ಪಾತ್ರರಾಗಿದ್ದಾರೆ.
 
 
ಪಂಚಾಯ್ತಿ ರಾಜ್ ಸಬಲೀಕರಣದ ದಿಸೆಯಲ್ಲಿನ ಅವರ ಪ್ರಯೋಗ, ವಿನೂತನ ಬೋಧನಾ ವಿಧಾನ ಹಾಗೂ ನಾಗರೀಕ ಪ್ರಜ್ಞೆ ಮೂಡಿಸುವ ದಿಸೆಯಲ್ಲಿ ಅವರ ಪ್ರಯತ್ನ ಹಾಗೂ ಪುಸ್ತಕ ಪ್ರಕಟಣೆ ಮುಂತಾದ ಎಲ್ಲ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಮೋಹನನಾರಾಯಣರವರು ಅಯ್ಕೆಯಾಗಿದ್ದಾರೆ.
ಒಡಿಸ್ಸಾದ ಬುವನೇಶ್ವರದಲ್ಲಿ ಡಿ.10ರಂದು ನಡೆದ ರಾಷ್ಟ್ರಮಟ್ಟದ ಅರ್ಥಶಾಸ್ತ್ರ ಹಾಗೂ ಗ್ರಾಮೀಣಾಭಿವೃದ್ಧಿ ಕುರಿತ ಸಮಾವೇಶದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು.
 
 
ರಾಷ್ಟ್ರಮಟ್ಟದ ಇನ್ಸ್ಸ್ಟಿಟ್ಯುಟ್ ಅಫ್ ಸೆಲ್ಫ್ ರಿಲಾಯನ್ಸ್ ಸಂಸ್ಥೆಯು ಭಾರತ ವಿಕಾಸ ಪರಿಷತ್ನ ಸಹಯೋಗದಲ್ಲಿ ಈ ಸಮಾವೇಶ ಏರ್ಪಡಿಸಿತ್ತು ಹಾಗೂ ಪ್ರಶಸ್ತಿಯನ್ನು ಘೋಷಿಸಿತ್ತು. ವಿವಿಧ ಕ್ಷೇತ್ರದ ರಾಷ್ಟ್ರ-ಅಂತರಾಷ್ಟ್ರೀಯ ಗಣ್ಯರ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
 
 
ಬುವನೇಶ್ವರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಗೀತಾಂಜಲಿ ಅವರು ವರ್ಣರಂಜಿತ ಸಮಾರಂಭದಲ್ಲಿ ಮೋಹನನಾರಾಯಣರಿಗೆ ಪ್ರಶಸ್ತಿಯನ್ನು ವಿತರಿಸಿದರು.
 
 
ಪಂಚಾಯಿತಿ ರಾಜ್ ಗೆ ಸಂಬಂಧಿಸಿದಂತೆ ಡಾಕ್ಟರೇಟ್ ಪದವಿ ಗಳಿಸಿರುವ ಮೋಹನನಾರಾಯಣರು ಎರಡು ಕಿರು ಸಂಶೋಧನಾ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

LEAVE A REPLY

Please enter your comment!
Please enter your name here