ಜೈನಮಠದಲ್ಲಿ ಯೋಗದಿನಾಚರಣೆ

0
2085

ಮೂಡುಬಿದಿರೆ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೂಡುಬಿದಿರೆ ಜೈನಮಠದ ಜಗದ್ಗುರು ಡಾ|| ಸ್ವಸ್ತಿಶ್ರೀ  ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠದ ರಮಾರಾಣಿ ಶೋಧ ಸಂಸ್ಥಾನದ ಸಭಾಂಗಣ ಯೋಗ ದಿನಚರಣೆ ನಡೆಯಿತು. ಈ ಬಾರಿ ಕೋವಿಡ್ 19 ಪ್ರಯುಕ್ತ ಸಾರ್ವಜನಿಕ ರಿಗೆ ಭಾಗವಹಿಸುವ ಅವಕಾಶ ಇರಲಿಲ್ಲ. ಶ್ರೀ ಮಠದ ಸಿಬ್ಬದಿ ಮಾತ್ರ ಭಾಗವಹಿಸಿದ್ದರು . ಈ ಸಂಧರ್ಭ ಸಂದೇಶ ನೀಡಿದ ಜೈನಮಠದ ಶ್ರೀ ಗಳು;ಯೋಗಾಸನ ,ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಗತಿ ಗೆ ಕಾರಣವಾದುದು .ಯೋಗವು ಅನೇಕ ಅರ್ಥಗಳನ್ನು ಹೊಂದಿದೆ, ಮತ್ತು ಆ ಪದವು “ನಿಯಂತ್ರಿಸುವ,”, “ಐಕ್ಯವಾಗು” ಅಥವಾ “ಒಗ್ಗಟ್ಟಾಗು” ಎಂಬರ್ಥಗಳ ಸಂಸ್ಕೃತ ಮೂಲ “ಯುಜ್‌,”ನಿಂದ ಉತ್ಪನ್ನವಾಗಿದೆ. ಇದರ ರೂಪಾಂತರಗಳೆಂದರೆ “ಸೇರಿಸುವಿಕೆ,” “ಜೊತೆಗೂಡುವಿಕೆ” “ಒಕ್ಕೂಟ” “ಸಂಯೋಗ,” ಮತ್ತು “ನಿಮಿತ್ತ/ಉಪಕರಣ.” ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠ ಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು (ಭಂಗಿಗಳು) ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ ಎಂದು ಹೇಳಿದರು.
ಶ್ರೀ ಗಳು ಪ್ರಾತಃ ಕಾಲ ವಜ್ರಾಸನ , ತಾಡಾಸನ, ವೃಕ್ಷಾಸನ (ವೃಕ್ಷದ ಭಂಗಿ), ತ್ರಿಕೋನಾಸನ,ಉತ್ಕಟಾಸನ, ಧನುರಾಸನ, ಭುಜಂಗಾಸನ,ಸೇತು-ಬಂಧಾಸನ,ಸರ್ವಾಂಗಾಸನ,ದಂಡಾಸನ, ಶವಾಸನ,ಹಾಗೂ ಯೋಗಾಸನ ಗಳಲ್ಲೇ ವಿಶಿಷ್ಟ ಆಸನ ವಾದ ಶೀರ್ಷಾಸನ ವನ್ನು  ಮಾಡಿದರು.ಶ್ರೀ ಮಠದ ಸಿಬಂದಿ ವರ್ಗ ಸುಧಾಕರ್, ರತ್ನಕುಮಾರ್, ನೇಮಿರಾಜ್ ಪಾಲ್ಗೊಂಡರು.

LEAVE A REPLY

Please enter your comment!
Please enter your name here