ಟೊಗೊದ ಕಾರಾಗೃಹದಿಂದ ಭಾರತೀಯರ ಬಿಡುಗಡೆ

0
345

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಶ್ಚಿಮ ಆಫ್ರಿಕಾ ರಾಷ್ಟ್ರವಾದ ಟೊಗೊದಲ್ಲಿ ಕಾರಾಗೃಹದಲ್ಲಿದ್ದ ಭಾರತೀಯರ ಬಿಡುಗಡೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
 
 
 
ಟೊಗೊದ ಜೈಲಿನಲ್ಲಿ ಬಂಧಿತರಾಗಿದ್ದ ಕೇರಳ ಮೂಲದ ಭಾರತೀಯರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ನಾವು ಸಫಲರಾಗಿದ್ದೇವೆ. ಅಕ್ರಾದಲ್ಲಿನ ಭಾರತೀಯ ಮಿಷನ್ ಮತ್ತು ಟೊಗೊದ ದೂತವಾಸಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
 
 
ವ್ಯಾಪಾರಿ ನೌಕಾಪಡೆಯಲ್ಲಿ ಉದ್ಯೋಗದಲ್ಲಿದ್ದ ಐವರು ಭಾರತೀಯರನ್ನು 2013ರಲ್ಲಿ ಟೊಗೊದ ತೀರಭಾಗದಲ್ಲಿ ಕಡಲ್ಗಳ್ಳತನ ದಾಳಿಯಲ್ಲಿ ಭಾಗಿಯಾಗಿದ್ದರ ಶಂಕೆಯ ಮೇಲೆ ಬಂಧಿತರಾಗಿದ್ದರು. ಅವರು ಬಂಧಿತರಾಗುವ ವೇಳೆಗೆ ಮುಂಬೈಯಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳುವ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು.

LEAVE A REPLY

Please enter your comment!
Please enter your name here