ಜ್ಯೋತಿಷಿಗಳು ಬಾಲಕನಿಗೆ ಉದ್ಧಂಡವಾಗಿ ನಮಸ್ಕರಿಸಿದರು…

0
1036

ನಿತ್ಯ ಅಂಕಣ: ೩೫ (ನಿನ್ನೆಯ ಸಂಚಿಕೆಯ ಮುಂದುವರಿದ ಭಾಗ)

ಬಾಲಕ ರಾಮನ ಲೀಲೆಗಳನ್ನು ಅಲ್ಲಿಯ ಪರಿಸರದ ಜನರು ಕಂಡರು. ಪ್ರತಿ ಮನೆಗಳಲ್ಲಿ ರಾಮನ ಲೀಲೆಗಳು ಚರ್ಚೆಯ ವಿಷಯವಾದವು. ಬಾಲಕ ರಾಮ ನಡೆಸುವ ಪವಾಡಗಳು ಅಚ್ಚರಿ ವ್ಯಕ್ತಪಡಿಸುವ ಸುದ್ದಿಗಳಾದವು. ಹೀಗೊಂದು ದಿನ ವಕೀಲರಾದ ಈಶ್ವರ್ ಐಯ್ಯರ್ ಅವರ ಮನೆಗೆ ಪ್ರಸಿದ್ದ ಜ್ಯೋತಿಷಿಗಳಾದ ನಂಬೂದಿರಿ ಪಾಡರು ಬಂದಿದ್ದರು. ಅಲ್ಲೇ ಇದ್ದ ರಾಮನ ಕಂಡು, ಜ್ಯೋತಿಷಿಗಳು ಬಾಲಕನಿಗೆ ಉದ್ಧಂಡವಾಗಿ ನಮಸ್ಕರಿಸಿದರು. ಈ ದೃಶ್ಯ ಕಂಡು ಈಶ್ವರ್ ಐಯ್ಯರ್ ಅವರು ಇದೇನು..ವಿಚಿತ್ರ..!! ಎಂದು ಅಚ್ಚರಿ ವ್ಯಕ್ತಪಡಿಸಿದರು. ವಕೀಲರೇ ಇತನು ನಮಗೆಲ್ಲ ಕಣ್ಣಿಗೆ ಸಣ್ಣ ಬಾಲಕನಾಗಿ ಕಾಣುತ್ತಿರಬಹುದು. ಆದರೆ ಇತನು ಸಾಮಾನ್ಯ ಬಾಲಕನಲ್ಲ..! ದಿವ್ಯ ಅವತಾರ..! ಇತನ ದರ್ಶನ ಪಡೆದ ನಾನು ಭಾಗ್ಯವಂತನು. ವಕೀಲರೇ ನೀವು ದಿವ್ಯಶಕ್ತಿಯ ಸಾಂಗತ್ಯದಲ್ಲಿ ಇದ್ದಿರಾ. ತಾವು ನಿಜಕ್ಕೂ ಧನ್ಯರು ಎಂದು ಹೇಳಿದರು. ಮತ್ತೆ ಮಾತನ್ನು ಮುಂದುವರಿಸುತ್ತ… ಈ ಬಾಲಕ “ಜಗತ್ತನ್ನು ಉದ್ಧರಿಸುವ ಸದ್ಗುರು ಆಗುತ್ತಾನೆ. ಭೂಲೋಕದಲ್ಲಿ ಯೋಗಿಗಳಿಗೆ ರಾಜನಾಗುತ್ತಾನೆ. ಸಿದ್ಧರಿಂದ ಪೂಜಿಸಲ್ಪಡುತ್ತಾನೆ” ಎಂದು ಭವಿಷ್ಯ ನುಡಿಯುತ್ತಾರೆ. ಮೊದಲೇ ಈಶ್ವರ ಐಯ್ಯರರು ರಾಮನನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದವರು. ಜ್ಯೋತಿಷಿ ನಂಬೂದಿರಿಪಾಡರ ಭವಿಷ್ಯವಾಣಿ ಕೇಳಿದ ಬಳಿಕ ಪೋಷಕ ಸಂಬಂಧದ ಸಂಪೂರ್ಣ ದೂರಗೊಂಡು, ಪೂಜ್ಯ ಭಾವನೆಯಾಗಿ ಮಾರ್ಪಟ್ಟಿತು. ಯಾವತ್ತೂ ನಂಬೂದಿರಿಪಾಡರು ನುಡಿದ ಭವಿಷ್ಯವು ಸುಳ್ಳಾಗುತ್ತಿರಲಿಲ್ಲ. ಅವರು ನುಡಿದ ಮಾತು ದೇವರವಾಣಿ ಎಂದು ಜನರು ನಂಬುತ್ತಿದ್ದರು. ಐಯ್ಯರರು ಕೂಡ ಭವಿಷ್ಯವಾಣಿಯನ್ನು ಗೌರವವಿಸಿದರು.

ಚಿತ್ರಕೃಪೆ: ಅಂತರ್ಜಾಲ

ರಾಮನಿಗೆ ಎಳು ವರ್ಷ ತುಂಬಿತು. ಶಾಲೆಗೆ ಸೇರಿಸುವ ಯೋಚನೆ ಈಶ್ವರ್ ಐಯ್ಯರ್ ಅವರದು. ಆದರೆ ರಾಮ ಶಾಲೆಗೆ ಹೋಗಲು ನಿರಾಕರಿಸಿದನು. ರಾಮ ಶಾಲೆಗೆ ಹೋಗಲು ನಿರಾಕರಿಸದಕ್ಕೆ ಐಯ್ಯರರು ಏನನ್ನು ಪ್ರಶ್ನಿಸಲಿಲ್ಲ. ಮನೆಯಲ್ಲಿಯೇ ರಾಮನಿಗೆ ಶಾಲಾ ವಾತಾವರಣ ಒದಗಿಸಿಕೊಟ್ಟರು. ಐಯ್ಯರರು ತಾವೇ ಅಧ್ಯಾಪಕರಾಗಿ ಮಲೆಯಾಳಂ, ಸಂಸ್ಕೃತ, ಇಂಗ್ಲೀಷ್ ಭಾಷೆಗಳನ್ನು ಕಲಿಸಿದರು. ಮನೆಯಲ್ಲಿಯೇ ಬಲುಬೇಗನೆ ವಿದ್ಯೆಯನ್ನು ರಾಮ ಕಲಿತ. ರಾಮನಿಗೆ ವಿದ್ಯೆ ಕಲಿಕೆ ನೆಪಮಾತ್ರ. ಐಯ್ಯರರಿಗೆ ಸಮಾಧಾನ ಪಡಿಸಲು ಅಷ್ಟೇ..! ರಾಮನಿಗೆ ವಿದ್ಯಾಜ್ಞಾನ ಇಲ್ಲದೇ ಇದ್ದಿತೇ..? ಆತನೊಬ್ಬ ಕಾಲಜ್ಞಾನ ವಿದ್ಯೆಯ ಸಿದ್ಧಿ ಪಡೆದವನು. ಎಲ್ಲಾ ವಿದ್ಯೆಗಳ ಉಗಮಸ್ಥಾನ ನಾನು. ಎಲ್ಲಾ ವಿದ್ಯೆಗಳು ನನ್ನಿಂದಲೇ ಹುಟ್ಟಿ ಬರುತ್ತೀವೆ, ಬೇಕಾದರೇ ನನ್ನಲ್ಲಿ ಪ್ರಶ್ನಿಸಬಹುದು ಎಂದು ಬಾಲಕ ರಾಮನು, ಈಶ್ವರ್ ಐಯ್ಯರ್ ಅವರಲ್ಲಿ ಹೇಳಿದ್ದೂ ಇದೆ.

ಹಳ್ಳಿಯ ಬದುಕು ಎಂದ ಮೇಲೆ, ತಲೆಯ ಮೇಲೆ ಹೊರೆ ಹೊರುವರು ಇದ್ದೆ ಇರುತ್ತಾರೆ. ಪರಿಸರದ ಜನರ ಬದುಕು ಕೃಷಿಯಿಂದಲೇ ಸಾಗುತಿತ್ತು. ಹಾಗಾಗಿ ತಲೆಯ ಮೇಲೆ ಕೃಷಿ ಚಟುವಟಿಕೆ ಸಂಬಂಧಪಟ್ಪ ಪರಿಕರಗಳು, ಧವಸ ಧಾನ್ಯಗಳು, ಗೊಬ್ಬರ ಮೊದಲಾದ ಸಾಮಾಗ್ರಿಗಳನ್ನು ಜನರು ತಲೆ ಮೇಲೆ ಹೊತ್ತು ಬಹಳ ದೂರದವರೆಗೂ ಸಾಗಿಸುತ್ತಿದ್ದರು. ಅಂತಹ ದೃಶ್ಯಗಳು ಕಂಡು ಬಂದಾಗ ರಾಮ ಅವರಿದ್ದಲ್ಲಿಗೆ ಓಡೋಡಿ ಬರುತ್ತಿದ್ದ. ಹಠಹಿಡಿದು ಅವರ ತಲೆಹೊರೆಯನ್ನು ತಾನು ಹೊತ್ತುಕೊಂಡು ಸಾಗಿಸುತ್ತಿದ್ದ. ಹಳ್ಳಿಯ ಶ್ರಮಜೀವಿಗಳಿಗೆ ರಾಮ ನೆರವಾಗುತ್ತಿದ್ದ. ಅವರಿಂದ ಏನನ್ನೂ ಫಲಾಪೇಕ್ಷೆ ಬಯಸುದಿಲ್ಲವಾಗಿದ್ದ. ಬಾಲಕ ರಾಮನು ಭೀಮನಂತೆ ಭಾರ ಹೊರುವುದು ಕಂಡು ಎಲ್ಲರೂ ಅಚ್ಚರಿ ಪಡುತ್ತಿದ್ದರು. ಬಾಲ ರಾಮನಲ್ಲಿ ದಯಾಗುಣವು ಹುಟ್ಟಿನಿಂದಲೇ ಇತ್ತು. ‘ಪರೋಪಕಾರವೇ ಜನಾರ್ದನ ಸೇವೆ’ ಎಂಬುವುದೇ ರಾಮ ಮಾಡುತ್ತಿರುವ ಸೇವಾ ಕಾರ್ಯದ ನೀತಿಸಾರ ಆಗಿತ್ತು.

ತಾರಾನಾಥ್‌ ಮೇಸ್ತ, ಶಿರೂರು.

Advertisement

LEAVE A REPLY

Please enter your comment!
Please enter your name here