ಜೈಲಿನಲ್ಲಿ ಮಾರಾಮಾರಿ: ಕೈದಿ ಸಾವು

0
211

ಮೈಸೂರು ಪ್ರತಿನಿಧಿ ವರದಿ
ಜೈಲಿನಲ್ಲಿ ಮಾರಾಮಾರಿ ವೇಳೆ ಗಾಯಗೊಂಡಿದ್ದ ಕೈದಿ ಸಾವನ್ನಪ್ಪಿದ್ದ ಘಟನೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ  30 ವರ್ಷದ ಮುಸ್ತಾಫಾ ಸಾವನ್ನಪ್ಪಿದ್ದಾನೆ.
 
 
ಇಂದು ಬೆಳಗ್ಗೆ ಮೈಸೂರಿನ ಸೆಂಟ್ರಲ್ ಜೈಲಿನಲ್ಲಿ ಇಂದು ಬೆಳಗ್ಗೆ ಮಾರಾಮಾರಿ ನಡದಿತ್ತು. ಜೈಲಿನಲ್ಲಿ ಸಹಕೈದಿ ಕಿರಣ್ ಶೆಟ್ಟಿ ಎಂಬಾತ ಮುಸ್ತಫಾ ಮೇಲೆ ಚಾಕುವಿನಿಂದ ಹಲ್ಲೆಗೈದಿದ್ದಾನೆ.
 
 
ನಂತರ ಕೈದಿ ಮುದ್ತಫಾನನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಮುಸ್ತಫಾ(30) ಸಾವನ್ನಪ್ಪಿದ್ದಾನೆ. ಸದ್ಯ ಮುಸ್ತಫಾ ಮೃತದೇಹ ಆಸ್ಪತ್ರೆ ಶವಗಾರಕ್ಕೆ ರವಾನೆಯಾಗಿದೆ.
 
 
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಸ್ತಫಾ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ. ಅಲ್ಲದೆ ಮೃತ ಕೈದಿ ಮುಸ್ತಫಾ ದ.ಕ. ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆದ ಪ್ರಶಾಂತ್ ಕೊಲೆಯ ಆರೋಪಿ ಕೂಡ ಆಗಿದ್ದ ಎನ್ನಲಾಗಿದೆ.
ಕಿರಣ್ ಶೆಟ್ಟಿ, ಮುಸ್ತಫಾ ಮಂಗಳೂರು ಮೂಲದವರಾಗಿದ್ದಾರೆ.

LEAVE A REPLY

Please enter your comment!
Please enter your name here