ಟೊಮೊಟೊ ಸೂಪ್‌

0
355

ವಾರ್ತೆ ರೆಸಪಿ
ಬೇಕಾದ ಪದಾರ್ಥಗಳು:

ಕತ್ತರಿಸಿದ ಈರುಳ್ಳಿ (15 ಗ್ರಾಂ), ಕತ್ತರಿಸಿದ ಬೆಳ್ಳುಳ್ಳಿ (5 ಗ್ರಾಂ), ಕತ್ತರಿಸಿದ ಈರುಳ್ಳಿ ದಿಂಡು (10 ಗ್ರಾಂ),
ಬೇಯಿಸಿ ಸಿಪ್ಪೆ ಸುಲಿದ ಟೊಮೆಟೊ (400 ಗ್ರಾಂ), ಬ್ಯಾಸಿಲ್ಎಲೆ (50 ಗ್ರಾಂ), ತರಕಾರಿ ಮಿಶ್ರಣ (300 ಗ್ರಾಂ), ಆಲೀವ್ ಎಣ್ಣೆ (20 ಎಂಎಲ್‌), ಕತ್ತರಿಸಿದ ಸೆಲರಿ ಸೊಪ್ಪು (10 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ವಿಧಾನ:

ಗಟ್ಟಿ ತಳವಿರುವ ಬಾಣಲೆಗೆ ಒಂದು ಚಮಚ ಆಲೀವ್ ಎಣ್ಣೆ ಹಾಕಿ. ಎಣ್ಣೆ ಹೊಗೆಯಾಡದಂತೆ ಹದವಾದ ಉರಿಯಲ್ಲಿ ಬಿಸಿಮಾಡಿ. ನಂತರ ಬೆಳ್ಳುಳ್ಳಿ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಬೆಳ್ಳುಳ್ಳಿ ಪರಿಮಳ ಬೀರುವಾಗ ಕತ್ತರಿಸಿಟ್ಟುಕೊಂಡ ಈರುಳ್ಳಿ, ಈರುಳ್ಳಿ ದಿಂಡು, ಸೆಲರಿ ಸೊಪ್ಪು ಹಾಗೂ ಒಂದು ಲವಂಗದ ಎಲೆಯನ್ನು ಸೇರಿಸಿ ಮಿಶ್ರಣವನ್ನು ಎಣ್ಣೆಯಲ್ಲಿ ಮೆತ್ತಾಗಾಗುವವರೆಗೆ ಹುರಿಯಿರಿ.
ನಂತರ ಸಿಪ್ಪೆ ಸುಲಿದ ಟೊಮೆಟೊಗಳನ್ನು ಬಾಣಲೆಗೆ ಹಾಕಿ ತರಕಾರಿ ಮಿಶ್ರಣವನ್ನು ಸೇರಿಸಬೇಕು. ಟೊಮೆಟೊ ಜೊತೆಗೆ ಇವೆಲ್ಲವೂ ಸರಿಯಾಗಿ ಬೆರೆಯುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಬೇಕು. ನಂತರ ಅದಕ್ಕೆ ಸರಿಹೊಂದುವಷ್ಟು ನೀರು, ಉಪ್ಪು, ಮಸಾಲೆ ಮತ್ತು ಕತ್ತರಿಸಿಟ್ಟುಕೊಂಡ ಬ್ಯಾಸಿಲ್ಎಲೆಯನ್ನು ಹಾಕಿದರೆ ಘಮಘಮಿಸುವ ಟೊಮೆಟೊ ಸೂಪ್ಸವಿಯಲು ರೆಡಿ.

LEAVE A REPLY

Please enter your comment!
Please enter your name here