ಟಾಪ್ ಎಂಟರ್‍ಟ್ರೈನರ್ಸ್ ಡ್ಯಾನ್ಸ್ ಅಕಾಡೆಮಿ”ಯಿಂದ ನೃತ್ಯ ಪ್ರದರ್ಶನ!

0
571

ಮೂಡುಬಿದಿರೆಯ ಯುವ ಕೊರಿಯೋಗ್ರಾಫರ್ ಆಗಿದ್ದ ಕಿರಣ್ ಕೋಟ್ಯಾನ್ ಅವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ “ಟಾಪ್ ಎಂಟರ್‍ಟ್ರೈನರ್ಸ್ ಡ್ಯಾನ್ಸ್ ಅಕಾಡೆಮಿ”ಯು 1994 ರಲ್ಲಿ ಮೂಡುಬಿದಿರೆಯ ಶ್ರೀ ಗುರುನಾರಾಯಣ ಸೇವಾ ಸಂಘದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿದ್ದು ಸಾವಿರಾರು ನೃತ್ಯಪಟುಗಳನ್ನು ಸಮಾಜಕ್ಕೆ ನೀಡಿದ ಕೀರ್ತಿಗೆ ಪಾತ್ರವಾಗಿದೆ 1995 ರಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡ ರೂಪೇಶ್ ಕುಮಾರ್ ಅಲ್ಲಿನ ಅತ್ಯುತ್ತಮ ನೃತ್ಯಪಟುವಾಗಿ ರೂಪುಗೊಂಡ ವಿಶೇಷ ಪ್ರತಿಭೆ. ಸ್ಥಾಪಕ ನಿರ್ದೇಶಕರಾದ ಕಿರಣ್ ಕೋಟ್ಯಾನ್‍ರವರು 2005ರಲ್ಲಿ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದರಿಂದ ಸಂಸ್ಥೆಯ ಸಂಪೂರ್ಣ ಹೊಣೆಗಾರಿಕೆಯನ್ನು ರೂಪೇಶ್ ಕುಮಾರ್ ಅವರಿಗೆ ಒಪ್ಪಿಸುತ್ತಾರೆ.
ಪ್ರಾರಂಭದಲ್ಲಿ ಮೂಡುಬಿದಿರೆ, ಕಾರ್ಕಳ, ಉಜಿರೆಯಲ್ಲಿ ಮಾತ್ರ ನೃತ್ಯ ತರಬೇತಿ ನಡೆಯುತ್ತಿದ್ದು ಸಂಸ್ಥೆಯ ಸಾರಥ್ಯವನ್ನು ರೂಪೇಶ್ ಕುಮಾರ್ ವಹಿಸಿಕೊಂಡ ನಂತರ ಸುತ್ತ ಮುತ್ತಲಿನ ಊರುಗಳಲ್ಲಿ ಶಾಖೆಗಳನ್ನು ತೆರೆದು ತರಬೇತಿ ನೀಡಲಾರಂಭಿಸಿದರು, ನಂತರ ಶಾಖೆಗಳಿಗೆ ಕೂಡಾ ತೆರಳಿ ಅಲ್ಲಿಯೆ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ಒದಗಿಸಲಾಗುತ್ತಿತ್ತು. ಇದೀಗ ಮೂಡಬಿದಿರೆ ಸಹಿತ ಕಾರ್ಕಳ, ವೇಣೂರು, ಉಜಿರೆ, ಧರ್ಮಸ್ಥಳ, ಕೊಯ್ಯೂರು, ಬೈಪಾಡಿ, ನಾರಾವಿ, ಸಿದ್ಧಕಟ್ಟೆ ಮತ್ತು ಎಡಪದವು ಊರುಗಳಲ್ಲಿ ನಮ್ಮ ಕೇಂದ್ರಗಳು ಕಾರ್ಯಚರಿಸುತ್ತಿದ್ದು, ಇಲ್ಲಿ ಈಗ ಸುಮಾರು ಒಂದು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ತರಬೇತಿಯನ್ನು ಪಡೆಯುತ್ತಿದ್ದಾರೆ. ಇದರ ಜೊತೆಗೆ ಆಯ್ದ ಹನ್ನೆರಡು ಶಾಲೆಗಳಲ್ಲಿ ಮೂರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳನ್ನು ಬೇರೆ ಬೇರೆ ವಿಭಾಗದ ನೃತ್ಯಪಟುಗಳನ್ನಾಗಿ ರೂಪಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಅಲ್ಲದೇ ಇನ್ನಿತರ ಹಲವಾರು ಸಂಘ ಸಂಸ್ಥೆಗಳ ಆಶ್ರಯದಲ್ಲಿಯು ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ತರಬೇತಿ ಪಡೆದುಕೊಂಡಿರುವ ಸಾವಿರಕ್ಕೂ ಮಿಕ್ಕಿದ ಪ್ರತಿಭೆಗಳು ಇದೀಗ ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.


ಪ್ರಾರಂಭದಿಂದ ಇಂದಿನ ತನಕ ಈ ತಂಡ ನಾಲ್ಕು ಸಾವಿರಕ್ಕೂ ಮಿಕ್ಕಿದ ನೃತ್ಯ ಪ್ರದರ್ಶನಗಳನ್ನು ನೀಡಿದೆ, ರಾಜ್ಯ ಮಟ್ಟದ ಅಧಿಕ ನೃತ್ಯ ಸ್ಪರ್ಧೆಗಳಲ್ಲಿ 150ಕ್ಕೂ ಮಿಕ್ಕಿದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಕರ್ನಾಟಕದ ವಿವಿಧೆಡೆಗಳಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧೆಡೆಗಳಲ್ಲೂ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಈ ತಂಡಕ್ಕಿದೆ. ಸೋನಿ ಟಿವಿ, ಜೆಮಿನಿ ಟಿವಿ, ಉದಯ ಟಿವಿ, ನಮ್ಮ ಟಿವಿ ಗಳಲ್ಲದೆ ಎಲ್ಲಾ ಸ್ಥಳೀಯ ಚಾನಲ್‍ಗಳಲ್ಲಿ ಇವರ ನೃತ್ಯ ಕಾರ್ಯಕ್ರಮಗಳು ಪ್ರಸಾರಗೊಂಡಿವೆ.
ಈ ಸಂಸ್ಥೆ ಪ್ರತೀ ತಿಂಗಳು 800ಕ್ಕೂ ಹೆಚ್ಚು ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಾ ಬಂದಿದೆ. ಆರ್ಥಿಕ ವಾಗಿ ಹಿಂದುಳಿದಿರುವ ವಿಧ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ. ಟಾಪ್ ಎಂಟಟೈನರ್ಸ್ ಪ್ರತೀ ವರ್ಷ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ. ಈ ಸಂಸ್ಥೆ ಹಲವು ನೃತ್ಯ ಪ್ರಕಾರಗಳನ್ನು ಮಕ್ಕಳಿಗೆ ತರಬೇತಿ ನೀಡುತ್ತಿದೆ. ವಿಶೇಷ ಪ್ರತಿಭೆ ಗಳಿಗೆ ಹಲವು ವರ್ಷಗಳಿಂದ ನೃತ್ಯ ಸ್ಪರ್ಧೇಗಳನ್ನು ಆಯೋಜಿಸುತ್ತಾ ಬಂದಿದೆ. ಈ ಸಂಸ್ಥೆಯ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಮೂಡುಬಿದಿರೆಯ ಪ್ರಪ್ರಥಮ ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ನೃತ್ಯ ತರಬೇತಿ ಕೇಂದ್ರವಿರುವ ಈ ಡ್ಯಾನ್ಸ್ ಅಕಾಡೆಮಿಯಲ್ಲಿ ಈಗ ಹನ್ನೆರಡು ಜನ ಕೋರಿಯೋಗ್ರಾಫರ್‍ಗಳು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಶ್ಚಾತ್ಯ ಶೈಲಿಯ ನೃತ್ಯಗಳ ಬಗ್ಗೆ ಈಗಿನ ಯುವ ಸಮುದಾಯಕ್ಕೆ ಹೆಚ್ಚಿನ ಆಕರ್ಷಣೆಯಿದ್ದರೂ, ಈ ಎಲ್ಲ ನೃತ್ಯ ಪ್ರಕಾರಗಳಲ್ಲಿ ಭಾರತೀಯ ಸಂಸ್ಕøತಿಯನ್ನು ಬಿಂಬಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಈ ಸಂಸ್ಥೆಯ ವಿಶೇಷತೆಯಾಗಿದೆ. ಇಲ್ಲಿ ಫಿಲ್ಮೀ ಡ್ಯಾನ್ಸ್, ಫ್ಯೂಷನ್, ವೆಸ್ಟರ್ನ್, ಕಾಂಟೆಂಪೊರರಿ, ಬಾಲಿವುಡ್ ಸ್ಟೈಲ್, ಹಿಪ್‍ಹಾಪ್, ಇಂಡಿಯನ್ ಫ್ರೀ ಸ್ಟೈಲ್, ದಕ್ಷಿಣ ಭಾರತೀಯ ಸಿನಿಮಾ ಜಾನಪದ, ಬ್ರೇಕ್ ಡ್ಯಾನ್ಸ್, ಮತ್ತು ಶಾರೀರಿಕ ವ್ಯಾಯಾಮಗಳನ್ನು ಕಲಿಸಲಾಗುತ್ತದೆ. ಇದರ ಜೊತೆಯಲ್ಲಿ ಯುವಕ, ಯುವತಿಯರಿಗಾಗಿ ಫಿಟ್‍ನೆಸ್ ತರಬೇತಿ ಮತ್ತು ಮಕ್ಕಳಿಗಾಗಿ ಡ್ರಾಯಿಂಗ್ ಮತ್ತು ಪೈಂಟಿಂಗ್ ಹಾಗೂ ಕರ್ನಾಟಕ ಸಂಗೀತದ ತರಗತಿಗಳೂ ನಡೆಯುತ್ತವೆ. ಬೃಹತ್ ಕಾರ್ಯಕ್ರಮಗಳ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಈ ಸಂಸ್ಥೆಯು ಸಮರ್ಥವಾಗಿ ನಿಭಾಯಿಸುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಮಿಕ್ಕಿದ ನೃತ್ಯ ಪ್ರದರ್ಶನಗಳನ್ನು ನೀಡಿ ದಾಖಲೆ ನಿರ್ಮಿಸಿರುವ ನೃತ್ಯ ಅಕಾಡೆಮಿಯು ಕಳೆದ ಹದಿನೈದು ವರ್ಷಗಳಿಂದ ಮೂಡುಬಿದಿರೆಯಲ್ಲಿ ಪ್ರತಿ ವರ್ಷ “ರಿದಂ” ಅನ್ನುವ ಅತೀ ದೊಡ್ಡ ಕಾರ್ಯಕ್ರಮವನ್ನು ಸಂಘಟಿಸುತ್ತಾ ಬಂದಿದೆ. ಈಗ ಈ ಸಂಸ್ಥೆ ಅನೇಕ ಕಾರ್ಯಕ್ರಮದ ನಿರ್ವಹಣೆಯನ್ನು ಕೂಡ ಮಾಡುತ್ತಾ ಬಂದಿದೆ. ಮೂಡಬಿದಿರೆಯ ಸಾಂಸ್ಕøತಿಕ ವಲಯದಲ್ಲಿ ಜನಪ್ರಿಯವಾಗಿರುವ ಈ ಕಾರ್ಯಕ್ರಮ ಸಾವಿರಾರು ಜನರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಹೊಸ ಪ್ರತಿಭೆಗಳ ಜೊತೆ ನುರಿತ ನೃತ್ಯ ಪಟುಗಳ ವೈವಿಧ್ಯಮಯ ಕಾರ್ಯಕ್ರಮಗಳು ಜನತೆಯ ಮನಸೂರೆಗೊಂಡಿವೆ. ಸಂಸ್ಥೆಗೆ ಇಪ್ಪತ್ತೈದು ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಈ ವರ್ಷದ “ರಿದಂ” ಸಾಂಸ್ಕøತಿಕ ನೃತ್ಯೋತ್ಸವವು ಡಿಸೆಂಬರ್ 29, 2018 ಅದ್ದೂರಿಯಲ್ಲಿ ನಡೆಯಲಿದ್ದು ಪ್ರಖ್ಯಾತ ನೃತ್ಯಪಟುಗಳು, ನಾಟಕ ಕಲಾವಿದರು, ಕಿರುತೆರೆ, ಮತ್ತು ಚಿತ್ರರಂಗದ ಕಲಾವಿದರು ಈ ಸಮಾರಂಭಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ.

LEAVE A REPLY

Please enter your comment!
Please enter your name here