ಟೈಪ್ 2 ಮಧುಮೇಹ ತಡೆಗಟ್ಟಲು ಸುಲಭ ಉಪಾಯಗಳು

0
334

ಅಂಕಣ: ಡಾ.ಸತೀಶ ಶಂಕರ್ ಬಿ
1)ಬೊಜ್ಜು ಇದ್ದವರಿಗೆ ಟೈಪ್-2 ಮಧುಮೇಹ ಬೇಗನೇ ಕಾಣಿಸುವುದು. ಬೊಜ್ಜು ಹತೋಟಿಗೆ ಬಂದರೆ ಮಧುಮೇಹವೂ ಹತೋಟಿಗೆ ಬರುವುದು. ಮುಖ್ಯವಾಗಿ ವಾರದ 5 ದಿನ ಬೆಳಿಗ್ಗೆ ನಿತ್ಯವೂ 30 ನಿಮಿಷ ಬೇಗದ ನಡಿಗೆಯಿಂದ ಹತೊಟಿಗೆ ಬರುತ್ತದೆ.
 
 
2)ಆಯುರ್ವೇದದಲ್ಲಿ ತಿಳಿಸಲಾದ ದಿನಚರ್ಯವನ್ನು ಪಾಳಿಸಿ ಮುಂಜಾನೆ ಬೇಗ ಏಳುವುದು, ನಿತ್ಯವೂ ವ್ಯಾಯಾಮ, ಅಭ್ಯಂಗ ಮತ್ತು ಪ್ರಮುಖವಾಗಿ ಮನಸ್ಸಿನ ಆರೋಗ್ಯಕ್ಕೆ ಪ್ರಾಧ್ಯಾನತೆ ಮಾನಸಿಕ ಒತ್ತಡದಿಂದ ದೂರವಿರಲು ಅಗತ್ಯಕ್ರಮಗಳು.
 
 
3)ತಾಜಾ ಹಣ್ಣುಗಳನ್ನು ಸೇವಿಸಿ. ಆದರೆ ಹಣ್ಣಿನ ಜ್ಯೂಸ್ ಮಿತವಾಗಿ ಬಳಸಿ. ಮಧುಮೇಹ ಇರುವವರು ಹಣ್ಣಿನ ಜ್ಯೂಸ್ ಸೇವಿಸಬಾರದು.
 
4)ಯೋಗಾಸನ: ನಿತ್ಯವೂ ಮಾಡುವುದು.
ಅ)ಪಶ್ಚಿಮೋತ್ಥಾಸನ
ಆ)ವಕ್ರಾಸನ
ಇ)ಭುಜಂಗಾಸನ
ಈ)ಅರ್ಧಮತ್ಯೆಂದ್ರಾಸನ
ಉ) ಧನುರಾಸನ-ಈ ಯೋಗಸನದಿಂದ ಮಧುಮೇಹವನ್ನು ತಡೆಯಬಹುದು.
 
 
5) ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಸಾಫ್ಟ್ ಡ್ರಿಂಕ್ಸ್ ನಿಂದ ದೂರವಿರಿ. ತಾಜಾ ಎಳನೀರು ಆರೋಗ್ಯಕ್ಕೆ ಉತ್ತಮ. ಇದು ಮೂತ್ರಕೋಶದ ಕಲ್ಲು ಮೂತ್ರಕೋಶದ ಕಾಯಿಲೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಬೇಸಿಗೆಯಲ್ಲಿ ಇದು ದೇಹಕ್ಕೆ ತಂಪು. ಇದರಿಂದ ನಮ್ಮ ದೇಶದ ರೈತರಿಗೂ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ತಂಪು ಪಾನೀಯಗಳ ಬದಲಿಗೆ ತಾಜಾ ಎಳನೀರು ಸೇವಿಸಿ ಇದು ಆರೋಗ್ಯಕ್ಕೆ ಅತ್ಯುತ್ತಮ .
ಡಾ.ಸತೀಶ ಶಂಕರ್ ಬಿ
[email protected]

LEAVE A REPLY

Please enter your comment!
Please enter your name here