ಜೂ.11ಕ್ಕೆ ರಾಜ್ಯಸಭಾ ಚುನಾವಣೆ

0
310

 
ಬೆಂಗಳೂರು ಪ್ರತಿನಿಧಿ ವರದಿ
ಕೊನೆಗೂ ಚುನಾವಣಾ ಆಯೋಗ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕವನ್ನು ಪ್ರಕಟಿಸಿದೆ. ಮತಕ್ಕಾಗಿ ಹಣದ ವಿಚಾರವಾಗಿ ಸ್ಟಿಂಗ್ ಆಪರೇಷನ್ ಹಿನ್ನೆಲೆಯಲ್ಲಿ ಭಾರಿ ಚರ್ಚೆಗೊಳಗಾದ ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಜೂ.11 ರಂದು ಚುನಾವಣೆ ನಡೆಯಲಿದೆ.
 
 
 
ಜೂ.30 ಕ್ಕೆ ಹಾಲಿ ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಒಟ್ಟು ಏಳು ಸ್ಥಾನಗಳ ಪೈಕಿ ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಜೂ.11 ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಿಂದ ಮೂವರು, ಬಿಜೆಪಿ ಹಾಗೂ ಜೆಡಿಎಸ್ ನಿಂದ ತಲಾ ಒಬ್ಬ ಅಭ್ಯರ್ಥಿ ರಾಜ್ಯಸಭಾ ಚುನಾವಣೆ ಕಣದಲ್ಲಿದ್ದು ಚುನಾವಣೆ ತೀವ್ರ ಕುತೂಹಲ ಕೆರಳಿದೆ.
 
 
ಈ ಚುನಾವಣೆಯೂ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ (ಕೊಠಡಿ ಸಂಖ್ಯೆ 106) ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಸಂಜೆ 5ರಿಂದ ಮತಎಣಿಕೆ ನಡೆದು ರಾತ್ರಿಯೊಳಗೆ ಫ‌ಲಿತಾಂಶ ಹೊರಬೀಳಲಿದೆ.
 
 
 
ಕಾಂಗ್ರೆಸ್ ನಿಂದ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಜೆಡಿಎಸ್ ನಿಂದ ಬಿಎಂ ಫಾರೂಕ್ ಕಣಕ್ಕಿಳಿದಿದ್ದಾರೆ.
 
 
 
ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪರ ಮತ ಹಾಕಲು ಶಾಸಕರು ಹಣದ ಬೇಡಿಕೆ ಇಟ್ಟಿದ್ದ ವಿಷಯ ಸ್ಟಿಂಗ್ ಆಪರೇಷನ್ ಮೂಲಕ ಬಹಿರಂಗವಾದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಸಭಾ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯಿಸಿತ್ತು.

LEAVE A REPLY

Please enter your comment!
Please enter your name here