ರಾಜ್ಯ

ಜೈನ ಕಾಶಿ ಮೂಡುಬಿದಿರೆಯಲ್ಲಿ ರಾಜ್ಯ ಮಟ್ಟದ ಜಿನ ಭಕ್ತಿ ಗೀತಾ ಸ್ಪರ್ಧೆ

ಮೂಡಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕದ ಪ್ರಯುಕ್ತ ರಾಜ್ಯ ಮಟ್ಟದ ಜಿನಭಕ್ತಿ ಗೀತಾ ಸ್ಪರ್ದೆ ಮೂಡಬಿದಿರೆಯಲ್ಲಿ ಜ.5ಮತ್ತು 6ರಂದು ನಡೆಯಲಿದೆ ಎಂದು ಭಾರತೀಯ ಜೈನ್ ಮಿಲನ್ ಇದರ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೂಡಬಿದಿರೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈಗಾಗಲೇ ವಿಭಾಗ ಮಟ್ಟದ ಗೀತ ಗಾಯನ ಸ್ಪರ್ಧೆ ನಡೆದಿದೆ. ಧಾರವಾಡ, ಜಮಖಂಡಿ, ಬೆಂಗಳೂರು, ಮೈಸೂರು ಜಿಲ್ಲೆಯಲ್ಲಿ ಅರ್ಹತಾ ಸುತ್ತುಗಳಲ್ಲಿ ನಲವತ್ತು ತಂಡಗಳು £ಸೆಮಿಫೈನಲ್ ಹಂತಕ್ಕೆ ಆಯ್ಕೆಯಾಗಿವೆ. ಜ.5ರಂದು ಮೂಡಬಿದಿರೆ ಜೈನಮಠದ ಪರಮಪೂಜ್ಯ ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳ ಪಾವನ ಸಾನ್ನಿಧ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಅತಿಥಿಗಳಾಗಿ ಪಾಲ್ಗೊಳ್ಳುವರು. ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಪುಷ್ಪರಾಜ್ ಜೈನ್ ಮತ್ತು ಶ್ವೇತಾ ಜೈನ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಹಿರಿಯರ ಮತ್ತು ಕಿರಿಯರ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ವಿಜೇತರಾದವರಿಗೆ ನಗದು ಪುರಸ್ಕಾರದೊಂದಿಗೆ ಪಾರಿತೋಷಕ ನೀಡಲಾಗುತ್ತದೆ ಎಂದರು.
ಸಾಯಂಕಾಲ 6.30ರಿಂದ 8ಗಂಟೆಯ ತನಕ ಎಸ್.ಡಿ.ಎಮ್ ಕಲಾವೈಭವವೆಂಬ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಜ.6ರಂದು ಬೆಳಗ್ಗೆ 10ರಿಂದ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಹೇಮಾವತೀ ವಿ ಹಗ್ಗಡೆಯವರ ಶುಭನುಡಿಗಳೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿವೆ. ಅದೇ ದಿನ ಬೆಳಗ್ಗೆ 7.30ಕ್ಕೆ ಮೂಡುಬಿದಿರೆ ಜೈನ್ ಪ್ರೌಢಶಾಲಾ ಮುಂಭಾಗದ ರತ್ನಾಕರ ವರ್ಣಿ ಮಂಟಪದಲ್ಲಿ ಕವಿ ರತ್ನಾಕರ ನಮನ ಕಾರ್ಯಕ್ರಮ ಭರತೇಶ ವೈಭವ ಕೃತಿ ಮೆರವಣಿಗೆ ನಡೆಯಲಿದೆ ಎಂದು ಅನಿತಾ ಸುರೇಂದ್ರ ಕುಮಾರ್ ವಿವರಿಸಿದರು.
ಅಪರಾಹ್ನ 2ರಿಂದ 3ರ ತನಕ ಮೂಡಬಿದಿರೆ ಜೈನ್ ಮಿಲನ್ ಸಂಘಟನೆಯವತಿಯಿಂದ ಮೂಡಬಿದಿರೆ ವೈಭವವನ್ನು ಯಕ್ಷಗಾನೀಯ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುವುದು ಎಂದರು.
3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್, ಚಲನಚಿತ್ರ ನಟ ವಿಜಯ ರಾಘವೇಂದ್ರ ಭಾಗವಹಿಸುವರು. ಡಿ.ಸುರೇಂದ್ರ ಕುಮಾರ್ , ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಕೆ.ಪ್ರಸನ್ನ ಕುಮಾರ್ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಭಾರತೀಯ ಜೈನ್ ಮಿಲನ್ ವಲಯ -88ರ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಪುಷ್ಪರಾಜ್ ಜೈನ್, ಕಾರ್ಯಾಧ್ಯಕ್ಷ ಕೆ.ಪ್ರಸನ್ನ ಕುಮಾರ್, ವಲಯ ನಿರ್ದೇಶಕ ಜಯರಾಜ್ ಕಂಬಳಿ, ಮೂಡಬಿದಿರೆ ಜೈನ್ ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್ ಉಪಸ್ಥಿತರಿದ್ದರು.
ಸನ್ಮಾನ
ಮೂಡಬಿದಿರೆಯ ಎಂ.ಸಿ.ಎಸ್ ಬ್ಯಾಂಕ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಎಂದು ಭಾರತೀಯ ಜೈನ್ ಮಿಲನ್ ಇದರ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್‍ನಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ ಹಾಗೂ ಯತಿರಾಜ್ ಜೈನ್ ಉಪಸ್ಥಿತರಿದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here