ಟೇಸ್ಟಿ ಚೀಸ್ ಪರೋಟಾ

0
373

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು :
2 ಕಪ್ ಗೋಧಿ ಹಿಟ್ಟು, 1 ಕಪ್ ತುರಿದ ಚೀಸ್, 1 ಟೇಬಲ್ ಚಮಚ ಮೆಣಸಿನ ಪುಡಿ, ರುಚಿಗೆ ಉಪ್ಪು, ಹಿಡಿ ಕೊತ್ತಂಬರಿ ಸೊಪ್ಪು, 2-3 ಚಮಚ ಎಣ್ಣೆ, 4-8 ಚಮಚ ತುಪ್ಪ.
 
 
ತಯಾರಿಸುವ ವಿಧಾನ:
ಒಂದು ಬಟ್ಟಲಿಗೆ ತುರಿದ ಚೀಸ್, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಇಟ್ಟುಕೊಳ್ಳಿ. ಇನ್ನೊಂದು ಬಟ್ಟಲಿಗೆ ಚಪಾತಿ ಹಿಟ್ಟಿನ ಹದಕ್ಕೆ ಗೋಧಿಹಿಟ್ಟನ್ನು ಕಲೆಸಿ. ಚಿಕ್ಕ ಉಂಡೆ ತೆಗೆದುಕೊಂಡು ಅದರೊಳಗೆ ಚೀಸ್ ಹೂರಣ ತುಂಬಿ ಎಣ್ಣೆ ಹಚ್ಚಿ ಲಟ್ಟಿಸಿ, ಕಾದ ಹಂಚಿನ ಮೇಲೆ ಹಾಕಿ ತುಪ್ಪ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿ. ಗಟ್ಟಿ ಮೊಸರಿನೊಂದಿಗೆ ಸವಿಯಲು ಕೊಡಿ.

LEAVE A REPLY

Please enter your comment!
Please enter your name here