ಜೂ.22ರಿಂದ ಅರಮನೆ ಪ್ರವೇಶ ನಿರ್ಬಂಧ

0
263

 
ಮೈಸೂರು ಪ್ರತಿನಿಧಿ ವರದಿ
ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರ ವಿವಾಹ ಮಹೋತ್ಸವದ ಹಿನ್ನೆಲೆಯಲ್ಲಿ ಜೂನ್ 22ರಿಂದ 28ರವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ.
 
 
ಯದುವೀರ್ ಅವರು ರಾಜಮನೆತನದ ರಾಜಸ್ಥಾನದ ತ್ರಿಶಿಕಾ ಕುಮಾರಿ ಸಿಂಗ್ ಅವರನ್ನು ಜೂನ್ 27ರಂದು ವಿವಾಹವಾಗಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ವಿವಾಹಾದಿ ಕಾರ್ಯಕ್ರಮಗಳುನ್ನು ಅರಮನೆಯಲ್ಲಿ ನಡೆಯುವುದರಿಂದ ಜೂ.22ರಿಂದ 28ರವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ಅರಮನೆ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here