ಟಿ.ವಿ ಉಗಮದ ಮೆಲುಕು

0
480

ಉಜಿರೆ ಪ್ರತಿನಿಧಿ ವರದಿ
ಭಾರತದಲ್ಲಿ ಟಿ.ವಿ ಉಗಮವಾಗಿ 57 ವರ್ಷ ಸಂದಿದೆ. ಇದರ ಸವಿ ನೆನಪಿಗಾಗಿ ಎಸ್ಡಿಎಂ ಸ್ನಾತಕೋತ್ತರ ಅಧ್ಯಯನ ಕೆಂದ್ರದ ಆಯ್ಕೆ ಆಧಾರಿತ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾರತದಲ್ಲಿ ಟೆಲಿವಿಷನ್ ಉಗಮ ದಿನವನ್ನು ಕಪ್ಪು-ಬಿಳುಪು ಉಡುಗೆ ತೊಡುವುದರ ಮೂಲಕ ನೆನಪಿಸಿದರು.
 
 
ತರಗತಿಯಲ್ಲಿ ದಿನದ ವಿಶೇಷತೆಯ ಬಗ್ಗೆ ರಸಾಯನ ಶಾಸ್ತ್ರದ ವಿದ್ಯಾರ್ಥಿನಿ ಸುಮಲತಾ ಎಂ. ಎಸ್. ಮಾತನಾಡುತ್ತಾ, 1959 ಸೆಪ್ಟೆಂಬರ್ 15ರಂದು ಭಾರತದಲ್ಲಿ ಟಿಲಿವಿಷನ್ ಆರಂಭವಾಯಿತು. ಪ್ರತಿಮಾ ಪುರಿ ಮೊದಲ ನಿರೂಪಕಿಯಾಗಿದ್ದರು. ಮನೋರಂಜನೆಯೊಂದಿಗೆ ಮಾಹಿತಿ ನೀಡುವ ಸಲುವಾಗಿ ಪ್ರಾರಂಭವಾದ ಟಿಲಿವಿಷನ್ ಇಂದು ನೂರಾರು ವಾಹಿನಿಗಳೊಂದಿಗೆ ಅಗಾಧಾವಾಗಿ ಬೆಳೆಯುತ್ತಿದೆ ಎಂದು ವಿವರಣೆ ನೀಡಿದರು.
 
 
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಎಂ.ವೈ ಮಂಜುಳಾ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಪರಶುರಾಮ ಕಾಮತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

LEAVE A REPLY

Please enter your comment!
Please enter your name here