ಜ.7ರಿಂದ 'ಪ್ರವಾಸಿ ದಿವಸ್' ಆರಂಭ

0
312

ಬೆಂಗಳೂರು ಪ್ರತಿನಿಧಿ ವರದಿ
ಬೆಂಗಳೂರಿನಲ್ಲಿ ‘ಪ್ರವಾಸಿ ದಿವಸ್’ ಆಚರಣೆಗೆ ಸಕಲ ತಯಾರಿ ನಡೆಯುತ್ತಿದೆ. ಜನವರಿ 7,8,9ರಂದು ಪ್ರವಾಸಿ ದಿವಸ್ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 8ರಂದು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
 
 
 
ಬೆಂಗಳೂರಿನಲ್ಲಿ ಜನವರಿ 7ರಂದು ಕೇಂದ್ರ ರಕ್ಷಣಾ ಸಚಿವ ಪರಿಕ್ಕರ್ ಭೇಟಿ ನೀಡಲಿದ್ದಾರೆ. ಜನವರಿ 9ಕ್ಕೆ ರಾಷ್ಟ್ರಪತಿಯವರು ಕಾರ್ಯಕ್ರಮವನ್ನು ಸಮಾರೋಪಗೊಳಿಸಲಿದ್ದಾರೆ.
 
 
 
‘ಪ್ರವಾಸಿ ದಿವಸ್’ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಮೂರು ಸಾವಿರಕ್ಕೂ ಅಧಿಕ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here