ಟೊಮೆಟೊ  ಸೇವ್ ಪೂರಿ

0
603

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಈರುಳ್ಳಿ 2, ಕ್ಯಾರೆಟ್ 1, ಟೊಮೆಟೊ 3-4, ದುಂಡು ಮೆಣಸಿನ ಕಾಯಿ 1, ಸೇವ್ ಪುರಿ 7-8, ಚಾಟ್ ಮಸಾಲ1 ಚಮಚ,  ಜೀರಿಗೆ 1 ಚಮಚ, ಕೆಂಪು ಮೆಣಸಿನ ಪುಡಿ 1ಚಮಚ, ಅಮೆಚ್ಯೂರ್ ಅರ್ಧ ಚಮಚ, ನಿಂಬೆರಸ 1 ಚಮಚ, ಸೇವ್ 5 ಚಮಚ, ರುಚಿಗೆ ತಕ್ಕ ಉಪ್ಪು, ಕೊತ್ತಂಬರಿ ಸೊಪ್ಪು.
 
 
 
ತಯಾರಿಸುವ ವಿಧಾನ:
ಬಟ್ಟಲಿನಲ್ಲಿ ಈರುಳ್ಳಿ, ಕ್ಯಾರೆಟ್, ದುಂಡು ಮೆಣಸಿನಕಾಯಿ ಇವುಗಳನ್ನು ಮಿಶ್ರಣ ಮಾಡಬೇಕು. ನಂತರ ಕೆಂಪು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು, ಜೀರಿಗೆ, ಅಮೆಚ್ಯೂರ್ ಹಾಗೂ ತರಕಾರಿಗಳನ್ನು ಹಾಕಿ ಮಿಶ್ರ ಮಾಡಬೇಕು. ಒಂದು ಟೊಮೆಟೊವನ್ನು 4 ತಂಡುಗಳಂತೆ ಎಲ್ಲಾ ಟೊಮೆಟೊವನ್ನು ಕತ್ತರಿಸಬೇಕು. ಈಗ ಸೇವ್ ಪುರಿ ತುಂಡುಗಳನ್ನು ಹಾಗೂ ಸೇವ್ಸ್ ಹಾಕಿ ಕೈಯಿಂದ ಮಿಶ್ರಣ ಮಾಡಬೇಕು. ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಹಾಗೂ ಹಾಗೂ ಸೇವ್ ಉದುರಿಸಿ ಮಿಶ್ರಣ ಮಾಡಿ ನಂತರ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು. ನಂತರ ಇದನ್ನು ಟೊಮೆಟೊ ತುಂಡಿನ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

LEAVE A REPLY

Please enter your comment!
Please enter your name here