ಜೂ.11ಕ್ಕೆ ಚುನಾವಣೆ

0
380

 
ನವದೆಹಲಿ ಪ್ರತಿನಿಧಿ ವರದಿ
ರಾಜ್ಯಸಭೆಯ 57 ಸ್ಥಾನಗಳಿಗೆ ಗುರುವಾರ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಜೂನ್ 11ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ 53 ಸದಸ್ಯರು ವಿದಾಯ ಭಾಷಣ ಮಾಡಲಿದ್ದಾರೆ.
 
 
ಸದಸ್ಯರ ನಿವೃತ್ತಿಯಿಂದ ಕಾಂಗ್ರೆಸ್ ನಷ್ಟವಾಗಿದ್ದು, ಬಿಜೆಪಿಗೆ ಲಾಭವಾಗಲಿದೆ. ಆದರೂ ನಿರೀಕ್ಷಿತ ಮಟ್ಟದ ಲಾಭದ ಆಡಳಿತ ಪಕ್ಷ ಬಿಜೆಪಿಗಿಲ್ಲ. ಬಿಜೆಪಿಗೆ ರಾಜ್ಯಸಭೆಯಲ್ಲಿ ನಿರೀಕ್ಷಿತ ಬಹುಮತ ಸಾಧಿಸಲು ಸಾಧ್ಯವಿಲ್ಲ ಎನ್ನಲಾಗಿದೆ.
 
 
 
ಜೂನ್ ನಿಂದ ಆಗಸ್ಟ್ ವರೆಗೆ 15 ರಾಜ್ಯಗಳ 55 ಸದಸ್ಯರು ನಿವೃತ್ತಿ ಹೊಂದಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ತಲಾ 14, ಬಿಎಸ್ ಪಿ ಯಿಂದ 6, ಜೆಡಿಯು 6, ಎಸ್ ಪಿ, ಬಿಜೆಡಿ ಮತ್ತು ಎಐಎಡಿಎಂಕೆ ತಲಾ 3, ಡಿಎಂಕೆ, ಎನ್ ಸಿಪಿ ಮತ್ತು ಟಿಡಿಪಿ ತಲಾ 2 ಮತ್ತು ಶಿವಸೇನಾ 1 ಸದಸ್ಯರು ನಿವೃತ್ತಿ ಹೊಂದಲಿದ್ದಾರೆ. ಇದರಲ್ಲಿ ಸ್ವತಂತ್ರ ಅಭ್ಯರ್ಥಿ ವಿಜಯ ಮಲ್ಯ ಮೇ5ರಂದು ರಾಜೀನಾಮೆ ನೀಡಿದ್ದರು.
 
 
 
ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು, ಬಿರೇಂದ್ರ ಸಿಂಗ್, ಸುರೇಶ್ ಪ್ರಭು, ನಿರ್ಮಲಾ ಸೀತಾರಾಮನ್, ಪೀಯೂಷ್ ಗೋಯಲ್, ಮುಖ್ತಾರ್ ಅಬ್ಬಾಸ್ ನಖ್ವಿ, ಮಾಜಿ ಸಚಿವರಾದ ಜೈರಾಮ್ ರಮೇಶ್, ಜೆಡಿಯು ಮುಖಂಡ ಶರದ್ ಯಾದವ್ ಮತ್ತು ಹಿರಿಯ ವಕೀಲ ರಾರ್ಮೇಠ್ಮಲಾನಿ ನಿವೃತ್ತಿಯಾಗಲಿರುವ ಪ್ರಮುಖ ಸಚಿವರಾಗಿದ್ದಾರೆ.
 
ಚುನಾವಣಾ ಆಯೋಗ ರಾಜ್ಯಸಭೆಯ 57 ಸ್ಥಾನಗಳಿಗೆ ಮೇ 24 ರಂದು ಅಧಿಸೂಚನೆ ಪ್ರಕಟಿಸುತ್ತಿದ್ದು, ಮೇ 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕರ್ನಾಟಕದ ನಾಲ್ಕು ಸ್ಥಾನ ಸೇರಿದಂತೆ 15 ರಾಜ್ಯಗಳಲ್ಲಿ ಜೂನ್​ನಿಂದ ಆಗಸ್ಟ್ ವರೆಗೆ ತೆರವಾಗಲಿರುವ ಒಟ್ಟು 57 ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ.

LEAVE A REPLY

Please enter your comment!
Please enter your name here