ಟಯರ್ ಸ್ಫೋಟ: ಮಹಿಳೆ ಸಾವು

0
445

ವಿಜಯಪುರ ಪ್ರತಿನಿಧಿ ವರದಿ
ಚಲಿಸುತ್ತಿದ್ದ ಲಾರಿ ಟಯರ್ ಸ್ಫೋಟಗೊಂಡ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರ್ ಬ್ರಿಡ್ಜ್ ಬಳಿ ನಡೆದಿದೆ. ಮನೆ ಬಳಿ ಸ್ನಾನ ಮಾಡುತ್ತಿದ್ದ ಮಹಿಳೆ, ಬಾಲಕಿಗೆ ಲಾರಿ ಡಿಕ್ಕಿಯಾಗಿದೆ.
 
 
 
ಇದರಿಂದ ಮಹಿಳೆ ಸ್ಥಳಾದಲ್ಲೇ ಸಾವನ್ನಪ್ಪಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಸ್ರೀನ್ ಹಸನ್ ಶಿರೂರ್(32) ಸ್ಥಳದಲ್ಲೇ ದುರ್ಮರಣ ಹೊಂದಿದ್ದ ದುರ್ದೈವಿಯಾಗಿದ್ದಾರೆ. ಅಂತಿಯಾ ಶಿರೂರ್(8) ಗಾಯಗೊಂಡ ಬಾಲಕಿಯಾಗಿದೆ.
 
 
ಮಹಿಳೆ ಮತ್ತು ಬಾಲಕಿಗೆ ಡಿಕ್ಕಿಯಾದ ಬಳಿಕ ಲಾರಿ ಪಲ್ಟಿಯಾಗಿದೆ. ಅಪಘಾತದ ಬಳಿಕ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here