ಟೀಂ ಇಂಡಿಯಾಕ್ಕೆ ದಿಗ್ವಿಜಯ

0
292

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ದೊರಕಿದೆ. ಕಾನ್ಪುರ್ ದ ಮೊದಲ ಟೆಸ್ಟ್ ನ್ಲಲೇ ಭಾರತಕ್ಕೆ ಭರ್ಜರಿ ಜಯವಾಗಿದೆ.
 
 
ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಜಯ ಗಳಿಸಿದೆ. ವಿರಾಟ್ ಕೊಹ್ಲಿ ಪಡೆ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಭಾರತದ ಸ್ಪಿನ್ ಮೋಡಿಗೆ ಕಿವೀಸ್ ಪಡೆ ತತ್ತರಿಸಿದೆ. ಅಶ್ವಿನ್, ಜಡೇಜ ಜುಗಲ್ ಬಂದಿಗೆ ಕಿವೀಸ್ ಉಡೀಸ್ ಆಗಿದೆ.
 
2ನೇ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 236 ರನ್ ಗೆ ಆಲೌಟ್ ಆಗಿದೆ. ಪ್ರಥಮ ಟೆಸ್ಟ್ ನಲ್ಲಿ ಟೀಂ ಇಂಡಿಯಾಗೆ 197 ರನ್ ಗಳ ಜಯ ದೊರಕಿದೆ.
 
 
ಅಶ್ವಿನ್ 6, ಜಡೇಜ 1, ಮೊಹಮದ್ ಶಮಿಗೆ 2 ವಿಕೆಟ್ ದೊರಕಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ಸಿಕ್ಕಿದೆ.
 
ಭಾರತ ಮೊದಲ ಇನಿಂಗ್ಸ್ ನಲ್ಲಿ 10 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದೆ. ನ್ಯೂಜಿಲೆಂಡ್ 10ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿದೆ.
ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿದ್ದು, ನ್ಯೂಜಿಲೆಂಡ್ 236 ರನ್ ಗಳಿಸಿ ಅಲೌಟ್ ಆಗಿದೆ.

LEAVE A REPLY

Please enter your comment!
Please enter your name here