ಡಬ್ಬಿಂಗ್ ಪರ ಸುಪ್ರೀಂ ಬ್ಯಾಟಿಂಗ್

0
5020

ರಾಷ್ಟ್ರೀಯ ಪ್ರತಿನಿಧಿ ವರದಿ
ಕರ್ನಾಟಕದಲ್ಲಿ ಕಾಣಿಸಿಕೊಂಡ ಡಬ್ಬಿಂಗ್ ವಿವಾದ ಈಗ ಬಂಗಾಳಕ್ಕೂ ಹರಡಿದೆ. ಆದರೆ ಸುಪ್ರೀಂಕೋರ್ಟ್ ಡಬ್ಬಿಂಗ್ ಸಿನಿಮಾಗಳ ಪರ ಬ್ಯಾಟಿಂಗ್ ಮಾಡಿದೆ. ಡಬ್ಬಿಂಗ್ ಸಿನಿಮಾ, ಸೀರಿಯಲ್ ತಡೆಯುವುದು ಸರಿಯಲ್ಲ. ಭಾಷೆ ರಕ್ಷಣೆ ಹೆಸರಲ್ಲಿ ಡಬ್ಬಿಂಗ್ ತಡೆಯುವುದು ಉಲ್ಲಮಘನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
 
ಸ್ಪರ್ಧಾತ್ಮಕ ಕಾಯಿದೆ 2002ರ ಉಲ್ಲಂಘನೆಯಾಗಿದೆ ಎಂದು ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ(ಸಿಸಿಐ) ಅರ್ಜಿ ವಿಚಾರಣೆ ವೇಳೆ ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎ.ಎಂ.ಸಪ್ರೆ ಪೀಠದ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಾಭಾರತ ಹಿಂದಿ ಸೀರಿಯಲ್ ಬಂಗಾಳಿಗೆ ಡಬ್ ಆಗಿತ್ತು. ಇದನ್ನು ಬಂಗಾಳಿ ಕಲಾವಿದರು, ತಂತ್ರಜ್ಞರು ವಿರೋಧಿಸಿದರು.
 
 
ಒತ್ತಡಕ್ಕೆ ಮಣಿದು 2 ಚಾನಲ್ ಗಳಿಂದ ಸೀರಿಯಲ್ ಸ್ಥಗಿತವಾಗಿತ್ತು. ಬಳಿಕ ಸಿಸಿಐಗೆ ಚಾನಲ್ ಗಲ ಮಾಲೀಕರು ದೂರು ನೀಡಿದ್ದರು. ಚಾನಲ್ ಮಾಲೀಕರಿಗೆ ಬೆದರಿಕೆ ಹಾಕಿರುವುದು ಕಾನೂನು ಉಲ್ಲಂಘನೆಯಾಗಿದೆ.

LEAVE A REPLY

Please enter your comment!
Please enter your name here