ಟೊಮೆಟೊ ದೋಸೆ

0
261

 
ವಾರ್ತೆ ರೆಸಿಪಿ: ಲೇಖಾ
ಬೇಕಾಗುವ ಸಾಮಗ್ರಿಗಳು: 
ಸಾದಾ ಅಕ್ಕಿ- 2 ಕಪ್, ಟೊಮೆಟೊ- 3, ಬ್ಯಾಡಗಿ ಮೆಣಸು -4-5, ಇಂಗು- 2 ಚಿಟಿಕೆ, ತೆಂಗಿನತುರಿ -ಸ್ವಲ್ಪ, ಕರಿಬೇವು -ಸ್ವಲ್ಪ, ರುಚಿಗೆ ತಕ್ಕಷ್ಟು -ಉಪ್ಪು
ಎಣ್ಣೆ- ಸ್ವಲ್ಪ.
 
 
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ನೀರಿನಲ್ಲಿ 1 ಗಂಟೆ ನೆನೆಸಿಡಿ. ನಂತರ ಅಕ್ಕಿ ಜೊತೆ ಕತ್ತರಿಸಿದ ಟೊಮೆಟೊ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ಹಿಟ್ಟಿಗೆ ಉಪ್ಪು, ಸಣ್ಣಗೆ ಹೆಚ್ಚಿದ ಕರಿಬೇವು, ತೆಂಗಿನತುರಿ, ಇಂಗು ಮತ್ತು ನೀರು ಹಾಕಿ ಚೆನ್ನಾಗಿ ಕಲೆಸಿ (ಇದು ನೀರು ದೋಸೆಯ ಹಿಟ್ಟಿನಷ್ಟು ತೆಳುವಾಗಿರಬೇಕು). ನೀರು ದೋಸೆ/ ರವೆ ದೋಸೆಯಂತೆ ಹಿಟ್ಟನ್ನು ಕಾವಲಿ ಮೇಲೆ ಸುರಿಯಿರಿ. ಬೇಕಿದ್ದರೆ ಸ್ವಲ್ಪ ಎಣ್ಣೆ ಹಾಕಬಹುದು. ದೋಸೆ ಕ್ರಿಸ್ಪ್ ಆದ ಬಳಿಕ ಒಂದು ಪ್ಲೇಟ್ ಗೆ ಹಾಕಿ.
 
ಬಿಸಿಬಿಸಿ ಟೊಮೆಟೊ ದೋಸೆ ಈರುಳ್ಳಿ ಅಥವಾ ಶುಂಠಿ ಚಟ್ನಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

LEAVE A REPLY

Please enter your comment!
Please enter your name here