ಟಿ. ಆರ್. ನಾವಡರಿಗೆ ಶ್ರದ್ದಾಂಜಲಿ

0
306

ವರದಿ: ಸುನೀಲ್ ಬೇಕಲ್
ಸತ್ಯವಾದಿಯೂ, ನಿಷ್ಠುರವಾದಿಯೂ ಆದ ಎಲ್ಲರಿಗೂ ಗುರುಸದೃಶರಾಗಿದ್ದ ಟಿ. ರಾಮಚಂದ್ರ ನಾವಡರು ಸಾರ್ಥಕ ಬದುಕನ್ನು ನಡೆಸಿದ್ದಾರೆ. ಅವರ ಸೇವಾ ಮನೋಧರ್ಮ ಮತ್ತು ತ್ಯಾಗದಿಂದ ಕಲ್ಪವೃಕ್ಷ ಸದೃಶದ ಆದರ್ಶ ಜೀವನ ನಡೆಸಿ ಎಲ್ಲರ ಪ್ರೀತಿ – ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು.
 
 
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಲಾದ ನಾವಡರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ತೀಕ್ಷ್ಣಮತಿಯೂ, ಸೂಕ್ಷ್ಮಮತಿಯೂ ಆಗಿದ್ದ ನಾವಡರು ಸುಸಂಸ್ಕೃತ ನಡೆ-ನುಡಿಯಿಂದ ಎಲ್ಲರಿಗೂ ಗುರುಸದೃಶರಾಗಿದ್ದರು ಎಂದು ಅವರು ಹೇಳಿದರು.
 
ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಮಾತನಾಡಿ ಎಲ್ಲರನ್ನೂ ಹೃದಯದಿಂದ ಪ್ರೀತಿಸುತ್ತಿದ್ದ ನಾವಡರು ಎಲ್ಲರಿಗೂ ಆತ್ಮೀಯರಾಗಿದ್ದರು ಎಂದು ಹೇಳಿದರು.
 
ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ ತ್ಯಾಗ, ಸೇವೆ ಮತ್ತು ಕರ್ತವ್ಯ ಬದ್ಧತೆಯಲ್ಲಿ ನಾವಡರು ತಾರಾ ಮೌಲ್ಯ ಹೊಂದಿದ್ದರು. ಕುಟುಂಬದ ಸದಸ್ಯನಂತೆ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here