ಜುಲೈ ತಿಂಗಳಲ್ಲಿ…

0
649

 
ವಿಶೇಷ ವರದಿ
2016ರ ಏಳನೇ ತಿಂಗಳಾದ ಜುಲೈನಲ್ಲಿ ಹಲವು ಘಟನೆಗಳು ನಡೆದು ಇತಿಹಾಸ ಸೇರಿದೆ. ಈ ತಿಂಗಳಲ್ಲಿ ಹಲವು ಸಾವು ನೋವುಗಳು ಸಂಭವಿಸಿದೆ. ಹೆಚ್ಚು ಹೇಳಬೇಕಂದರೆ ಈ ತಿಂಗಳಲ್ಲಿ ಬಂದ್ ಆಚರಣೆಗಳು ಮತ್ತು ಆತ್ಮಹತ್ಯೆಗಳು ಹೆಚ್ಚಾಗಿದ್ದವು. ಪೊಲೀಸ್ ಇಲಾಖೆಯಲ್ಲಿ ಒಬ್ಬರ ನಂತರ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಸಾರಿಗೆ ನೌಕರರ ಮುಷ್ಕರ, ಬ್ಯಾಂಕ್ ನೌಕರರ ಮುಷ್ಕರ ನಡೆದು ಹೋಗಿದೆ. ಅಲ್ಲದೆ ಈ ತಿಂಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಮೋಸವೂ ಆಗಿದೆ. ಮಹದಾಯಿ ಪ್ರಕರಣದಲ್ಲಿ ರಾಜ್ಯಕ್ಕೆ ಭಾರೀ ಹಿನ್ನೆಡೆಯಾದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು, ಬಂದ್ ಗಳು ನಡೆದು ಹೋಗಿದೆ. ಅಲ್ಲದೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಹ ಇನ್ನಿಲ್ಲವಾದರು. 
ಜುಲೈ 1
ಅಮೆರಿಕದ ಮೇಲೆ ಐಸಿಸ್ ಕರಿಛಾಯೆ
ಇಸ್ತಾಂಬುಲ್ ಮಾದರಿಯಲ್ಲೇ ಅಮೆರಿಕದಲ್ಲೂ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಎಚ್ಚರಿಕೆ ನೀಡಿದ್ದರು.
ಯಕ್ಷಗಾನ ಕಲಾವಿದ ವಿಶ್ವನಾಥ ಶೆಟ್ಟಿ ಇನ್ನಿಲ್ಲ
ಯಕ್ಷವಾಚಸ್ಪತಿ, ಸಾಮಗ ಶೈಲಿಯ ಮಾತುಗಾರ, ತೆಂಕು-ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಇದೀಗ ನಿಧನರಾದರು.
ಪತ್ರಿಕಾ ದಿನಾಚರಣೆ
ಇಂದು ಜುಲೈ 1ರಂದು ಪತ್ರಿಕಾ ದಿನಾಚರಣೆ ಮಾಡಲಾಗಿತ್ತು. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ ಪ್ರಾರಂಭವಾದದ್ದು 1843ರ ಜುಲೈ 1ರಂದು ಹಾಗಾಗಿ ಇಂದಿನ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸುತ್ತಾರೆ.
ವಾಯುಪಡೆಗೆ ‘ತೇಜಸ್’ ಬಲ
ಭಾರತೀಯ ವಾಯುಸೇನೆಗೆ ಸ್ವದೇಶಿ ವಿಮಾನ ಸೇರ್ಪಡೆಯಾಗಿದೆ. ಬೆಂಗಳೂರು ಹೆಚ್ ಎಎಲ್ ನಲ್ಲಿ ಅಧಿಕೃತವಾಗಿ ವಾಯುಸೇನೆಗೆ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ವಿಮಾನ ‘ತೇಜಸ್’ ಸೇರ್ಪಡೆಯಾಗಿದೆ.
ಮೇಘಸ್ಫೋಟ
ಉತ್ತರಾಖಂಡ್ ನಲ್ಲಿ ಮೇಘಸ್ಫೋಟವಾಗಿದ್ದು, ಮೇಘಸ್ಫೋಟದಿಂದ ರಾಜ್ಯದ ವಿವಿಧೆಡೆ ಐವರು ಸಾವನ್ನಪ್ಪಿದ್ದಾರೆ.
ಬೇಳೆಗಳ ಅಮದಿಗೆ ತೀರ್ಮಾನ
ಕಡಲೆ, ಮಸೂರ್ ಬೇಳೆ ಅಮದಿಗೆ ತೀರ್ಮಾನಿಸಲಾಗಿದೆ. 7500 ಟನ್ ಬೇಳೆ ಅಮದಿಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಕೇಂದ್ರ ಆಹಾರ ಪೂರೈಕೆ ಸಚಿವಾಲಯ ಪ್ರಕಟಿಸಿತ್ತು.
5000 ಟನ್ ಕಡಲೆ, 2500 ಟನ್ ಮಸೂರ್ ಬೇಳೆ ಅಮದಿಗೆ ತೀರ್ಮಾನಿಸಲಾಗಿದ್ದು, ಬೇಳೆಕಾಳು ಏರಿಕೆ ನಿಯಂತ್ರಣ ಉದ್ದೇಶದಿಂದ ಬೆಲೆ ಸ್ಥಿರೀಕರಣ ಸಮಿತಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ತೈಲ ಬೆಲೆಯಲ್ಲಿ ಇಳಿಕೆ
ರಾಷ್ಟ್ರೀಯ ಪ್ರತಿನಿಧಿ ವರದಿ
ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿತ್ತು. ಪೆಟ್ರೋಲ್ ದರ ಪ್ರತಿಲೀಟರ್ ಗೆ 89 ಪೈಸೆ ಮತ್ತು ಡೀಸೆಲ್ ದರ ಪ್ರತಿಲೀಟರ್ ಗೆ 49 ಪೈಸೆ ಇಳಿಕೆಯಾಗಿತ್ತು.
ಪ್ರಧಾನಿ ಮೋದಿ ಭೇಟಿ ಮಾಡಿದ ವಿಶ್ವ ಬ್ಯಾಂಕ್ ಅಧ್ಯಕ್ಷ
ವಿಶ್ವ ಬ್ಯಾಂಕ್ ಅಧ್ಯಕ್ಷ ಡಾ.ಜಿಮ್ ಯಂಗ್ ಕಿಮ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ವಿಶ್ವಸಂಸ್ಥೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಏನೆಲ್ಲಾ ಸಾಧ್ಯತೆಗಳಿವೆ ಎನ್ನುವುದರ ಕುರಿತು ಚರ್ಚಿಸಿದ್ದಾರೆ.
ಸೌರಶಕ್ತಿ ಯೋಜನೆಗಳಿಗೆ ವಿಶ್ವ ಬ್ಯಾಂಕ್ ಸಾಲ
ಭಾರತದ ಸೌರಶಕ್ತಿ ಯೋಜನೆಗಳಿಗೆ 6500 ಕೋಟಿ ರೂ. ಮೊತ್ತದ ಸಾಲ ನೀಡಲು ವಿಶ್ವಬ್ಯಾಂಕ್ ಮುಂದಾಗಿತ್ತು. ಭಾರತ ಪ್ರವಾಸದಲ್ಲಿರುವ ವಿಶ್ವಬ್ಯಾಂಕ್ ಮುಖ್ಯಸ್ಥ ಜಿಮ್ ಯಾಂಗ್ ಕಿಮ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಸೌರಶಕ್ತಿ ಉತ್ಪಾದನೆ ಕ್ಷೇತ್ರಕ್ಕೆ ವಿಶ್ವಬ್ಯಾಂಕ್ ಪ್ರಮುಖ ಸಾಲ ನೀಡುವ ಸಂಸ್ಥೆಯಾಗಿದೆ. ಈ ಬಾರಿ ಭಾರತಕ್ಕೆ ಶೇ. 30ರಷ್ಟು ಹೆಚ್ಚು ಸಾಲ ನೀಡಲು ನಿರ್ಧರಿಸಿದೆ. ಅಲ್ಲದೆ ವಿಶ್ವದ ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳಿಂದ ಹೂಡಿಕೆ ಶಿಫಾರಸನ್ನು ನಿರೀಕ್ಷಿಸಲಾಗಿದೆ ಎಂದು ಕಿಮ್ ಹೇಳಿದ್ದರು.
ಸ್ಫೋಟಕ ಪತ್ತೆ
ಬಂಧನಕ್ಕೊಳಗಾಗಿರುವ ಶಂಕಿತ ಐಸಿಸ್‌ ಉಗ್ರರ ಹೈದರಾಬಾದ್‌ ಮನೆಯಿಂದ ಪ್ಯಾರಿಸ್‌ ಮತ್ತು ಬ್ರಸೆಲ್ಸ್‌ ದಾಳಿಗಳಲ್ಲಿ ಬಳಸಲಾದ ಸ್ಫೋಟಕಗಳು ಸಿಕ್ಕಿರುವುದಾಗಿ ಭದ್ರತಾ ಪಡೆಗಳು ತಿಳಿಸಿವೆ.
ರಾಷ್ಟ್ರೀಯ ತನಿಖಾ ದಳದಿಂದ ಬಂದಿಸಲ್ಪಟ್ಟಿದ್ದ ಓರ್ವ ಶಂಕಿತ ಐಸಿಸ್‌ ಉಗ್ರನಿಗೆ ಸೇರಿದ ಹೈದರಾಬಾದಿನ ಈ ಮನೆಯಲ್ಲಿ ಮಾರಣಾಂತಿಕ ಸ್ಫೋಟಕ ವಸ್ತು ಟ್ರಯಾಸಿಟೋನ್‌ ಟ್ರೈಪರ್‌ ಆಕ್ಸೈಡ್‌ (ಟಿಎಟಿಪಿ)ಯನ್ನು ವಶಪಡಿಸಿಕೊಳ್ಳಲಾಗಿದ್ದು ಇದನ್ನು ಮನೆಯ ಕೆಳ ಅಂತಸ್ತಿನಲ್ಲಿ ಅವಿತಿಡಲಾಗಿತ್ತು.
“ಬೆಳ್ಳಿಹೆಜ್ಜೆ” ಯಲ್ಲಿ ನಟಿ ಸುಧಾರಾಣಿ
ಕರ್ನಾಟಕ ಚಲನಚಿತ್ರ ಅಕಾಡೆಮಿಯು ಜುಲೈ 2 ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಕುಮಾರಪಾರ್ಕ್ ರಸ್ತೆಯಲ್ಲಿರುವ ಗಾಂಧೀಭವನದ ಮಹದೇವ ದೇಸಾಯಿ ಸಭಾಂಗಣಲ್ಲಿ ಕನ್ನಡ ಚಲನಚಿತ್ರರಂಗದ ಖ್ಯಾತ ತಾರೆ ಸುಧಾರಾಣಿ ಅವರ “ಬೆಳ್ಳಿಹೆಜ್ಜೆ” ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ. ರಾ. ಗೋವಿಂದು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜುಲೈ2:
ರೆಸ್ಟೋರೆಂಟ್ ಮೇಲೆ ಉಗ್ರ ಅಟ್ಟಹಾಸ
ಬಾಂಗ್ಲಾದೇಶದ ರಾಜಧಾನಿ ಢಾಕಾದ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.
ವಿದೇಶಿಯರೇ ಹೆಚ್ಚಾಗಿ ಉಳಿದುಕೊಳ್ಳುವ ಹೋಲಿ ಆರ್ಟಿಸನ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿರುವ ಉಗ್ರರು 35ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ.
ಕಾರ್ಯಾಚರಣೆ ಅಂತ್ಯ
ಅಂತರಾಷ್ಟ್ರೀಯ ಪ್ರತಿನಿಧಿ ವರದಿ
ಢಾಕಾ ರೆಸ್ಟೋರೆಂಟ್ ನಲ್ಲಿ ಉಗ್ರರ ಅಟ್ಟಹಾಸ ಅಂತ್ಯವಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 14 ಗಂಟೆಗಳ ಬಳಿಕ ಉಗ್ರರ ವಿರುದ್ಧ ನಡೆಸಿದ ಕಾರ್ಯಾಚರಣೆ ಅಂತ್ಯವಾಗಿದೆ.
100ಕ್ಕೂ ಹೆಚ್ಚು ಕಮಾಂಡೋಗಳು ಕಾರ್ಯಾಚರಣೆ ನಡೆಸಿದೆ. 5 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಬಾಂಗ್ಲಾ ಸೇನಾ ಪಡೆ ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಇಬ್ಬರು ಉಗ್ರನನ್ನು ಜೀವಂತವಾಗಿ ಹಿಡಿದಿದ್ದರು.
ಅಮರನಾಥ ಯಾತ್ರೆಗೆ ಚಾಲನೆ
48 ದಿನಗಳ ಪ್ರಸಿದ್ಧ ಅಮರನಾಥ ಯಾತ್ರೆ ಬಿಗಿ ಭದ್ರತೆಯಲ್ಲಿ ಶುಕ್ರವಾರ ಪ್ರಾರಂಭಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ 1282 ಯಾತ್ರಿಗಳ ಮೊದಲ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದ್ದರು. 900 ಪುರುಷರು, 225 ಮಹಿಳೆಯರು, 13 ಮಕ್ಕಳು ಮತ್ತು 144 ಸಾಧುಗಳನ್ನು ಹೊತ್ತ 33 ವಾಹನಗಳು ಸಿಆರ್​ಪಿಎಫ್ ಬಿಗಿ ಭದ್ರತೆಯಲ್ಲಿ ಅಮರನಾಥ ಪ್ರಯಾಣ ಆರಂಭಿಸಿದ್ದರು. ಉಗ್ರರ ದಾಳಿಯ ಭೀತಿ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಗೆ ಈ ಬಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು,
ಐಸಿಸ್ ಬೆದರಿಕೆ
ಐಸಿಸ್ ಉಗ್ರ ಸಂಘಟನೆ ಅಮೆರಿಕದ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನ ಬ್ರಿಟನ್ ನ ಹೀಥ್ರೋ ವಿಮಾನ ನಿಲ್ದಾಣಗಳ ಮೇಲೆ ಶೀಘ್ರದಲ್ಲಿಯೇ ದಾಳಿ ನಡೆಸುವುದಾಗಿ ಹೇಳಿಕೊಂಡಿತ್ತು. ಈ ಬಗ್ಗೆ ಐಸಿಸ್ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಬೆದರಿಕೆ ಹಾಕಿದೆ. ಜುಲೈ 4 ರಂದು ಸ್ವಾತಂತ್ರ್ಯ ದಿನ ಆಚರಣೆಯ ತಯಾರಿಯಲ್ಲಿರುವ ಅಮೆರಿಕದ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಅಮೆರಿಕ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿತ್ತು. ಉಗ್ರರ ಅಂತರ್ಜಾಲ ಮಾಹಿತಿ ವಿನಿಮಯದ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸಂಸ್ಥೆಯೊಂದಕ್ಕೆ ದೊರೆತ ಮಾಹಿತಿಯಾಗಿತ್ತು.
ಮೋರ್ ಮಳಿಗೆಗಳ ಮೇಲೆ ದಾಳಿ
ಬೆಂಗಳೂರಿನಾದ್ಯಂತ ‘ಮೋರ್’ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಆಹಾರ-ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ನಿರ್ದೇಶನ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಮೋರ್ ನಲ್ಲಿ ತೊಗರಿಬೇಳೆಗೆ ದುಪ್ಪಟ್ಟು ಬೆಲೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು.
ಜುಲೈ 4:
ಕಾಡಾನೆಗೆ ಬಸ್ ಡಿಕ್ಕಿ: ಆನೆ ಗಂಭೀರ
ಕಾಡಾನೆಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಕಾಡಾನೆ ಗಂಭೀರ ಗಾಯಗಳಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸಂಭವಿಸಿತ್ತು.
ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ
ಎರಡು ಬಿಎಂಟಿಸಿ ಬಸ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರಿಗೆ ಗಾಯಗಳಾದ ಘಟನೆ ಬೆಂಗಳೂರಿನ ನಾಗವಾರ ಜಂಕ್ಷನ್ ಬಳಿ ಸಂಭವಿಸಿತ್ತು.
ಸ್ಮಾರ್ಟ್ ಸಿಟಿ ಪಟ್ಟಿಗೆ ಬೆಂಗಳೂರು ಸೇರ್ಪಡೆ
ಸ್ಮಾರ್ಟ್ ಸಿಟಿ ಪಟ್ಟಿಗೆ ಬೆಂಗಳೂರು ಸೇರಿದಂತೆ 9 ನಗರಗಳನ್ನು ಸೇರ್ಪಡೆಗೊಳಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿತ್ತು.
ಅಮರನಾಥ ದರ್ಶನ ಪಡೆದ ರಾಜನಾಥ್ ಸಿಂಗ್
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಎನ್.ಎನ್.ವೋಹ್ರಾ ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ಗುಹೆಗೆ ಭೇಟಿ ನೀಡಿ ಪವಿತ್ರ ಶಿವಲಿಂಗದ ದರ್ಶನ ಪಡೆದರು.
ಸ್ವಿಸ್ ನಲ್ಲಿ ಭಾರತದ ಖಾತೆದಾರರ ಇಳಿಕೆ
ಸ್ವಿಸ್ ಬ್ಯಾಂಕ್ ಗಳಲ್ಲಿ ಠೇವಣಿಯಿಡುವ ಭಾರತೀಯರ ಸಂಖ್ಯೆ ಇಳಿಕೆಯಾಗಿದೆ. ಹೆಚ್ಚು ಠೇವಣಿ ಹಣವಿರುವ ದೇಶಗಳ ಪಟ್ಟಿಯಲ್ಲಿ ಭಾರತ 75ನೇ ಸ್ಥಾನದಲ್ಲಿದೆ. 2004ರಲ್ಲಿ ಭಾರತ 37 ನೇ ಸ್ಥಾನದಲ್ಲಿತ್ತು. ಕಳೆದ ವರ್ಷದ 61ನೇ ಸ್ಥಾನದಲ್ಲಿದ್ದ ಭಾರತ 75ನೇ ಸ್ಥಾನಕ್ಕಿಳಿದಿದೆ ಎಂದು ಸ್ವಸ್ ಬ್ಯಾಂಕ್ ಗಲ ವಾರ್ಷಿಕ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ. ಸ್ವಿಸ್ ಬ್ಯಾಂಕ್​ಗೆ ಜಮೆ ಮಾಡಿದವರಲ್ಲಿ ಗ್ರೇಟ್ ಬ್ರಿಟನ್(ಯು.ಕೆ.) ಪ್ರಥಮ ಸ್ಥಾನದಲ್ಲಿದೆ. ಅಮೆರಿಕ ದ್ವಿತೀಯ ಸ್ಥಾನ. ವೆಸ್ಟ್ ಇಂಡೀಸ್, ಜರ್ಮನಿ, ಫ್ರಾನ್ಸ್​ಗಳಿಗೆ ನಂತರದ ಸ್ಥಾನ.ಪಾಕ್​ಗೆ 69ನೇ ಸ್ಥಾನ.
ತೃತೀಯ ಸುತ್ತು ಪ್ರವೇಶಿಸಿದ ಸಾನಿಯಾ ಜೋಡಿ
2016-ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಸ್ ನ ಮಾರ್ಟಿನಾ ಹಿಂಗಿಸ್ ಜೋಡಿ ತೃತೀಯ ಸುತ್ತನ್ನು ಪ್ರವೇಶಿಸಿತ್ತು.
ವಿಧಾನಸಭೆ ಕಲಾಪ ಆರಂಭ
ವಿಧಾನಮಂಡಲ ಮಳೆಗಾಲದ ಅಧಿವೇಶನ ಆರಂಭವಾಗಿತ್ತು.3
ಮುಖ್ಯಸಚೇತಕರಾಗಿ ಐವನ್ ಪದಗ್ರಹಣ
ಸರ್ಕಾರದ ಮುಖ್ಯಸಚೇತಕರಾಗಿ ಐವನ್ ಡಿಸೋಜಾ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಐವನ್ ಅವರು ಮೇಲ್ಮನೆಯ ಸರ್ಕಾರದ ಮುಖ್ಯಸಚೇತಕರಾಗಿ ಪ್ರದಗ್ರಹಣ ಮಾಡಿದ್ದಾರೆ.
………………..
ಉತ್ತರ-ತತ್ತರ
ಭಾರೀ ವರ್ಷಾಧಾರೆಗೆ ಉತ್ತರಾಖಂಡ್ ತತ್ತರಿಸಿ ಹೋಗಿದೆ. ವರುಣನ ರೌದ್ರಾವತಾರಕ್ಕೆ ಮೇಘಸ್ಫೋಟ, ಭೂಕುಸಿತಕ್ಕೆ 38 ಮಂದಿ ದುರ್ಮರಣ ಹೊಂದಿದ್ದಾರೆ.
ಶ್ರದ್ಧಾಂಜಲಿ ಕಾರ್ಯಕ್ರಮ
ಢಾಕಾದಲ್ಲಿ ಉಗ್ರರ ಅಟ್ಟಹಾಸದಲ್ಲಿ ಮಡಿದವರಿಗೆ ಪ್ರಧಾನಿ ಶೇಖ‍್ ಹಸೀನಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಢಾಕಾದ ಆರ್ಮಿ ಸ್ಟೇಡಿಯಂನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಿಚ್ಚಗೆ ಅನಾರೋಗ್ಯ
ನಟ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ನಟ ಸುದೀಪ್ ಗೆ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತವಾಗಿತ್ತು.
ಭಾರೀ ಭುಕುಸಿತ
ಚೀನಾದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು. ಚೀನಾದಲ್ಲಿ ಮಳೆಯ ಅರ್ಭಟಕ್ಕೆ ಭೂಕುಸಿತ ಸಂಭವಿಸಿದ್ದು, ಭೂಕಸಿತದಿಂದ ಮೃತಪಟ್ಟವರ ಸಂಖ್ಯೆ 61ಕ್ಕೇ ಏರಿಕೆಯಾಗಿತ್ತು.
ಕುಂಬ್ಳೆ-ಕೊಹ್ಲಿ ಜಂಟಿ ಸುದ್ದಿಗೋಷ್ಠಿ
ಅನಿಲ್ ಕುಂಬ್ಳೆ-ವಿರಾಟ್ ಕೊಹ್ಲಿ ಜಂಟಿಯಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಂಡೀಸ್ ಪ್ರವಾಸಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದರು.
ಕನಕದಾಸರ 23 ಪುಸ್ತಕಗಳ ಲೋಕಾರ್ಪಣೆ ಮಾಡಿದ ಸಿಎಂ
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಷ್ಟ್ರೀಯ ಸಂತ ಕವಿ ಕನಕದಾಸರನ್ನು ಕುರಿತು 23 ಪುಸ್ತಕಗಳ ಲೋಕಾರ್ಪಣೆಯನ್ನು ನೆರವೇರಿಸಿದರು.
ಪ್ರಿಯಾಂಕಾಗೆ ಪ್ರಚಾರ ಉಸ್ತುವಾರಿ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದ್ದು, ಪ್ರಿಯಾಂಕಾ ವಾದ್ರಾರಿಗೆ ಪ್ರಚಾರ ಉಸ್ತುವಾರಿ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ದೇಶದೊಂದಿಗೆ ತ್ರಿಪುರಾ ಸಂಪರ್ಕ ಕಡಿತ
20 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತ್ರಿಪುರಾಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ದೇಶದೊಂದಿಗೆ ತ್ರಿಪುರ ರಾಜ್ಯ ಸಂಪರ್ಕ ಕಡಿದುಕೊಂಡಿತ್ತು.
ಜುಲೈ 5:
ನೂತನ ಸಂಸದರ ಪ್ರಮಾಣ ವಚನ
ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದೆ. ಇದರಿಂದ ಇಂದು 19 ಸಂಸದರು ಮೋದಿ ತಂಡಕ್ಕೆ ಸೇರ್ಪಡೆಯಾಗಲಿದ್ದರು. ರಾಷ್ಟ್ರಪತಿ ಭವನದಲ್ಲಿರುವ ಮೆಜೆಸ್ಟಿಕ್ ದರ್ಬಾರ್ ಹಾಲ್ ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಅಧಿಕಾರಿಗಳ ಹತ್ಯೆಗೆ ಸಂಚು
ಭಾರತದ ಅಧಿಕಾರಿಗಳ ಹತ್ಯೆಗೆ ಅಲ್ ಖಯದಾ ಉಗ್ರರ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಭಯೋತ್ಪಾದಕರು ಐಎಎಸ್ ಐಪಿಎಸ್ ಅಧಿಕಾರಿಗಳ ಮೇಲೆ ದಾಳಿಗೆ ಸಂಚು ರೂಪಿಸಿದ್ದರು.
ಬಯೋ ಡೀಸೆಲ್ ಬಸ್ ಗೆ ಚಾಲನೆ
ದೇಶದಲ್ಲೇ ಪ್ರಥಮ ಬಾರಿಗೆ ಬಯೋ ಡೀಸೆಲ್ ಆಧಾರಿತ ಬಸ್ಸನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರ್ವಜನಿಕ ಬಳಕೆಗೆ ಸಮರ್ಪಿಸಿತ್ತು. ಸಂಪೂರ್ಣವಾಗಿ ಬಯೋ ಡೀಸೆಲನ್ನೇ ಬಳಸಿಕೊಂಡು ಈ ಸಾರಿಗೆ ಬಸ್ ಬೆಂಗಳೂರು- ಚೆನ್ನೈ ಮಾರ್ಗವಾಗಿ ಪ್ರತಿದಿನ ಸಂಚರಿಸಲಿದೆ. ಶೇ. 20 ರಷ್ಟು ಬಯೋ ಡೀಸೆಲ್ ಮತ್ತು ಶೇ. 80 ರಷ್ಟು ಪೆಟ್ರೋಲ್ ನ್ನು ಬಳಸಿಕೊಂಡು ಡಿ- 20 ಬಸ್‌ಗಳು ಸಂಚರಿಸುತ್ತಿದ್ದು, ಇದೀಗ ಮೊದಲ ಬಾರಿಗೆ ಈ ಬಸ್ ಗಳು100 ರಷ್ಟು ಬಯೋ ಡೀಸೆಲ್ ನ್ನು ಬಳಸಿಕೊಂಡು ಚಲಿಸಲಿವೆ.
ವಿಧಾನ ಸಭಾಧ್ಯಕ್ಷರಾಗಿ ಕೋಳಿವಾಡ್ ಆಯ್ಕೆ
ಕರ್ನಾಟಕ ವಿಧಾನ ಸಭೆಯ ನೂತನ ಸಭಾಧ್ಯಕ್ಷರಾಗಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಬಿ. ಕೋಳಿವಾಡ್ ಅವರು ವಿಧಾನ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸುರಂಗ ಮಾರ್ಗಕ್ಕೆ ಗ್ರೀನ್ ಸಿಗ್ನಲ್
ಶಿರಾಡಿಘಾಟ್‍ನಲ್ಲಿ 19 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಪರಿಸರ ಇಲಾಖೆಯ ಅನುಮತಿ ದೊರೆತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದರು.
ಜುಲೈ6 :
ಜಗತ್ತಿನ ಅತಿದೊಡ್ಡ ಚರಕ ಲೋಕಾರ್ಪಣೆ
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್-3 ರಲ್ಲಿ ಪ್ರತಿಷ್ಠಾಪಿಸಿದ್ದ ಜಗತ್ತಿನ ಅತಿದೊಡ್ಡ ಚರಕವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉದ್ಘಾಟಿಸಿದರು. ಮುದ್ರೆಗಳು, ಆನೆ ಚಿತ್ರ, ಸೂರ್ಯನ ಪ್ರತಿಮೆ, ಚರಕದ ಜತೆ ನಿರ್ಮಾಣ ಮಾಡಲಾಗಿದೆ. 27 ಫೀಟ್ ಉದ್ಧ ,15 ಫೀಟ್ ಎತ್ತರವಿರುವ ಚರಕ ನಿರ್ಮಿಸಲು ಅಹಮದಾಬಾದಿನ 42 ಕಾರ್ವಿುಕರು 50 ದಿನ ಸತತ ಕೆಲಸ ಮಾಡಿದ್ದಾರೆ.
ಡ್ರೋನ್ ಕ್ಯಾಮರ್ ನಿಷೇಧಕ್ಕೆ ಚಿಂತನೆ
ಕರ್ನಾಟಕದಲ್ಲಿ ಡ್ರೋಣ್ ಕ್ಯಾಮರಾ ನಿಷೇಧಿಸುವಂತೆ ಮನವಿ ಸಲ್ಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಡಿಜಿ&ಐಜಿಪಿ ಓಂ ಪ್ರಕಾಶ್ ಮನವಿ ಸಲ್ಲಿಸಲಾಗಿತ್ತು.
ಜುಲೈ 7:
ಹಫೀಜ್ ಸಯೀದ್ ಆರೋಪ
ಭಾರತ, ಅಮೆರಿಕ ವಿರುದ್ಧ ಜೆಯುಡಿ ಮುಖ್ಯಸ್ಥ, ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೋದ್ ಆರೋಪ ಮಾಡಿದ್ದಾನೆ. ಪಾಕಿಸ್ತಾನ ವಿರುದ್ಧ ಎರಡು ರಾಷ್ಟ್ರಗಳು ಭಾರಿ ಸಮರಕ್ಕೆ ಸಿದ್ಧವಾಗುತ್ತಿವೆ ಎಂದು ಹಫೀಜ್ ಆರೋಪಿಸಿದ್ದ. ಈ ಬಗ್ಗೆ ಉಗ್ರ ಹಫೀಜ್ ಲಾಹೋರ್ ನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ.
ಭೀಕರ ಪ್ರವಾಹ
ಅಸ್ಸಾಂನಲ್ಲಿ ಭಾರೀ ಮಳೆಯಿಂದ ಭೀಕರ ಪ್ರವಾಹ ಏರ್ಪಟ್ಟಿದೆ. ಪ್ರವಾಹದಿಂದ 7 ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಅಸ್ಸಾಂನ ಲಖಿಂಪುರ, ಧೆಮಜಿ, ನಾಗಾಂನ್, ಚೊರಹಟ, ವಿಶ್ವನಾಥ, ಮೋರಿಗಾಂವ್, ಗೋಳಘಾಟ್ ಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಿಮಿತಿಘಾಟ್, ತೇಜ್ ಪುರ, ಬ್ರಹ್ಮಪುತ್ರ, ಜಿಯ ಭರಲಿ, ಧನಸಿರಿ ನದಿಗಳು ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿದೆ.
ಆತ್ಮಾಹುತಿ ಬಾಂಬ್ ದಾಳಿ
ದಕ್ಷಿಣ ಯೆಮನ್ ನಲ್ಲಿ ಕಾರ್ ಬಾಂಬ್ ದಾಳಿ ನಡೆದಿದೆ. ಸೇನೆ, ಭದ್ರತಾಪಡೆ ಕಚೇರಿ ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಆಡೆನ್ ಏರ್ ಪೋರ್ಟ್ ಗೆ ಹೊಂದಿಕೊಂಡ ಭದ್ರತಾಪಡೆ ಸೇನೆ ಕಚೇರಿಗೆ ಕಾರು ನುಗ್ಗಿಸಿ ತನ್ನನ್ನು ತಾನು ಸ್ಫೋಟಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ.
ಕಪ್ಪುಪಟ್ಟಿಗೆ ಉತ್ತರಕೊರಿಯಾ
ವಿಶ್ವದ ದೊಡ್ಡಣ್ಣ ಅಮೆರಿಕ ದೇಶ, ಉತ್ತರ ಕೊರಿಯಾ ಹಾಲಿ ಅಧ್ಯಕ್ಷ ಕಿಮ್ ಜಂಗ್ ಉನ್ ನನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಪ್ರಪಂಚದಲ್ಲೇ ಅತೀ ದುರಾಡಳಿತಕ್ಕೊಳಪಟ್ಟ ಉತ್ತರಕೊರಿಯಾ ಹಾಗೂ ಅಧ್ಯಕ್ಷ ಕಿಮ್ ಮಾನವ ಹಕ್ಕುಗಳನ್ನು ಮಿತಿಮೀರಿ ಉಲ್ಲಂಘಿಸಿದ್ದಾರೆ. ಅಲ್ಲದೆ ನಾಯಕ ಕಿಮ್ ನಿಂದ ನಡೆಯುತ್ತಿರುವ ಭಾರೀ ದುರಾಡಳಿತ-ಮಾನವಹಕ್ಕು ಉಲ್ಲಂಘಟನೆ ಆರೋಪಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಉತ್ತರ ಕೊರಿಯಾ ನಾಯಕ ಕಿಮ್ ಸೇರಿದಂತೆ ಇತರ 10 ಉನ್ನತಾಧಿಕಾರಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಶಸ್ತ್ರಚಿಕಿತ್ಸೆಕ್ಕೊಳಗಾದ ಸಚಿನ್
ಕ್ರಿಕೆಟ್ ದಂತಕಥೆ ತೆಂಡೂಲ್ಕರ್ ಅವರು ಶಸ್ತ್ರಚಿಕಿತ್ಸೆಕ್ಕೊಳಗಾಗಿದ್ದಾರೆ. ಕ್ರಿಕೆಟ್ ದೇವರು ಮಂಡಿನೋವಿಗೆ ಶಸ್ತ್ರಚಿಕಿತ್ಸೆಕ್ಕೊಳಗಾಗಿದ್ದರು. ಎಡಗಾಲಿನ ಮಂಡಿನೋವಿನಿಂದ ಬಳಲುತ್ತಿರುವ ಸಚಿನ್ ತೆಂಡೂಲ್ಕರ್ ಅವರು ಲಂಡನ್ ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು.
ಬಾಂಬ್ ಸ್ಫೋಟ
ಬಾಂಗ್ಲಾ ದೇಶಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಬಾಂಬ್ ಸ್ಫೋಟವಾಗಿದೆ. ಶೋಲ್ಕಿಯಾದ ಈದ್ಗಾ ಮೈದಾನದಲ್ಲಿ ನಡೆಯುತ್ತಿದ್ದ ಮುಸ್ಲಿಂ ಬಾಂಧವರ ಸಾಮೂಹಿಕ ರಂಜಾನ್ ಪ್ರಾರ್ಥನೆ ವೇಳೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದಾರೆ.
ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಐದು ದಿನಗಳ ಕಾಲ(ಜು.11) ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಆಫ್ರಿಕಾ ಖಂಡದ 4 ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಮೊಝಾಂಬಿಕ್, ದಕ್ಷಿಣಾ ಆಫ್ರಿಕಾ, ತಾಂಜೇನಿಯಾ ಮತ್ತು ಕೀನ್ಯಾ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ.
ಅಮ್ಮಾ ಎದ್ಧೇಳಮ್ಮ…
ಸಾವನ್ನಪ್ಪಿದ ತಾಯಿ ಆನೆಯನ್ನು ಎಬ್ಬಿಸಲು ಮರಿಯಾನೆ ಸತತ 24 ಗಂಟೆಗಳ ಕಾಲ ಹರಸಾಹಸಪಟ್ಟ ಮನಕಲಕುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನ ನರಸೀಪುರಮ್ ಗ್ರಾಮದ ಬಳಿ ನಡೆದಿತ್ತು.
ನಮಾಮಿ ಗಂಗೆ ಯೋಜನೆಗೆ ಇಂದು ಚಾಲನೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ನಮಾಮಿ ಗಂಗೆ ಕಾರ್ಯಕ್ರಮದ ಅನ್ವಯ 231 ಯೋಜನೆಗಳಿಗೆ ಈ ದಿನ ಚಾಲನೆ ಸಿಕ್ಕಿದೆ.
ಮೊಸಳೆ ಸೆರೆ
ಬಾಗಲಕೋಟೆಯಲ್ಲಿ ಅರಣ್ಯಾಧಿಕಾರಿಗಳು ಮೊಸಳೆಗಳನ್ನು ಸೆರೆಹಿಡಿದಿದ್ದಾರೆ. ಜಿಲ್ಲೆಯ ಆನದಿನ್ನಿ ಬ್ಯಾರೇಜ್ ಬಳಿ ಘಟಪ್ರಭಾ ನದಿಯಲ್ಲಿ ಮೂರು ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಮೂರು ಮೊಸಳೆಗಳನ್ನು ಸೆರೆಹಿಡಿದಿದ್ದರು.
ಜುಲೈ 8:
ಮತ್ತೊಬ್ಬ ಡಿವೈಎಸ್ ಆತ್ಮಹತ್ಯೆ
ರಾಜ್ಯದಲ್ಲಿ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ನಂತರ ಮತ್ತೊಬ್ಬ ಡಿವೈಎಸ್ ಪಿ ಗುರುವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಕೊಡಗು ಕುಶಾಲನಗರದ ಎಂ ಕೆ ಗಣಪತಿ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಿಟೋರಿಯಾ ತಲುಪಿದ ಪ್ರಧಾನಿ ಮೋದಿ
ಆಫ್ರಿಕಾದ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊಜಾಂಬಿಕ್​ನಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾಕ್ಕೆ ತಲುಪಿದ ಪ್ರಧಾನಿ ಮೋದಿ ಅವರಿಗೆ ವಿದೇಶಾಂಗ ಸಚಿವ ಕೊವಾನಾ ಮಾಶಾಬನೆ ಹಾಗೂ ಸಣ್ಣ ಕೈಗಾರಿಕೋದ್ಯಮ ಖಾತೆ ಸಚಿವೆ ಲಿಂಡಿವೆ ಜುಲು ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಝಾಕೀರ್ ಭಾಷಣ ಪರಿಶೀಲನೆಗೆ ಕೇಂದ್ರ ಸೂಚನೆ
ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ 20 ಜನ ವಿದೇಶಿಯರ ಧಾರುಣ ಸಾವಿಗೆ ಕಾರಣವಾದ ಉಗ್ರರ ದಾಳಿಯ ಪ್ರಚೋದನೆಗೆ ಡಾ.ಝಾಕೀರ್ ನಾಯ್ಕ್ ಭಾಷಣ, ಸಿಡಿಗಳು ಕಾರಣ ಎಂಬ ವರದಿ ಹಿನ್ನಲೆಯಲ್ಲಿ ನಾಯ್ಕ್ ಭಾಷಣಗಳನ್ನು ಪರಿಶೀಲನೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದರು.
ಜುಲೈ 9:
ಬಿಜೆಪಿ ಪ್ರತಿಭಟನೆ
ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ತಕ್ಷಣವೇ ಸಿಬಿಐಗೆ ವಹಿಸಬೇಕು ಹಾಗೂ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವರಾದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮೊದಲಾದವರು ಭಾಗವಹಿಸಿದ್ದರು.
ಅಧಿಕಾರ ಸ್ವೀಕಾರ
ಬೆಂಗಳೂರಿನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ನೂತನ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ಪ್ರತಾಪ್‌ ಸಿಂಹ ಅಧಿಕಾರ ವಹಿಸಿಕೊಂಡರು.
ಬಂಡೆ ಪತ್ನಿ ವಿಧಿವಶ
ದಿವಂಗತ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಪತ್ನಿ ವಿಧಿವಶರಾಗಿದ್ದಾರೆ. ಇಂದು ಮುಂಜಾನೆ 5 ಗಂಟೆಗೆ ಬಂಡೆ ಪತ್ನಿ ಮಲ್ಲಮ್ಮ ಬಂಡೆ ನಿಧನರಾಗಿದ್ದಾರೆ. ಬಂಡೆ ಪತ್ನಿ ಹಲವು ದಿನಗಳಿಂದ ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಲಬುರ್ಗಿಯ ಸೂರ್ಯನಗರದ ಸಹೋದರಿ ಮನೆಯಲ್ಲಿ ಸಾವನ್ನಪ್ಪಿದ್ದರು.
ಭಯೋತ್ಪಾದನಾ ತಡೆಗೆ ಒಪ್ಪಂದ
ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ತಡೆಗಾಗಿ ದಕ್ಷಿಣ ಆಫ್ರಿಕಾ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಹುಪಕ್ಷೀಯ ವೇದಿಕೆಯಲ್ಲಿ ಭಯೋತ್ಪಾದನೆ ತಡೆ ವಿಚಾರದ ಜಂಟಿ ಪ್ರಸ್ತಾಪಕ್ಕೂ ಒಪ್ಪಿಗೆ ನೀಡಲಾಗಿದೆ.
ಭಾರತದ ಮಾರ್ಗ ಅನುಸರಿಸಿ
ನೆರೆರಾಷ್ಟ್ರಗಳ ಸಮಸ್ಯೆ ಪರಿಹಾರಕ್ಕೆ ಭಾರತದ ಮಾರ್ಗ ಅನುಸರಿಸಿ ಎಂದು ಚೀನಾಕ್ಕೆ ಅಮೆರಿಕ ಸಲಹೆ ನೀಡಿದೆ. ಸಾಗರ ಸಂಬಂಧಿ ವ್ಯಾಜ್ಯಗಳ ಪರಿಹಾರಕ್ಕೆ ಭಾರತ ಮಾರ್ಗ ಸೂಕ್ತವಾಗಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿತ್ತು.
ವರುಣ ಅರ್ಭಟ ಭೋಪಾಲ್ ತತ್ತರ
ಭಾರೀ ವರ್ಷಾಧಾರೆಗೆ ಭೋಪಾಲ್ ತತ್ತರಿಸಿ ಹೋಗಿದೆ. ಮುಂಗಾರು ಮಳೆಗೆ ಮಧ್ಯಪ್ರದೇಶದಲ್ಲಿ ರಾಜಧಾನಿ ಪ್ರವಾಹ ಸ್ಥಿತಿ ಏರ್ಪಟ್ಟಿತ್ತು. ಭೋಪಾಲ್ ನಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಇದರಿಂದ ಜನರು ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಎಸ್ಕಲೇಟರ್‌ಗಳಿಗೆ ಚಾಲನೆ
ಮಂಗಳೂರು ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ಎರಡು ಎಸ್ಕಲೇಟರ್‌ಗಳಿಗೆ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಚಾಲನೆ ನೀಡಿದರು. ನಗರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಪ್ರಮುಖ ಬೇಡಿಕೆಗಳಲ್ಲಿ ಎಸ್ಕಲೇಟರ್ ಕೂಡಾ ಒಂದಾಗಿತ್ತು. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ.
ಜುಲೈ 11
ದಕ್ಷಿಣ ಆಫ್ರಿಕ ಪಯಣ ನನ್ನ ಪಾಲಿಗೆ ‘ತೀರ್ಥ ಯಾತ್ರೆ’ ಆಯಿತು: ಪ್ರಧಾನಿ ಮೋದಿ
ಪೀಟರ್ ಮಾರಿಟ್ಜ್ ಬರ್ಗ್ (ದಕ್ಷಿಣ ಆಫ್ರಿಕ): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ‘ಸತ್ಯಾಗ್ರಹದ ಜನ್ಮಸ್ಥಳ’ (ಬರ್ತ್ ಪ್ಲೇಸ್ ಆಫ್ ಸತ್ಯಾಗ್ರಹ) ಪ್ರದರ್ಶನವನ್ನು ಪ್ರಧಾನಿ ಉದ್ಘಾಟಿಸಿದರು.
ಕಾಶ್ಮೀರದಲ್ಲಿ ಹೆಚ್ಚಿದ ಹಿಂಸಾಚಾರ: ಕೇಂದ್ರ ಗೃಹ ಸಚಿವರಿಂದ ಸಭೆ
ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉಗ್ರ ಬುರ್ಹಾನ್ ಮುಜಾಫರ್ ವನಿ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನೆಗಳಿಗೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಿದ್ದಾರೆ. ರಾಜನಾಥ್ ಸಿಂಗ್ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಅಧಿಕಾರಿಗಳ ಸಭೆ ಕರೆದಿದ್ದು ಗೃಹ ಕಾರ್ಯದರ್ಶಿ, (ಕಾಶ್ಮೀರ ವಿಭಾಗದ ಜಂಟಿ ಕಾರ್ಯದರ್ಶಿ, ಮಾಹಿತಿ ಮತ್ತು ಪ್ರಸಾರ ಮುಖ್ಯಸ್ಥರು ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕುಲಗಮ್ ಅನಂತನಾಗ್, ದಕ್ಷಿಣ ಕಾಶ್ಮೀರ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಘಟನೆಯಲ್ಲಿ ಸಾವನ್ನಪ್ಪಿದ ಸಂಖ್ಯೆ 16ಕ್ಕೆ ಏರಿದೆ. ಸುಮಾರು 100 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಂಪ್ರದಾಯಿಕ ನಗಾರಿ ಭಾರಿಸಿದ ಪ್ರಧಾನಿ
ಆಫ್ರಿಕದ ನಾಲ್ಕು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಡ ರಾತ್ರಿ ತಾಂಜಾನಿಯಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಪ್ರಧಾನಿ ಮೋದಿಯವರಿಗೆ ಅದ್ದೂರಿ ಸ್ವಾಗತ ನಿಡಲಾಗಿದೆ. ಈ ವೇಳೆ ತಾಂಜಾನಿಯ ಅಧ್ಯಕ್ಷ ಡಾ. ಜಾನ್ ಮಗುಫುಲಿ ಅವರನ್ನು ಮೋದಿ ಭೇಟಿ ಮಾಡಿದರು. ಈ ಭೇಟಿಯ ಸಂದರ್ಭದಲ್ಲಿ ಮಗುಫುಲಿ ಅವರು ಮೋದಿ ಅವರಿಗೆ ತಾಂಜಾನಿಯದ ಸಾಂಪ್ರದಾಯಿಕ ನಗಾರಿಯನ್ನು ಭಾರಿಸಿ ತೋರಿಸಿದರು. ತಕ್ಷಣವೇ ಮೋದಿ ಅವರೂ ತಾಂಜಾನಿಯ ಅಧ್ಯಕ್ಷರ ಜೊತೆಗೆ ನಗಾರಿ ಭಾರಿಸಿದರು.
ಭಾರತ-ತಾಂಜಾನಿಯಾ ಮಹತ್ವದ ಒಪ್ಪಂದಗಳಿಗೆ ಸಹಿ
ಭಾರತ-ತಾಂಜಾನಿಯ ಉಭಯದೇಶಗಳು ವಿವಿಧ ರಂಗಗಳಲ್ಲಿ ಪರಸ್ಪರ ಸಹಕರಿಸುವ ಐದು ಮಹತ್ವದ ಒಪ್ಪಂದಗಳಿಗೆ ಸಹಿಹಾಕಿತ್ತು.
ಸೋಲಾರ್ ದೀಪ ಉತ್ಪಾದಿಸುವ ಮಹಿಳೆಯರನ್ನು ಭೇಟಿ ಮಾಡಿದ ಪ್ರಧಾನಿ
ಭಾರತ ಸರ್ಕಾರದ ಯೋಜನೆಯಿಂದ ಸೋಲಾರ್ ದೀಪಗಳನ್ನು ಉತ್ಪಾದಿಸುವ ತರಬೇತಿ ಪಡೆದಿರುವ ಆಫ್ರಿಕಾದ ವಿವಿಧ ದೇಶಗಳ ಮಹಿಳೆಯರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು.
ಸಂಕಷ್ಟಕ್ಕೆ ಸಿಲುಕಿದ್ದ ಅಮರನಾಥ್ ಯಾತ್ರಾರ್ಥಿಗಳು ಸುರಕ್ಷಿತ
ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಕರ್ನಾಟಕದಿಂದ ಯಾತ್ರೆಗೆ ಹೊರಟಿದ್ದ ಇನ್ನೂರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದರು.
ಪೋಸ್ಟ್ ಮೂಲಕ ಗಂಗಾ ಜಲ ಯೋಜನೆಗೆ ಚಾಲನೆ
ಪವಿತ್ರ ಗಂಗಾ ಜಲವನ್ನು ಸುಲಭದಲ್ಲಿ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಗಂಗಾ ಜಲ ಯೋಜನೆಗೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಸದನದಲ್ಲಿ ಜಾರ್ಜ್ ರಾಜೀನಾಮೆಗೆ ಒತ್ತಾಯ
ಮಂಗಳೂರು ಡಿವೈಎಸ್​ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸೋಮವಾರ ಆರಂಭಗೊಂಡ ವಿಧಾನಮಂಡಲ ಕಲಾಪದ ಆರಂಭದಲ್ಲಿಯೇ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಿದ್ದರು. ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದ ವಿಪಕ್ಷ ಸದನದ ಬಾವಿಗಿಳಿದು ಪ್ರತಿಭಟಿಸಿತು. ಪರಿಣಾಮ ಕೆಲ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು.
ಜುಲೈ 15
ಅಮರನಾಥ್ ಯಾತ್ರೆ ಮತ್ತೆ ಸ್ಥಗಿತ
ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯಿಂದಾಗಿ ಉಂಟಾಗಿರುವ ಗಲಭೆ ವಾತಾವರಣ ಇನ್ನೂ ಅಮರನಾಥ್ ಯಾತ್ರೆ ಮತ್ತೊಮ್ಮೆ ಸ್ಥಗಿತಗೊಂಡಿತ್ತು.
ಫ್ರಾನ್ಸ್ ನಲ್ಲು ಉಗ್ರರ ಅಟ್ಟಹಾಸ
ಫ್ರಾನ್ಸ್ ನಲ್ಲಿ ರಾಷ್ಟ್ರೀಯ ದಿನದಂದೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನೀಸ್ ಪಟ್ಟದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ರೆಸಾರ್ಟ್ ನಲ್ಲಿ ಸೇರಿದ್ದ ನೂರಾರು ಜನರ ಮೇಲೆ ಟ್ರಕ್ ಹರಿಸಿ ಜನರ ಮಾರಣಹೋಮ ನಡೆಸಲಾಗಿದೆ. ಘಟನೆಯಲ್ಲಿ 80 ಮಂದಿಯನ್ನು ಹತ್ಯೆ ಮಾಡಲಾಗಿದ್ದು, 100ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಾದ ಬ್ಯಾಸ್ಟೀಲ್ ಡೇ ಅಂಗವಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಅಪರಿಚಿತ ಉಗ್ರರು ಜನರ ಮೇಲೆ ಯದ್ವಾತದ್ವಾ ಟ್ರಕ್ ನುಗ್ಗಿಸಿದ್ದಾರೆ. ಸಿಡಿಮದ್ದು ಪ್ರದರ್ಶನ ವೀಕ್ಷಿಸುತ್ತಿದ್ದಾಗ ದಾಳಿ ನಡೆಸಿದ ಭಯೋತ್ಪಾದಕರು ತನ್ನ ಕೃತ್ಯಕ್ಕೆ ಸ್ಫೋಟಕ ತುಂಬಿದ ಟ್ರಕ್ ಬಳಸಿಕೊಂಡಿದ್ದು, 2 ಕಿ.ಮೀಟರ್​ಗೂ ದೂರ ಮನಬಂದಂತೆ ನುಗ್ಗಿಸಿ ದಾಳಿ ನಡೆಸಿದ್ದಾನೆ. ಟ್ರಕ್​ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಗ್ರೆನೇಡ್​ಗಳನ್ನು ಇರಿಸಿಕೊಂಡಿದ್ದ ಎನ್ನಲಾಗಿದೆ. ಇದೇ ವೇಳೆ ತನ್ನ ಕೈನಲ್ಲಿದ್ದ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾರೆ.
ಭಾರತೀಯರು ಸ್ಥಳಾಂತರ
ದಕ್ಷಿಣ ಸುಡಾನ್ ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಶಿಫ್ಟ್ ಮಾಡಲಾಗಿದೆ. ಎರಡು ವಿಮಾನಗಳ ಮೂಲಕ 450 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ. 32 ಕನ್ನಡಿಗರು ಸೇರಿದಂತೆ 450 ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ. ಭಾರತೀಯರು ದಕ್ಷಿಣ ಸುಡಾನ್ ರಾಜಧಾನಿ ತೂಬಾದಲ್ಲಿ ಸಿಲುಕಿದ್ದರು.
ಕಬಾಲಿ ಚಿತ್ರ ಲೀಕ್: ಕೋರ್ಟ್ ಮೊರೆ ಹೋದ ನಿರ್ಮಾಪಕರು
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಬಾಲಿ ಚಿತ್ರ ಬಿಡುಗಡೆ ಮುನ್ನವೇ ಆನ್ ​ಲೈನ್​ನಲ್ಲಿ ಲೀಕ್ ಆಗಿರುವುದು ಚಿತ್ರತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ನಿರ್ಮಾಪಕರು ಮಡ್ರಾಸ್ ಹೈಕೋರ್ಟ್ ಮೇಟ್ಟಿಲೇರಿದ್ದರು.
ಫ್ರಾನ್ಸ್ ನಲ್ಲಿ ಉಗ್ರರ ದಾಳಿ: ಪ್ರಧಾನಿ, ರಾಷ್ಟ್ರಪತಿ ಖಂಡನೆ
ಫ್ರಾನ್ಸ್​ನ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಲವಾಗಿ ಖಂಡಿಸಿದ್ದರು.
ಜುಲೈ 16
ಭಾರತೀಯರಿಗೆ ಮುನ್ನೆಚ್ಚೆರಿಕೆ
ಟರ್ಕಿಯ ಅಂಕಾರಾ, ಇಸ್ತಾಂಬುಲ್ ನಲ್ಲಿ ಸೇನಾದಂಗೆ ಹಿನ್ನೆಲೆಯಲ್ಲಿ ಟರ್ಕಿಯಲ್ಲಿರುವ ಭಾರತೀಯರಿಗೆ ಮುನ್ನೆಚ್ಚೆರಿಕೆಯ ಸೂಚನೆ ನೀಡಲಾಗಿತ್ತು. ರಸ್ತೆಗೆ ತೆರಳದೇ ಮನೆಗಳಲ್ಲಿ ಉಳಿದುಕೊಳ್ಳುವಂತೆ ಭಾರತೀಯರಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಇಲಾಖೆ ಸೂಚನೆ ನೀಡಲಾಗಿತ್ತು.
ಆರದ ಕಳಸಾ ಕಿಚ್ಚು…
ಕಳಸಾ-ಬಂಡೂರಿ ಹೋರಾಟಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬಂದ್ ಗೆ ಕರೆ ನೀಡಲಾಗಿತ್ತು. ರೈತ ಸಂಘಟನೆಗಳಿಂದ ಗದಗ ಜಿಲ್ಲೆ ಸಂಪೂರ್ಣ ಬಂದ್ ಮಾಡಲಾಗಿತ್ತು.
11ನೇ ಅಂತಾರಾಜ್ಯ ಮಂಡಳಿ ಸಭೆ
ದೆಹಲಿಯಲ್ಲಿ ಇಂದು 11ನೇ ಅಂತಾರಾಜ್ಯ ಮಂಡಳಿ ಸಭೆ ನಡೆಯಲಿದೆ.ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಸಭೆಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಉಪಾಧ್ಯಕ್ಷತೆ ವಹಿಸಲಿದ್ದು. ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸದಸ್ಯರು, ಕೇಂದ್ರದ ಕೆಲವು ಸಚಿವರು, ಸಿಎಂಗಳು ಭಾಗಿಯಾಗಿದ್ದರು.
ಟರ್ಕಿಯಲ್ಲಿ ಸಿಲುಕಿದ ಕನ್ನಡದ ಕುಸ್ತಿಪಟು
ಟರ್ಕಿಯಲ್ಲಿ ಅಂಕಾರಾ, ಇಸ್ತಾಂಬುಲ್ ನಲ್ಲಿ ನಡೆಯುತ್ತಿರುವ ಸೇನಾದಂಗೆಯಲ್ಲಿ ಕರ್ನಾಟಕ ಮೂಲದ ಕುಸ್ತಿಪಟು ಸಿಲುಕಿಕೊಂಡಿದ್ದಾರೆ. ದಾವಣಗೆರೆ ಮೂಲದ ಕುಸ್ತಿಪಟು ಅರ್ಜುನ್ ಸಿಕ್ಕಿಹಾಕಿಕೊಂಡಿದ್ದರು. ವಿಶ್ವಕುಸ್ತಿ ಪಂದ್ಯಾವಳಿಗೆ ಅರ್ಜುನ್ ತೆರಳಿದ್ದರು. ಕೋಚ್ ಶಿವಾನಂದ್ ಗೆ ಅರ್ಜುನ್ ಫೋನ್ ಮಾಡಿ ಟರ್ಕಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಜು.19ರಂದು ಕರಾಳ ದಿನ: ನವಾಜ್ ಷರೀಫ್
ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಗಳಿಂದ ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿ ಹುತಾತ್ಮ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಘೋಷಿಸಿದ್ದರು. ವಾನಿ ಹತ್ಯೆಗೆ ತೀವ್ರ ಕಳವಳ ಹಾಗೂ ಶೋಕ ವ್ಯಕ್ತಪಡಿಸಿದ ಅವರು, ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಭಾರತೀಯ ಪಡೆಗಳು ಸೇನಾ ಬಲ ಪ್ರಯೋಗಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಅಲ್ಲದೇ ಜು.19ರಂದು ಕರಾಳ ದಿನ ಆಚರಿಸುವುದಾಗಿ ಹೇಳಿದ್ದಾರೆ.
ತೈಲ ಬೆಲೆಯಲ್ಲಿ ಇಳಿಕೆ
ಪೆಟ್ರೋಲ್ ದರ ಪ್ರತಿ ಲೀಟರ್ ಗೆ 2.25 ರುಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 42 ಪೈಸೆ ಇಳಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ತೈಲ ಬೆಲೆ ಇಳಿಸಲಾಗಿದೆ.
ಐದು ವಿಧೇಯಕಗಳ ಮಂಡನೆ, ಅಂಗೀಕಾರ
ರಾಜ್ಯ ವಿಧಾನಸಭೆಯಲ್ಲಿ ಶಾಸನ ರಚನೆ ಕಾರ್ಯದ ಅಂಗವಾಗಿ ಐದು ವಿಧೇಯಕಗಳು ಮಂಡಿಸಲ್ಪಟ್ಟಿದ್ದು, ಐದು ವಿಧೇಯಕಗಳಿಗೂ ಧ್ವನಿ ಮತದಿಂದ ಅಂಗೀಕಾರ ದೊರೆಯಿತು. ಅರಣ್ಯ ಸಚಿವ ರಮಾನಾಥ್ ರೈ ಅವರು ಕರ್ನಾಟಕ ಅರಣ್ಯ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಕಾನೂನು ಹಾಗೂ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಅವರು ಗೃಹ ಸಚಿವರ ಪರವಾಗಿ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ ಮಂಡಿಸಿದರು. ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ಅವರು ಕರ್ನಾಟಕ ಸೌಹಾರ್ಧ ಸಹಕಾರಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು, ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ವಿಧೇಯಕವನ್ನು ಮಂಡಿಸಿದರು, ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು 2016 ರ ಕರ್ನಾಟಕ ಗೃಹ ನಿರ್ಮಾಣ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಎಲ್ಲಾ ಐದು ವಿಧೇಯಕಗಳು ಧ್ವನಿ ಮತದಿಂದ ಅನುಮೋದನೆಗೊಂಡವು.
ರೆಬೆಲ್ ಯೋಧರ ದಂಗೆ ಯತ್ನ ವಿಫಲ
ಟರ್ಕಿಯಲ್ಲಿ ಸಿಪಾಯಿ ದಂಗೆ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಬಂಡುಕೋರರ ದಂಗೆಯನ್ನು ವಿಫಲಗೊಳಿಸಿದೆ. ಸರ್ಕಾರದ ಎದುರು ರೆಬೆಲ್ ಯೋಧರು ಶರಣಾಗುತ್ತಿದ್ದರು. ಇದರಿಂದ ಇಸ್ತಾಂಬುನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ ಅಂಕಾರಾದಲ್ಲಿ ಆತಂಕದ ಸನ್ನಿವೇಶ ಮುಂದುವರಿದಿತ್ತು.
ಜುಲೈ 18
ಐಸಿಸ್ ಸೇರಿರುವುದಾಗಿ ಸಂದೇಶ ರವಾನೆ
ಕೇರಳದಿಂದ ಇತ್ತೀಚೆಗೆ ಕಾಣಿಯಾಗಿರುವ 15 ಯುವಕರ ಪೈಕಿ 23 ವರ್ಷದ ಮೊಹಮ್ಮದ್ ಮಾರ್ವನ್ ನೂ ಒಬ್ಬನಾಗಿದ್ದು. ಈತ ಐಸಿಸ್​ಗೆ ಸೇರ್ಪಡೆಯಾಗಿರಬಹುದು ಎಂದು ಹೇಳಲಾಗಿತ್ತು. ಈತ ಈಗ ತಾನು ಐಸಿಸ್ ಸೇರ್ಪಡೆಯಾಗಿರುವುದಾಗಿ ಸಂದೇಶ ರವಾನಿಸಿರುವುದರಿಂದ ಈ ವಿಚಾರ ಈಗ ದೃಢಪಟ್ಟಿತ್ತು.
ಸಂಸತ್ ಮುಂಗಾರು ಅಧಿವೇಶನ ಆರಂಭ
ಸಂಸತ್ ಮುಂಗಾರು ಅಧಿವೇಶನ ಜು.18 ರಿಂದ ಪ್ರಾರಂಭವಾಗಿತ್ತು. ಒಟ್ಟು 20 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಅಗಸ್ಟ್‌ 15 ರಂದ ಅಧಿವೇಶನ ಮುಕ್ತಾಯಗೊಳ್ಳುತ್ತದೆ.
ವರುಣನ ಅಬ್ಬರಕ್ಕೆ ಮಧ್ಯಪ್ರದೇಶ ತತ್ತರ
ಮಧ್ಯಪ್ರದೇಶದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಕಳೆದೆರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಪ್ರವಾಹದಿಂದಾಗಿ 35 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪ್ರವಾಹದಲ್ಲಿ ಕಳೆದ 2 ವಾರಗಳಿಂದ ಒಟ್ಟು 9 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾದವರೆಲ್ಲರೂ ಮಳೆ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿರಬಹುದು ಎಂದು ಶಂಕಿಸಲಾಗುತ್ತಿತ್ತು.
ಜು. 19ರಿಮದ ಗೋಚಾತುರ್ಮಾಸ್ಯ ಆರಂಭ
ರಾಮಚಂದ್ರಾಪುರದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ 23ನೇ ಚಾತುರ್ಮಾಸ್ಯ ವ್ರತಾಚರಣೆಯು ಜು.19ರಿಂದ ಎರಡು ತಿಂಗಳ ಕಾಲ ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ಆರಂಭಾಗಿದೆ. ಜುಲೈ 19ರಿಂದ ಸೆಪ್ಟೆಂಬರ್ 16ರ ವರೆಗೆ 60 ದಿನಗಳ ಕಾಲ ಚಾತುರ್ಮಾಸ ನಡೆಯಲಿದ್ದು, 60 ದಿನಗಳ ಕಾಲವೂ ಗೋಸಂರಕ್ಷಣೆ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಾಜ್ಯಸಭಾ ಸ್ಥಾನಕ್ಕೆ ಸಿದ್ಧು ರಿಸೈನ್
ರಾಜ್ಯಸಭಾ ಸದಸ್ಯತ್ವಕ್ಕೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧ ರಾಜೀನಾಮೆ ನೀಡಿದ್ದರು. ಸಿದ್ಧು ಅವರು ಏಪ್ರಿಲ್ ನಲ್ಲಿ ರಾಜ್ಯಸಭೆಗೆ ಬಿಜೆಪಿಯಿಂದ ನಾಮ ನಿರ್ದೇಶನಗೊಂಡಿದ್ದರು. ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಕ್ರಿಕೆಟಿಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಇವರು ರಾಜ್ಯಸಭೆ ಪ್ರವೇಶಕ್ಕೆ ನಿರಾಸಕ್ತಿ ತೋರಿಸಿದ್ದರು. ಈಗ ಸಿದ್ಧು ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಾಜೀನಾಮೆ ನೀಡಲು ಸಿದ್ಧರಾಗಿರಿ
ಮಂಗಳೂರು ಡಿವೈಎಸ್ ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟದಂತೆ ಸಚಿವ ಕೆ ಜೆ ಜಾರ್ಜ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಮಡಿಕೇರಿ ಕೋರ್ಟ್ ಆದೇಶಿಸಿತ್ತು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ವಿಚಾರಣೆ ನಡೆಸಿದ ಮಡಿಕೇರಿ ಕೋರ್ಟ್ ಗಣಪತಿ ಆರೋಪಿಸಿರುವ ಮೂವರ ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಲು ಮಡಿಕೇರಿ ಟೌನ್ ಪೊಲೀಸರಿಗೆ ಆದೇಶಿಸಿದೆ. ಸಚಿವ ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ ಎಂ ಪ್ರಸಾದ್ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲು ಕೋರ್ಟ್ ಸೂಚನೆ ನೀಡಿತ್ತು.
ಜುಲೈ 19
ಜಮ್ಮುವಿನ ಅರ್ನಿಯಾದಲ್ಲಿ ಪಾಕ್ ನಾಗರಿಕನ ಬಂಧನವಾಗಿತ್ತು. ಪಾಕಿಸ್ತಾನದ ನಾರೋವಾಲದ ವಾರಿಸ್ ಅಲಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಅಪ್ರಾಪ್ತ ಯುವಕನ ಹತ್ಯೆ
ಮಾರಕಾಸ್ತ್ರದೊಂದಿಗೆ ರೈಲಿನೊಳಗೆ ನುಗ್ಗಿದ್ದ ಅಪ್ರಾಪ್ತನ ಹತ್ಯೆ ಮಾಡಿದ ಘಟನೆ ದಕ್ಷಿಣ ಜರ್ಮನಿಯಲ್ಲಿ ಸಂಭವಿಸಿತ್ತು. ಸೋಮವಾರ ರಾತ್ರಿ 9.15 (ಸ್ಥಳೀಯ ಕಾಲಮಾನ) ರ ಸುಮಾರಿಗೆ ಬವೇರಿಯಾ ರಾಜ್ಯದ ತ್ರಿಚ್ಲಿಂಗೆನ್ ಮತ್ತು ವುರೆಜ್​ಬರ್ಗ್ ನಗರದ ನಡುವೆ ರೈಲು ಸಂಚರಿಸುವಾಗ ಈ ಘಟನೆ ನಡೆದಿದೆ. ಅಪ್ರಾಪ್ತ ಯುವಕ ರೈಲಿನೊಳಗೆ ಕೊಡಲಿ ಮತ್ತು ಚಾಕುವಿನೊಂದಿಗೆ ನುಗ್ಗಿ ರೈಲು ವುರೆಜ್​ಬರ್ಗ್ ರೈಲು ನಿಲ್ದಾಣಕ್ಕೆ ಆಗಮಿಸುವ ಮುನ್ನ ಯುವಕ ‘ಅಲ್ಲಾಹು ಅಕ್ಬರ್’ ಎಂದು ಘೊಷಣೆ ಕೂಗಿ ರೈಲಿನಲ್ಲಿದ್ದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ, 18 ಜನರನ್ನು ಗಾಯಗೊಳಿಸಿದ್ದಾನೆ.
ಐಸಿಸ್ ನಿಗ್ರಹಕ್ಕೆ ಪಟ್ಟು
ಐಸಿಸ್ ವಿರುದ್ಧ ಜಂಟಿ ಹೋರಾಟಕ್ಕೆ ಮಹತ್ವದ ಒಪ್ಪಂದ ಮಾಡಲಾಗಿದೆ. ಭಾರತ ಮತ್ತು ಮಲೇಷ್ಯಾ ನಡುವೆ ಈ ಮಹತ್ವದ ಒಪ್ಪಂದ ನಡೆದಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.
ನವದೆಹಲಿಯಲ್ಲಿ ಮಾತನಾಡಿದ ಗೃಹಸಚಿವರು ಪರಸ್ಪರ ಸಹಕಾರದಿಂದ ಈ ಎರಡು ರಾಷ್ಟ್ರಗಳು ಐಸಿಸ್ ನಿಗ್ರಹಿಸಲು ಒಪ್ಪಂದ ಮಾಡಿಕೊಂಡಿದೆ. ಎರಡು ರಾಷ್ಟ್ರಗಳಲ್ಲಿ ಬೆಳೆಯುತ್ತಿರುವ ಐಸಿಸ್ ನಿಗ್ರಹಕ್ಕೆ ಪಣತೊಟ್ಟಿದೆ. ಮಲೇಷ್ಯಾ ಉಪಪ್ರಧಾನಿ, ಗೃಹ ಸಚಿವ ಅಹ್ಮದ್ ಝಾಹಿದ್ ನೇತೃತ್ವದ ನಿಯೋಗ ಭಾರತಕ್ಕೆ ಭೇಟಿ ನೀಡಿದ ವೇಳೆ ಈ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.
ಅಧಿಕಾರಿಗಳ ವಜಾ
ಟರ್ಕಿಯ ಪ್ರಮುಖ ನಗರಗಳಲ್ಲಿ ಸೇನಾ ದಂಗೆ ವಿಚಾರ ಹಿನ್ನೆಲೆಯಲ್ಲಿ ದಂಗೆಗೆ ಕಾರಣರಾದ ಪೊಲೀಸರು ಸೇರಿ ಹಲವು ಅಧಿಕಾರಿಗಳನ್ನು ಟರ್ಕಿ ಸರ್ಕಾರ ವಜಾಗೊಳಿಸಿದೆ ಎಂದು ಟರ್ಕಿ ಅಂತರಿಕ ಸಚಿವಾಲಯ ಪ್ರಕಟಿಸಿತ್ತು. ಪೊಲೀಸರು ಸೇರಿ 8777 ಅಧಿಕಾರಿಗಳನ್ನು ಸರ್ಕಾರ ವಜಾಗೊಳಿಸಿದ್ದಾರೆ. 7809 ಪೊಲೀಸರು ಸೇರಿ ಒಟ್ಟು 8777 ಸಾರ್ವಜನಿಕ ಸಿಬ್ಬಂದಿಗಳನ್ನು ಸೇವೆಯಿಂದ ತೆಗೆದುಹಾಕಲಾಗಿತ್ತು.
ಲೋಧಾ ಶಿಫಾರಸುಗಳನ್ನು ಅಂಗೀಕರಿಸಿದ ಕೋರ್ಟ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸುಧಾರಣೆಗಾಗಿ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿ ಮಾಡಿದ್ದ ಬಹುತೇಕ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಸೋಮವಾರ ಅಂಗೀಕರಿಸಿತ್ತು. ಲೋಧಾ ಸಮಿತಿ ಶಿಫಾರಸು ಜಾರಿಗೆ ಕೋರ್ಟ್ ಬಿಸಿಸಿಐಗೆ 6 ತಿಂಗಳುಗಳ ಕಾಲಾವಕಾಶವನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯಮೂರ್ತಿ ಇಬ್ರಾಹಿಂ ಖಲೀಫುಲ್ಲಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು 6 ತಿಂಗಳ ಒಳಗೆ ಸಮಿತಿಯ ಶಿಫಾರಸುಗಳ ಜಾರಿಗೆ ಆದೇಶ ನೀಡಿದೆ.
ನಕ್ಸಲ ಅಟ್ಟಹಾಸಕ್ಕೆ ಸಿಆರ್ ಪಿಎಫ್ ಕಮಾಂಡೋಗಳು ಬಲಿ
ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್ ಪಿಎಫ್ ಕಮಾಂಡೋಗಳು ಹುತಾತ್ಮರಾದ ಘಟನೆ ಘಟನೆ ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಯ ಗಡಿ ಭಾಗ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ಪಟನಾದಿಂದ 172 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಸಿಆರ್ ಪಿ ಎಫ್ ಪಡೆ ಶೋಧ ಕಾರ್ಯ ನಡೆಸುತ್ತಿತ್ತು. ರಾತ್ರಿ ವೇಳೆ ನಕ್ಸಲರು 21 ಸುಧಾರಿತ ಐಇಡಿ ಸ್ಪೋಟಕಗಳನ್ನು ಸಿಡಿಸಿದ್ದಾರೆ. ಇದರಿಂದ ಈ ಘಟನೆ ಸಂಭವಿಸಿತ್ತು.
ವಿದ್ಯಾರ್ಥಿಗಳ ಭವಿಷ್ಯ ಜತೆ ವಿವಿ ಚೆಲ್ಲಾಟ
ಬೆಂಗಳೂರು ವಿಶ್ವವಿದ್ಯಾಲಯದಿಂದ ಮತ್ತೊಂದು ಯಡವಟ್ಟು ನಡೆದಿದ್ದು, ಪಾಸಿಂಗ್ ಮಾರ್ಕ್ಸ್ ನಿಗದಿ ಮಾಡುವಲ್ಲಿ ವಿವಿ ಯಡವಟ್ಟು ಮಾಡಿತ್ತು. ವಿವಿ ಪಾಸಿಂಗ್ ಮಾರ್ಕ್ಸ್ 35ರ ಬದಲು 40 ಅಂಕಗಳನ್ನು ನಿಗದಿ ಮಾಡಿದೆ. ಸ್ನಾತಕೋತ್ತರ ಪದವಿ ಅಂಕಪಟ್ಟಿ ಮುದ್ರಣ ವೇಳೆ ಲೋಪ ಕಂಡುಬಂದಿದೆ. ಇದರಿಂದ ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದಿಂದ 2014-15ನೇ ಸಾಲಿನ ಅಂಕಪಟ್ಟಿ ವಾಪಸಾತಿಗೆ ಸುತ್ತೋಲೆ ಹೊರಡಿಸಿದೆ. ಜುಲೈ 31ರೊಳಗೆ ಅಂಕಪಟ್ಟಿ ವಾಪಸ್ ನೀಡುವಂತೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿತ್ತು.
ಸ್ಪೈಸ್ ಜೆಟ್ ನ ಸಿಬ್ಬಂದಿಗಳು ಅಮಾನತು
ಅಕ್ರಮ ಚಿನ್ನ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಸ್ಪೈಸ್ ಜೆಟ್ ನ ಇಬ್ಬರು ಸಿಬ್ಬಂದಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.
ಭೀಕರ ದುರ್ಘಟನೆ
ಕ್ರೂಸರ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ 8 ಜನ ಸಾವನ್ನಪ್ಪಿದ್ದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಡೋಗೀನಾಲಾ ಗ್ರಾಮದ ಬಳಿ ಸಂಭವಿಸಿದೆ.
ಮುಬಾರಕ್ ಬೇಗಂ ವಿಧಿವಶ
ಬಾಲಿವುಡ್ ನ ಪ್ರಖ್ಯಾತ ಗಾಯಕಿ ಮುಬಾರಕ್ ಬೇಗಂ(80) ಅವರು ವಿಧಿವಶರಾಗಿದ್ದಾರೆ. ಬೇಗಂ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಮುಬಾರಕ್ ಬೇಗಂ ಅವರು ಸರಿಸುಮಾರು 110 ಸಿನಿಮಾಗಳಲ್ಲಿ ಹಾಡಿದ್ದಾರೆ.
 
ಜುಲೈ 20
ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪಿಎಸ್ಐ
ಡಿವೈಎಸ್ ಪಿ ಎಂಕೆ ಗಣಪತಿ ಮತ್ತು ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಆತ್ನಹತ್ಯೆಗೆ ಯತ್ನಿಸಿದ್ದರು. ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ರೂಪಾ ತಂಬದ ಅವರನ್ನು ಠಾಣಾಧಿಕಾರಿ ಅನುಮಾನಿಸದ ಕಾರಣ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿತ್ತು.
ಉರುಳುಸೇವೆ ಆಧಾರ್ ಕಡ್ಡಾಯ
ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಹೌದು ಇನ್ಮುಂದೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಅಂಗಪ್ರದಕ್ಷಿಣಂ(ಉರುಳು ಸೇವೆ) ಮಾಡಲು ಬಯಸುವ ಭಕ್ತರು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಒಯ್ಯಬೇಕು. ಉರುಳು ಸೇವೆ ಮಾಡುವ ಭಕ್ತರಿಗೆ ಜುಲೈ 20ರಿಂದ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ದೇವಸ್ಥಾನದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಲರಿ ರವಿ ಅವರು ಹೇಳಿದ್ದರು.
ವೇಳಾಪಟ್ಟಿ ಬದಲಾವಣೆ
‘ನಮ್ಮ ಮೆಟ್ರೋ’ ದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋ’ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿತ್ತು.
ಜಲಾವೃತ
ಕೃಷ್ಣಾ ನದಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಗ್ರಾಮಗಳು ಜಲಾವೃತವಾಗಿತ್ತು. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮೂರು ಗ್ರಾಮಗಳು ಜಲಾವೃತವಾಗಿತ್ತು. ಕರಕಲಗಡ್ಡಿ, ಆರಲಗಡ್ಡಿ ಮತ್ತು ಯಂಕನಗಡ್ಡಿ ಗ್ರಾಮಗಳು ಜಲಾವೃತಗೊಂಡಿದ್ದು, ಮೂರು ಗ್ರಾಮಗಳಲ್ಲಿ 37 ಜನರು ಸಿಲುಕಿಕೊಂಡಿದ್ದಾರೆ. ಕರಕಲಗಡ್ಡಿಯಲ್ಲಿ 27, ಯಂಕನಗಡ್ಡಿಯ 10 ಜನರು ಸಂಕಷ್ಟದಲ್ಲಿದ್ದರು.
ತಿರಂಗಾ ಯಾತ್ರೆ ನಡೆಸಲು ಕೇಂದ್ರ ನಿರ್ಧಾರ
70ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಈ ವರ್ಷ ಸ್ವಾತಂತ್ರ್ಯೊತ್ಸವವನ್ನು ವಿಭಿನ್ನವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದ್ದು, ‘ತಿರಂಗಾ ಯಾತ್ರಾ’ ಹೆಸರಿನಲ್ಲಿ ದೇಶಾದ್ಯಂತ ಒಂದು ವಾರ ರ್ಯಾಲಿ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿತ್ತು.
ಹಾಕಿ ದಂತಕಥೆ ಶಾಹಿದ್ ಇನ್ನಿಲ್ಲ
ಹಾಕಿ ದಂತಕಥೆ ಮೊಹಮ್ಮದ್ ಶಾಹಿದ್(56) ವಿಧಿವಶರಾಗಿದ್ದರು. ಉತ್ತರಪ್ರದೇಶದ ಗುರಗಾಂವ್ ನಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮಹಮ್ಮದ್ ಅನಾರೋಗ್ಯದಿಂದ ಕೆಲವು ದಿನಗಳ ಹಿಂದೆ ಕೋಮಾಗೆ ಜಾರಿದ್ದರು. ಇವರು ತೀವ್ರ ಲಿವರ್ ತೊಂದರೆಯಿಂದ ಬಳಲುತ್ತಿದ್ದರು. 1980ರ ಒಲಿಂಪಿಕ್ಸ್ ನಲ್ಲಿ ಮೊಹಮ್ಮದ್ ಶಾಹಿದ್ ಅವರು ಚಿನ್ನದ ಪದಕ ಗೆದ್ದಿದ್ದ ಆಟಗಾರನಾಗಿದ್ದರು. ಶಾಹಿದ್ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬಾಬ್ರಿ ಮಸೀದಿ ಪರ ಹೋರಾಟಗಾರ ಅನ್ಸಾರಿ ನಿಧನ
ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ಅತ್ಯಂತ ಹಿರಿಯ ಕಕ್ಷಿದಾರ ಮೊಹಮದ್ ಹಸೀಮ್ ಅನ್ಸಾರಿ ಅವರು ಇಂದು ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದರು.
ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡೊನಾಲ್ಡ್ ಆಯ್ಕೆ
ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದರು. ಟ್ರಂಪ್, ತಮ್ಮದೇ ಪಕ್ಷದ ಬರೊಬ್ಬರಿ 16 ಅಭ್ಯರ್ಥಿಗಳನ್ನು ಹಿಂದಿಕ್ಕುವ ಮೂಲಕ ಅಧಿಕೃತವಾಗಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ. ಅಭ್ಯರ್ಥಿ ಸ್ಪರ್ಧೆಗಾಗಿ ಬೇಕಿದ್ದ 1,237 ಮತಗಳನ್ನು ಪಡೆಯುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ.
ಜುಲೈ 21
ಭಾರೀ ವರ್ಷಧಾರೆ: ಸೇತುವೆಗಳು ಮುಳುಗಡೆ
ಕಲಬುರಗಿ ಜಿಲ್ಲೆಯಾದ್ಯಂತ ರಾತ್ರಿಯಿಡೀ ಧಾರಕಾರ ಮಳೆಯಾಗಿತ್ತು. ಚಿಂಚೋಳಿ, ಸೇಡಂ, ಜೇವರ್ಗಿ, ಕಲಬುರಗಿ ಸೇರಿದಂತೆ ಹಲವೆಡೆ ಭಾರೀ ವರ್ಷಧಾರೆಯಾಗಿತ್ತು.
ಕಲಬುರಗಿ ತಾಲೂಕಿನ ಹಲವು ಹಲವು ಸೇತುವೆಗಳು ಮುಳುಗಡೆಯಾಗಿದೆ. ಪಾಣೆಗಾಂವ್, ಖಣದಾಳ, ಇಟಗಾ ಸೇತುವೆಗಳು ಮುಳುಗಡೆಯಾಗಿದೆ. ಹಳ್ಳಗಳಲ್ಲಿ ಹೆಚ್ಚಿನ ನೀರು ಹರಿದ ಪರಿಣಾಮ ಸೇತುವೆಗಳು ಮುಳುಗಡೆಯಾಗಿತ್ತು.
ಕಬಾಲಿ ಫಸ್ಟ್ ಸೀನ್ ಲೀಕ್
ಬಿಡುಗಡೆಗೆ ಮುನ್ನವೇ ಕಬಾಲಿ ಚಿತ್ರದ ಮೊದಲ ಸೀನ್ ಲೀಕ್ ಆಗಿತ್ತು. ಸೂಪರ್ ಸ್ಟಾರ್ ಎಂಟ್ರಿ ಸೀನ್ ಲೀಕ್ ಆಗಿತ್ತು. ಸೋಶಿಯಲ್ ನೆಟ್ ವರ್ಕ್ ನಲ್ಲಿ ಲೀಕ್ ಆಗಿತ್ತು. ಜೈಲಿನಿಂದ ರಜನಿಕಾಂತ್ ಬಿಡುಗಡೆಯಾಗಿ ಬರುವಂತಹ ದೃಶ್ಯ ಲೀಕ್ ಆಗಿತ್ತು. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ದಯಾಶಂಕರ ವಜಾ
ಬಿಎಸ್ ಪಿ ನಾಯಕಿ ಮಾಯಾವತಿಯವರನ್ನು ವಿವಾದಾತ್ಮಕವಾಗಿ ಹೋಲಿಕೆ ಮಾಡಿದ್ದ ಉತ್ತರ ಪ್ರದೇಶದ ಬಿಜೆಪಿ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ರನ್ನು ವಜಾಗೊಳಿಸಲಾಗಿತ್ತು. ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ದಯಾಶಂಕರ ಸಿಂಗ್ ಅವರು ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದ ಕ.
ನಿರ್ಗತಿಕರಿಗೆ ರಾತ್ರಿ ಆಹಾರ ಭಾಗ್ಯ!
ರಾಜ್ಯದಲ್ಲಿ 15 ಲಕ್ಷ ಪಡಿತರ ಚೀಟಿ ಅರ್ಜಿ ವಿತರಣೆ ಬಾಕಿಯಿದೆ ಎಂದು ಆಹರಾ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದರು.
ಜುಲೈ 22
ಮನೆಗಳು ಜಲಾವೃತ
ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ರಾತ್ರಿಯಿಡೀ ಭಾರಿ ಮಳೆಯಾಗಿತ್ತು. ಮಳೆಯ ಅರ್ಭಟಕ್ಕೆ ಭೀಮಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿತ್ತು.
ಪಾಕ್ ಗೆ ಭಾರತ ಖಡಕ್ ಎಚ್ಚರಿಕೆ
ಇನ್ನು ಮುಂದೆ ಭಯೋತ್ಪಾದನೆಗೆ ಪ್ರಚೋದಿಸುವುದನ್ನು ನಿಲ್ಲಿಸಿ. ನೀವಿನ್ನು ಆಕ್ರಮಿತ ಕಾಶ್ಮೀರಿದಿಂದ ಜಾಗ ಖಾಲಿ ಮಾಡಿ ಎಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿತ್ತು.
ಭಾರತ ವಿದೇಶಾಂಗ ಸಚಿವಾಲಯ ಪಾಕ್ ಗೆ ಎಚ್ಚರಿಕೆ ನೀಡಿತ್ತು. ಕಾಶ್ಮೀರ ವಿಚಾರ ಕುರಿತು ಹಾಗೂ ಉಗ್ರ ಬುರ್ಹಾನ್ ಹತ್ಯೆ ಖಂಡಿಸಿ ಪಾಕ್ ನಲ್ಲಿ ಕರಾಳ ದಿನ ಆಚರಿಸಲಾಗಿದೆ. ಪಾಕ್ ಕರಳಾ ದಿನಾಚರಣೆಗೆ ಭಾರತ ಸೂಕ್ತ ತಿರುಗೇಟು ನೀಡಿತ್ತು.
ತೆರೆಯ ಮೇಲೆ ಅಬ್ಬಳಿಸಿದ ಕಬಾಲಿ
ನೆರುಪ್ಪುಡಾ… ನಿರಂಗುಡಾ…ಮುಡಿಯುಮಾ ಕಬಾಲಿ ಡಾ…
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಕಬಾಲಿ” ತೆರೆಗೆ ಅಪ್ಪಳಿಸಿತ್ತು. ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭವಾಗಿತ್ತು. ಕಳೆದ ಒಂದು ವಾರದಿಂದಲೇ ಚಿತ್ರ ವೀಕ್ಷಣೆಗಾಗಿ ಕಾತುರರಾಗಿದ್ದ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕ್ಕಿಕ್ಕಿರಿದು ತುಂಬಿ ಚಿತ್ರ ವೀಕ್ಷಣೆ ಮಾಡಿದ್ದರು. ದೇಶಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿರುವ ಕಬಾಲಿ ಚಿತ್ರ ಸುಮಾರು 4200 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಕಬಾಲಿ ಚಿತ್ರ ತಮಿಳುನಾಡಿನಲ್ಲಿ ಸುಮಾರು 650 ಸ್ಕ್ರೀನ್ ಗಳಲ್ಲಿ, ಕರ್ನಾಟಕದಲ್ಲಿ 251, ಆಂಧ್ರ ಪ್ರದೇಶದಲ್ಲಿ 530, ತೆಲಂಗಾಣದಲ್ಲಿ 335, ಕೇರಳದಲ್ಲಿ 308 ಸೇರಿದಂತೆ ಉತ್ತರ ಭಾರತದ ಸುಮಾರು 1, 100 ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಂಡಿದೆ.
ಏರ್ ಏಷ್ಯಾ ಶಾಕ್
ಬೆಂಗಳೂರಿನಿಂದ ಏರ್ ಏಷ್ಯಾ ಫ್ಲೈಟ್ ನಲ್ಲಿ ಚಿತ್ರ ನೋಡಲು ಹೋದ ರಜನಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಟಾಕೀಸ್ ನಲ್ಲಿ ಚಿತ್ರ ತೋರಿಸುವ ಬದಲು ಬೇರೆಡೆ ಆಯೋಜನೆ ಮಾಡಿತ್ತು. ಬೆಂಗಳೂರಿನಿಂದ ಚೆನ್ನೈಗೆ 180 ಅಭಿಮಾನಿಗಳ ತಂಡ ಚೆನ್ನೈಗೆ ತೆರಳಿತ್ತು. ಅಭಿಮಾನಿಗಳನ್ನು ವಿಮಾನದಲ್ಲಿ ಕರೆದೊಯ್ದು ಕಬಾಲಿ ಚಿತ್ರ ತೋರಿಸಲು ನಿರ್ಧರಿಸಲಾಗಿತ್ತು. ಏರ್ ಏಷ್ಯಾ ಕಬಾಲಿ ಚಿತ್ರಕ್ಕಾಗಿ ವಿಶೇಷ ಪ್ಯಾಕೇಜ್ ನೀಡಿತ್ತು. ಫ್ಲೈಟ್ ಪ್ರಯಾಣಕ್ಕೆ ರಜನಿ ಅಭಿಮಾನಿಗಳು ತಲಾ 7, 860 ಸಾವಿರ ರೂ. ನೀಡಿತ್ತು. ಕಬಾಲಿಗಾಗಿ ಫ್ಲೈಟ್ ನ್ನು ಡಿಸೈನ್ ಮಾಡಿತ್ತು. ಅಲ್ಲದೆ ಏರ್ ಏಷ್ಯಾ ಸಂಸ್ಥೆ ಕಬಾಲಿ ಚಿತ್ರವನ್ನು ಸತ್ತಂ ಥಿಯೇಟರ್ ನಲ್ಲಿ ತೋರಿಸುತ್ತೇವೆ ಎಂದಿತ್ತು. ಆದರೆ ಬಳಿ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದೆ.
ಮುಖ್ಯಪೇದೆ ಆತ್ಮಹತ್ಯೆ
ಮೀಸಲು ಪೊಲೀಸ್ ಪಡೆಯ ಮುಖ್ಯಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಲಬುರಗಿ ಹೊರವಲಯದ ಕ್ವಾರ್ಟರ್ಸ್ ನಲ್ಲಿ ಘಟನೆ ಸಂಭವಿಸಿತ್ತು. ತಾಜಸಯಲ್ತಾನಪುರದಲ್ಲಿರುವ ಕೆಎಸ್ ಆರ್ ಪಿ ವಸತಿಗೃಹದಲ್ಲಿ ಐಆರ್ ಬಿ ಬೆಟಾಲಿಯನ್ ಮುಖ್ಯಪೇದೆ ಅಣ್ಣಾರಾವ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಅಗ್ನಿ ಆಕಸ್ಮಿಕ
ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಹಾರ್ಡ್ ವೇರ್ ಶಾಪ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನ ಧಾವಿಸಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಬಾಂಗ್ಲಾದಲ್ಲಿ ಭಯೋತ್ಪಾದಕ ದಾಳಿ ಹತ್ತಿಕ್ಕಲು ಭಾರತ ಸಹಕರಿಸಲಿದೆ
ಭಯೋತ್ಪಾದಕ ದಾಳಿಗಳನ್ನು ಹತ್ತಿಕ್ಕಲು ಭಾರತ ಸಹಕರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾ ಪ್ರಧಾನಿ ಶೇಖ್ ಹಸಿನಾ ಅವರಿಗೆ ಭರವಸೆ ನೀಡಿದ್ದರು. ಗಡಿಯಲ್ಲಿನ ಚೆಕ್ ಪೋಸ್ಟ್ ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಉಭಯ ಮುಂಖಂಡರು ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಂಡರು. ನಮ್ಮ ನಡುವಿನ ಒಪ್ಪಂದ ಕೇವಲ ದ್ವೀಪಕ್ಷಿಯ ವ್ಯಾಪಾರ ವೃದ್ಧಿಗೆ ಸೀಮಿತವಾಗಿರದೆ ಭಯೋತ್ಪಾದನೆ ನಿಗ್ರಹ, ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಬೇಕೆಂದು ಮೋದಿ ತಿಳಿಸಿದರು. ಇದಕ್ಕೆ ಬಾಂಗ್ಲಾ ಪ್ರಧಾನಿ ಕೂಡ ಸಹಮತ ವ್ಯಕ್ತಪಡಿಸಿದ್ದರು.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ತರಗತಿ ಅಭ್ಯಾಸಕ್ಕೆ ಅವಕಾಶ
ಪ್ರಸ್ತುತ ಸಾಲಿನಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ತರಗತಿಗೆ ಸೇರಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದರು. ರಾಜ್ಯದಲ್ಲಿ 47 ಸಾವಿರ ಶಾಲೆಗಳಲ್ಲಿದ್ದು, ಬೆಂಗಳೂರು, ಕಲಬುರ್ಗಿ, ಬೆಳಗಾವಿ ವಿಭಾಗದ ಎಲ್ಲಾ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದ್ದು ಮೈಸೂರು ಭಾಗದ ಕೆಲವು ಜಿಲ್ಲೆಗಳಲ್ಲಿ ವಿತರಣೆ ಬಾಕಿ ಇದ್ದು ಆದಷ್ಟು ಬೇಗ ಸಮವಸ್ತ್ರ ವಿತರಿಸಲಾಗುವುದು ಮುಂದಿನ ವರ್ಷದಿಂದ ರಾಜ್ಯದ ಕೈಮಗ್ಗ ನಿಗಮದಿಂದ ಸಮವಸ್ತ್ರ ಖರೀದಿಸಲು ಚಿಂತಿಸಲಾಗಿದೆ ಎಂದಿದ್ದಾರೆ.
ಸಂಸದ ಭಗವಂತ್ ಮಾನ್ ವಿರುದ್ಧ ಸಮನ್ಸ್
ರಹಸ್ಯ ಕ್ಯಾಮರಾ ಬಳಸಿ ಸಂಸತ್ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದ ಆಮ್ ಆದ್ಮಿ ಪಕ್ಷದ ವಿವಾದಾತ್ಮಕ ಸಂಸದ ಭಗವಂತ್ ಮಾನ್ ವಿರುದ್ಧ ಸಮನ್ಸ್ ಜಾರಿಮಾಡಲಾಗಿತ್ತು. ಮನೆಯಿಂದ ಹೊರಟು ಸಂಸತ್ ಭವನ ಪ್ರವೇಶಿಸುವವರೆಗೆ ರಹಸ್ಯ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿದ್ದ ಭಗವಂತ್ ಮಾನ್ ವಿರುದ್ಧ ಸಂಸತ್ ನ ಉಭಯ ಕಲಾಪಗಳಲ್ಲೂ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳು ತೀವ್ರ ಕೋಲಾಹಲ ನಡೆಸಿದವು.
ವಿಮಾನ ನಾಪತ್ತೆ
ಭಾರತೀಯ ವಾಯುಸೇನೆಗೆ ಸೇರಿದ ವಿಮಾನ ನಾಪತ್ತೆಯಾಗಿದೆ. ವಿಮಾನದಲ್ಲಿ 29 ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು. ವಾಯುಸೇನೆಗೆ ಸೇರಿದ AN-32 ವಿಮಾನ ನಾಪತ್ತೆಯಾಗಿತ್ತು. ಚೆನ್ನೈನ ತಾಂಬ್ರಮ್ ಏರ್ ಬೇಸ್ ನಿಂದ ವಿಮಾನ ಹೊರಟಿದ್ದು, ಅಂಡಮಾನ್ ನ ಫ್ಲೋರ್ಟ್ ಬ್ಲೇರ್ ನತ್ತ ಹೊರಟಿತ್ತು.
ಜುಲೈ 23
ಆಂಧ್ರದಲ್ಲಿ ಭೀಕರ ಅಪಘಾತ
ಲಾರಿ ಡಿಕ್ಕಿಯಾಗಿ ಟವೇರಾದಲ್ಲಿದ್ದ ಕರ್ನಾಟಕದ ಮೂಲದ ಐವರು ಸಾವನ್ನಪ್ಪಿದ್ದ ಘಟನೆ ಆಂಧ್ರದ ಅನಂತಪುರ ಜಿಲ್ಲೆಯ ಮುದಿಗುಬ್ಬ ತಾಲೂಕಿನ ಸಂಕೇಪಲ್ಲಿ ಬಳಿ ಸಂಭವಿಸಿತ್ತು. ಮೃತರು ಬೆಂ.ಗ್ರಾಮಾಂತರ ಜಿಲ್ಲೆ ನೆಲಮಂಗಲ ನಿವಾಸಿಗಳಾಗಿದ್ದಾರೆ. ಮಗು, ಮಹಿಳೆ ಸೇರಿಂದತೆ ಐವರು ಸ್ಥಳದ್ಲ್ಲೇ ಸಾವನ್ನಪ್ಪಿದ್ದಾರೆ.
ಮುಂದುವರಿದ ಶೋಧ ಕಾರ್ಯ
ಭಾರತೀಯ ವಾಯಿಸೇನೆಯ ವಿಮಾನ ನಾಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನದ ಪತ್ತೆಗಾಗಿ ಬೃಹತ್ ಶೋಧ ಕಾರ್ಯಚರಣೆ ಶುರುವಾಗಿತ್ತು. ಭಾರತೀಯ ವಾಯುಸೇನೆ ಮತ್ತು ನೌಕಾಸೇನೆಯಿಂದ ಹುಡುಗಾಟ ಆರಂಭಿಸಲಾಗಿದೆ. ಯುದ್ಧನೌಕೆ ‘ಐಎಸ್ ಎಸ್ ಜಲಸ್ವಾ’ ದಿಂದಲೂ ಹುಡುಕಾಟ ನಡೆಯುತ್ತಿದೆ. ಸಬ್ ಮೆರಿನ್, ನೌಕಾಸೇನೆ ಹಡಗುಗಳಿಂದ ನಿರಂತರ ಶೋಧ ಕಾರ್ಯ ನಡೆಸಿದೆ. ನಾಪತ್ತೆಯಾಗಿರುವ ವಿಮಾನ ಹುಡುಕಲು ನೆರೆದೇಶದ ನೆರವು ಕೇಳಲಾಗಿದೆ. ಮಲೇಷ್ಯಾ, ಸಿಂಗಾಪುರ್, ಶ್ರೀಲಂಕಾ ದೇಶದ ನೆರವು ಕೇಳಿದೆ.
ನಾಪತ್ತೆಯಾದ ವಿಮಾನದಲ್ಲಿ ರಾಜ್ಯದ ಯೋಧ
ನಾಪತ್ತೆಯಾದ ಭಾರತೀಯ ವಾಯುಸೇನೆಯ ವಿಮಾನದಲ್ಲಿ ಕರ್ನಾಟಕ ಮೂಲದ ಯೋಧರೊಬ್ಬರು ಪ್ರಯಾಣ ಬೆಳೆಸಿದ್ದರು ಎಂದು ಮಾಹಿತಿ ಲಭ್ಯವಾಗಿತ್ತು. ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ನಿವಾಸಿ ಏಕನಾಥ ಶೆಟ್ಟಿ ಕಣ್ಮರೆಯಾಗಿದ್ದಾರೆ.
ಜರ್ಮನ್ ನ ಮಾಲ್ ಮೇಲೆ ಉಗ್ರರ ದಾಳಿ: 9 ಮಂದಿ ಬಲಿ
ಜರ್ಮನಿಯ ಮ್ಯೂನಿಚ್ ನಗರದ ಜನನಿಬಿಡ ಮಾಲ್ ವೊಂದರ ಮೇಲೆ ನಾಗರಿಕರನ್ನು ಗುರಿಯಾಗಿಸಿಕೊಂಡು ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಸಾರ್ವಜನಿಕರು ಮೃತಪಟ್ಟಿದ್ದರು. ಬಂದೂಕುದಾರಿ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದರು. ಸಿಟಿ ಒಲಿಂಪಿಕ್ ಪಾರ್ಕ್ ಗೆ ಸ್ಥಳೀಯ ಕಾಲಮಾನ ಸಂಜೆ 5.50 ಸುಮಾರಿಗೆ ನುಗ್ಗಿದ ಶಸ್ತ್ರಸಜ್ಜಿತ ಶಂಕಿತ ಉಗ್ರನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಇನ್ನು ಪೊಲೀಸರು ಸೇರಿ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಗಾಳಿಪಟ: ‘ಚೈನೀಸ್ ದಾರ್’ ಕ್ಕೆ ನಿಷೇಧ
ಕರ್ನಾಟಕ ಸರ್ಕಾರವು ಗಾಳಿಪಟ ಹಾರಿಸಲು ಬಳಸುವ ನೈಲಾನ್ ದಾರ, ಸಾಮಾನ್ಯವಾಗಿ ಕರೆಯಲ್ಪಡುವ “ಚ್ಯನೀಸ್ ದಾರ್” ಅಥವಾ “ಚೈನೀಸ್ ಮಂಜ” ಅಥವಾ ಗಾಜು ಇಲ್ಲವೆ ಇತರ ಕೃತಕ ಜೈವಿಕವಲ್ಲದ ಹಾನಿಕಾರಕ ವಸ್ತುಗಳಿಂದ ತಯಾರಿಸಿದ ದಾರದ ಬಳಕೆಯನ್ನು ನಿಷೇಧಿಸಿತ್ತು. ಇಂತಹ ಹಾನಿಕಾರಕ ವಸ್ತುಗಳಿಂದ ಪಕ್ಷಿ ಪ್ರಾಣಿ ಹಾಗೂ ಮಾನವನಿಗೆ ತೀವ್ರತರವಾದ ಗಾಯಗಳಾಗುವ ಸಾಧ್ಯತೆಗಳಿರುವುತ್ತವೆ. ಇಂತಹ ದಾರಗಳು ಮಣ್ಣು, ನೀರು ಹಾಗೂ ಜಾನುವಾರುಗಳ ಮೇಲೆ ಪ್ರತಿಕೂಲ ಪರಿಣಾವನ್ನುಂಟುಮಾಡುತ್ತವೆ. ಅಲ್ಲದೇ ಪರಿಸರಕ್ಕೆ ಧಕ್ಕೆಯನ್ನುಂಟುಮಾಡುವ ಕಾರಣ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಇಂತಹವುಗಳನ್ನು ಸಂಪಾದಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದನ್ನು ಕೂಡ ನಿಷೇಧಿಸಿದೆ.
ಪ್ರಧಾನಿ ಮೋದಿ ಸಹಿ ಫೋರ್ಜರಿ: ವ್ಯಕ್ತಿಗಳ ಬಂಧನ
ಪ್ರಧಾನಿ ನರೇಂದ್ರ ಮೋದಿ ಅವರ ಸಹಿಯನ್ನು ಫೋರ್ಜರಿ ಮಾಡಿದ್ದ ಜಾರ್ಖಂಡ್ ಮೂಲದ ಇಬ್ಬರನ್ನು ಸಿಬಿಐ ಪೊಲೀಸರು ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಜಾರ್ಖಂಡ್ ನಿವಾಸಿಗಳಾದ ಪಂಡಿತ್ ಸ್ವರಾಜ್ ಕುಮಾರ್ ರಾಯ್ ಮತ್ತು ಸುವೇಂದು ಕುಮಾರ್ ಬರ್ಮಾನ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಜುಲೈ 27 ರವರೆಗೂ ಸಿಬಿಐ ವಶಕ್ಕೆ ನೀಡಲಾಗಿತ್ತು.
ಯೋಧ ವೀರಮರಣ
ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮನಾಗಿದ್ದಾನೆ. ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಯೋಧ ವೀರಮರಣ ಹೊಂದಿದ್ದರು. ಯೋಧ ಉಗ್ರರು ಗಡಿನುಸುಳುವಿಕೆ ತಡೆಯುವಾಗ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಯೋಧ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಜುಲೈ 25
ಬಸ್ ಮುಷ್ಕರ
ವೇತನ ಹೆಚ್ಚಳಕ್ಕೆ ಸಾರಿಗೆ ಬಸ್ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಸಾರಿಗೆ ಬಸ್ ಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಬೆಳಗಿನಿಂದ ಯಾವುದೇ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುತ್ತಿದ್ದರು. ಸಾರಿಗೆ ನೌಕರರಿಂದ ಅನಿರ್ಧಿಷ್ಟಾವಧಿ ಮುಷ್ಕರ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಿಸಲಾಗಿತ್ತು.
ಬಸ್ ಮುಷ್ಕರ: ಹಲವೆಡೆ ಕಲ್ಲೆಸೆತ
ಮುಷ್ಕರ ಹಿನ್ನೆಲೆಯಲ್ಲಿ ಹಲವೆಡೆ ಸರ್ಕಾರಿ ಬಸ್ ಗಳ ಮೇಲೆ ಕಲ್ಲುತೂರಾಟ ನಡೆದಿದೆ. ಬೆಂಗಳೂರು, ಹಾಸನ, ಬೆಳಗಾವಿ, ಮಡಿಕೇರಿ, ಕೊಪ್ಪಳ, ಶಿವಮೊಗ್ಗ, ರಾಮನಗರ ಚಿಕ್ಕಮಗಳೂರು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಸ್ತೆಗಿಳಿದ ಬಸ್ಸುಗಳಿಗೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿತ್ತು.
ಸಾರಿಗೆ ಸಂಸ್ಥೆಗಳಿಗೆ ಭಾರೀ ನಷ್ಟ
ರಾಜ್ಯಾದ್ಯಂತ ಒಟ್ಟು 92 ಸರ್ಕಾರಿ ಬಸ್ ಗಳ ಮೇಲೆ ಕಲ್ಲೆಸೆತವಾಗಿದೆ. ಕಲ್ಲೆಸೆತದಿಂದಾಗಿ ಸಾರಿಗೆ ಸಂಸ್ಥೆಗಳಿಗೆ 8, 97, 300ರೂ. ನಷ್ಟವಾಗಿದೆ. ಇದರಿಂದ 4 ಸಾರಿಗೆ ಸಂಸ್ಥೆಗಳಿಗೆ ಭಾರೀ ನಷ್ಟ ಉಂಟಾಗಿದೆ. ಕಿಡಿಗೇಡಿಗಳ ಪುಂಡಾಟಿಕೆಗೆ ಸಾರ್ವಜನಿಕ ಅಸ್ತಿಪಾಸ್ತಿ ಹಾನಿಯಾಗಿತ್ತು.
ಸಲ್ಮಾನ್ ಗೆ ಬಿಗ್ ರಿಲೀಫ್
ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ಗೆ ಭಾರಿ ರಿಲೀಫ್ ಸಿಕ್ಕಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆ ಆಗಿದೆ.
ರಾಜಸ್ಥಾನ ಹೈಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟಿಸಿದೆ. 1998ರಲ್ಲಿ ಹಿಂದಿ ಚಿತ್ರ ಸೂಟಿಂಗ್ ವೇಳೆ ಕೃಷ್ಣಮೃಗ ಬೇಟೆ ಆರೋಪ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿತ್ತು.
ಶಾಂತಿ ಬಳಿಕ ಕಾಶ್ಮೀರಿಗರೊಂದಿಗೆ ಮಾತುಕತೆ: ರಾಜನಾಥ್ ಸಿಂಗ್
ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಸಹಕರಿಸುವಂತೆ ಎಮನವಿ ಮಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಳಿಕ ಕಾಶ್ಮೀರಿಗರ ಜತೆ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಉದ್ವಿಗ್ನಗೊಂಡಿ ರುವ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಲ್ಲಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೇರಿ 30 ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದರು.
ಪತ್ರಕರ್ತರಿಗೆ ವೀಸಾ ವಿಸ್ತರಣೆಗೆ ನಿರಾಕರಣೆ: ಭಾರತದ ವಿರುದ್ಧ ಚೀನಾ ಆಕ್ಷೇಪ
ಚೀನಾದ ಕ್ಷಿನ್ಹುವಾ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮೂವರು ಪತ್ರಕರ್ತರಿಗೆ ವೀಸಾ ವಿಸ್ತರಿಸಲು ನಿರಾಕರಿಸಿರುವ ಭಾರತದ ಕ್ರಮಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮೂವರು ಪತ್ರಕರ್ತರಿಗೆ ವೀಸಾ ನಿರಾಕರಿಸಿದ ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾ ಎಚ್ಚರಿಕೆ ನೀಡಿತ್ತು. ಎನ್​ಎಸ್​ಜಿ ಒಕ್ಕೂಟಕ್ಕೆ ಭಾರತದ ಸೇರ್ಪಡೆಗೆ ಚೀನಾ ವಿರೋಧ ವ್ಯಕ್ತಪಡಿಸಿದ್ದರಿಂದ ಇದಕ್ಕೆ ಪ್ರತೀಕಾರವಾಗಿ ಭಾರತ, ಚೀನಾ ಪತ್ರಕರ್ತರಿಗೆ ವೀಸಾ ವಿಸ್ತರಿಸಲು ನಿರಾಕರಿಸುತ್ತಿದೆ ಎಂದು ಚೀನಾ ಮಾಧ್ಯಮಗಳು ವರದಿ ಪ್ರಸಾರ ಮಾಡಿದೆ.
ಕಾನೂನು ಪ್ರಕಾರ ಕ್ರಮ ಜರುಗಿಸಲಿ: ರೈ
ನನ್ನ ಮಗ ತಪ್ಪು ಮಾಡಿದರೆ ಕಾನೂನಿನಂತೆ ಕ್ರಮ ಜರುಗಿಸಲಿ ಎಂದು ರಾಜ್ಯ ಆರೋಗ್ಯ ಸಚಿವ ರಮಾನಾಥ ರೈ ಹೇಳಿದ್ದರು. ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದ ಆರೋಪ ಹಿನ್ನೆಲೆಯಲ್ಲಿ ನಿನ್ನೆ ಸಚಿವ ರೈಗಳ ಪುತ್ರನ ವಿರುದ್ಧ ಕೇಸ್ ದಾಖಲಾಗಿತ್ತು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
4 ಸಾರಿಗೆ ಸಂಸ್ಥೆಗಳಿಗೆ ಭಾರಿ ನಷ್ಟ
ರಾಜ್ಯಾದ್ಯಂತ ಒಟ್ಟು 142 ಸರ್ಕಾರಿ ಬಸ್ ಗಳ ಮೇಲೆ ಕಲ್ಲೆಸೆತ ಸಂಭವಿಸಿದೆ. ಕಿಡಿಕೇಡಿಗಳ ಕಲ್ಲುತೂರಾಟದಿಂದ ಸಾರಿಗೆ ಸಂಸ್ಥೆಗ 14, 69, 200 ರೂ. ನಷ್ಟವಾಗಿದೆ.
 
ಜುಲೈ 26
ಕಲ್ಲುತೂರಾಟ
ಹಾವೆರಿ ಜಿಲ್ಲೆಯ ರಾಣೇಬೆನ್ನೂರು ಬಳಿ ಕಲ್ಲು ತೂರಾಟ ನಡೆದಿತ್ತು. ಮುಂಬೈಯಿಂದ ಬೆಂಗಳೂರಿನತ್ತ ಸರ್ಕಾರಿ ಬಸ್ ಬಸ್ ಬರುತ್ತಿತ್ತು. ಕೆ ಎಸ್ ಆರ್ ಟಿಸಿ ಸ್ಕ್ಯಾನಿಯಾ ಬಸ್ ಮೇಲೆ ಕಲ್ಲುತೂರಾಟ ನಡೆದಿದೆ. ಇದರಿಂದ ಬಸ್ ಮುಂಭಾಗದ ಗಾಜು ಜಖಂ ಆಗಿತ್ತು. ಮಲ್ಟಿ ಆ್ಯಕ್ಸಲ್ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.
ಪರೀಕ್ಷಾರ್ಥಿಗಳ ಪರದಾಟ
ವೇತನ ಹೆಚ್ಚಳಕ್ಕೆ ಸಾರಿಗೆ ಬಸ್ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಸ್ ಗಳ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಕಾರವಾರ ನಗರದಲ್ಲಿ ಪರೀಕ್ಷಾರ್ಥಿಗಳ ತೀವ್ರ ಪರದಾಡಿದ್ದಾರೆ. ಕದಂಬ ನೌಕಾನೆಲೆಗೆ ಪರೀಕ್ಷೆ ಬರೆಯಲೆಂದು ಬಂದಿದ್ದರು. ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ಇಂದು ನಿಗದಿಯಾಗಿತ್ತು. ಹೊರರಾಜ್ಯಗಳಿಗೆ ಪರೀಕ್ಷೆ ಬರಯಲು ಬಂದು, ಸಂಚಾರರಕ್ಕೆ ಬಸ್ ಗಳಿಲ್ಲದೇ ಹೊರರಾಜ್ಯದ ಜನರು ಪರದಾಡುತ್ತಿದ್ದರು.
ಬೆಂಗಳೂರಿನಲ್ಲಿ 2ನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರಿದಿತ್ತು. ಸ್ಯಾಟ್ ಲೈಟ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುತ್ತಿದ್ದರು. ಸರ್ಕಾರಿ ಬಸ್ ಗಳು ರೋಡಿಗಿಳಿಯಲಿಲ್ಲ. 300-400 ರೂ. ಕೊಟ್ರೂ ಆಟೋಗಳು ಸಿಗ್ತಿಲ್ಲ. ಸಾರಿಗೆ ಬಸ್ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರು ಹೆಚ್ಚಾಗಿದ್ದರು. ಮೆಟ್ರೋ ನಿಲ್ದಾಣ ಅಂದು ಬೆಳಿಗ್ಗೆಯಿಂದಲೇ ಪ್ರಯಾಣಿಕರು ಗಿಜಿಗುಡುತ್ತಿದೆ.
ಕಾರ್ಗಿಲ್ ಯಶಸ್ವಿನ ಮೆಟ್ಟಿಲಿಗೆ 17 ವರ್ಷ
ಜುಲೈ 26 ಕಾರ್ಗಿಲ್ ವಿಜಯ ದಿವಸವಾಗಿದೆ. ಇಂದಿಗೆ ಕಾರ್ಗಿಲ್ ‘ಆಪರೇಷನ್ ವಿಜಯ್’ಆಗಿ 17 ವರ್ಷ ಸಂದಿದೆ. ಇಂದು ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗಿದೆ.
ಪಾಕಿಸ್ತಾನದ ಮೇಲೆ 1999ರ ಜುಲೈ 26 ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಪ್ರತಿವರ್ಷ ಇಂದಿನ ದಿನವನ್ನು ‘ಕಾರ್ಗಿಲ್ ವಿಜಯ ದಿವಸ’ವನ್ನು ಆಚರಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಾವಿರಾರು ಕಾರ್ಗಿಲ್ ವೀರ ಯೋಧರಿಗೆ ನಮ್ಮ ಕೋಟಿ ನಮನ.
ಡೋಪ್ ಟೆಸ್ಟ್ ನಲ್ಲಿ ಫೈಲ್
ಡೋಪ್ ಟೆಸ್ಟ್ ಪಾಸಾಗುವಲ್ಲಿ ಭಾರತೀಯ ಒಲಿಂಪಿಕ್ ತಂಡದ ಸದಸ್ಯ ಇಂದ್ರಜಿತ್ ಸಿಂಗ್ ವಿಫಲವಾಗಿದ್ದರು. ಇದರಿಂದ ಶಾರ್ಟ್ ಪುಟ್ ಆಟಗಾರ ಇಂದ್ರಜಿತ್ ಸಿಂಗ್ ಗೆ ಭಾರಿ ಆಫಾತವಾಗಿದೆ. ರೆಸ್ಲರ್ ನರಸಿಂಗ್ ಯಾದವ್ನಾಡಾ, ನರಸಿಂಗ್ ಯಾದವ್ ಬಳಿಕ ಶಾರ್ಟ್ ಪುಟ್ಟರ್ ಕ್ರೀಡಾಪಟು ಇಂದರ್ ಜೀತ್ ಕೂಡ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಇಂದ್ರಜಿತ್ ಅವರು ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಬೇಕಾಗಿತ್ತು.
4 ಉಗ್ರರ ಹತ್ಯೆ-ಓರ್ವ ಸೆರೆ
ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ನೌಗಾಮ್ ಸೆಕ್ಟರ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಓರ್ವ ಭಯೋತ್ಪಾದಕನನ್ನು ಯೋಧರು
ಬಸ್ ಗಳನ್ನು ರೋಡಿಗಿಳಿಸಲು ಸರ್ಕಾರ ಚಿಂತನೆ
ಸಂಜೆಯೊಳಗೆ ಸಾರಿಗೆ ಸಂಸ್ಥೆ ನೌಕಕರ ಅನುರ್ದಿಷ್ಟಾವಧಿ ಪ್ರತಿಭಟನೆ ಮುಕ್ತಾಯವಾಗಿದಿದ್ದರೆ ಮುಷ್ಕರನಿರತರ ಮೇಲೆ ಕಠಿಣ ಶಿಸ್ತು ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಕ್ಕೆ ಸಾರಿಗೆ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಚಾಲನೆಯಾಗುವ ಸಾಧ್ಯತೆ ಇದೆ. ಬಸ್ ಬಂದ್ ನಿಲ್ಲಿಸದಿದ್ದರೆ ಕಠಿಣ ಕ್ರಮಕ್ಕೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿತ್ತು. ಸಾರಿಗೆ ಇಲಾಖೆಯಲ್ಲಿ ಈಗ 15 ಸಾವಿರ ಟ್ರೈನಿಗಳಿದ್ದಾರೆ. ತರಬೇತಿ ಪಡೆದಿರುವವರನ್ನೇ ತಕ್ಷಣ ನೇಮಕಕ್ಕೆ ಚಿಂತಿಸಲಾಗಿದೆ. ಈಗಾಗಲೇ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಮುಗಿದಿದೆ. ನಾಲ್ಕೂ ನಿಗಮಗಳ ಎಂಡಿಗಳ ಜತೆ ಮಾತುಕತೆ ನಡೆದಿದೆ. ಬೆಳಗ್ಗೆ ನಡೆದ ಮಾತುಕತೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು.
ಮಂತ್ರಾಲಯ ಶ್ರಿಗಳ ಕಾರು ಅಪಘಾತ
ತಿರುಪತಿ ಸಮೀಪ ಮಂತ್ರಾಲಯ ಶ್ರೀಗಳ ಕಾರು ಅಪಘಾತವಾಗಿದೆ. ಮಂತ್ರಾಲು ಶ್ರೀಗಳು ತೆರಳುತ್ತಿದ್ದ ಕಾರಿಗೆ ಹಸು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶ್ರೀಗಳು ಅಪಾಯದಿಂದ ಪಾರಾಗಿದ್ದು, ಡಿಕ್ಕಿಯಾದ ಹಸು ಸಾವನ್ನಪ್ಪಿದೆ. ಶ್ರೀಗಳು ಹೈದರಾಬಾದ್ ನಿಂದ ತಿರುಪತಿಗೆ ತೆರಳುತ್ತಿದ್ದರು. ತಿರುಪತಿಯ ಮೆಟ್ಟಿಲೋತ್ಸವ ಕಾರ್ಯಲ್ರಮಕ್ಕೆ ಶ್ರೀಗಳು ತೆರಳಿದ್ದರು. ಕಾರು ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ.
ತರಬೇತಿ ನಿರತ ಚಾಲಕರಿಂದ ಬಸ್ ಸಂಚಾರ ಆರಂಭ
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರಿನ ಶಾಂತಿನಗರದಿಂದ ಮೆಜೆಸ್ಟಿಕ್ ಮಧ್ಯೆ 5 ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿತ್ತು. ತರಬೇತಿ ನಿರತ ಚಾಲಕರ ಮೂಲಕ ಬಿಎಂಟಿಸಿ ಬಸ್ ಚಾಲನೆ ಮಾಡಲಾಗಿತ್ತು. ಪ್ರಯಾಣಿಕರಿಗಾಗಿ ಬಸ್ ಕಾದು ನಿಮತಿದೆ. ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಶುರುವಾಗಿತ್ತು.
ಶೇ.10ರಷ್ಟು ವೇತನ ಹೆಚ್ಚಳಕ್ಕೆ ಸಮ್ಮತಿ
ಶೇ. 10ರಷ್ಟು ಸಂಬಳ ಜಾಸ್ತಿ ಆಗುತ್ತೆ..ಈಗ ಕೆಲಸ ಮಾಡಿ ಎಂದು ಎಂದು ಸಿಎಂ ಸಿದ್ದರಾಮಯ್ಯ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳಿಗೆ ಹೀಗೆ ಹೇಳಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸಾರಿಗೆ ಮುಷ್ಕರ ಸಂಬಂಧ ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆ ಬಳಿ ಈ ಬಗ್ಗೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶೇ.10ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರಕ್ಕೆ ಸರ್ಕಾರ ಸಮ್ಮತಿಸಿದೆ. ಸರ್ಕಾರದ ನಿರ್ಧಾರಕ್ಕೆ ಸಮ್ಮತಿಸಿ ಕೆಲಸಕ್ಕೆ ಹಾಜರಾಗಲಿ. ಆಮೇಲೆ ಮುಂದಿನ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಸಿಎಂ ಆದೇಶಿಸಿದ್ದರು.
ಜುಲೈ 27
ಖಾಸಗಿ ಬಸ್ ನಲ್ಲಿ ಬೆಂಕಿ: 3 ಸಜೀವ ದಹನ
ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಏಕಾಏಕಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಹುಬ್ಬಳ್ಳಿಯ ಹೊರವಲಯದ ವರೂರು ಬಳಿ ಇಂದು ಮುಂಜಾನೆ ನಡೆದಿತ್ತು. ಹುಬ್ಬಳ್ಳಿ ಹೊರವಲಯದ 20. ಕಿ. ಮೀ ದೂರದಲ್ಲಿರುವ ವರೂರು ಗ್ರಾಮದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಪ್ರಯಾಣಿಕರು ಸಜೀವ ದಹನಗೊಂಡಿದ್ದು, 9 ಜನರಿಗೆ ಗಂಭೀರ ಗಾಯಾಗಳಾಗಿದ್ದು, 6 ಜನರು ಸುರಕ್ಷಿತರಾಗಿದ್ದರು. ದುರ್ಗಾಂಬಾ ಟ್ರಾವೆಲ್ಸ್’ಗೆ ಸೇರಿದ ಖಾಸಗಿ ವೋಲ್ವೋ ಸ್ಲೀಪರ್ ಬಸ್ ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿತ್ತು. ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. 16 ಮಂದಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದರು.
ಸಿಎಂ ಪುತ್ರನಿಗೆ ತೀವ್ರ ಅನಾರೋಗ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ರಾಕೇಶ್ ಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿತ್ತು. ‘ಪ್ಯಾಂಕ್ರಿಯಸ್’ ಸಮಸ್ಯೆಯಿಂದ ಬಳಲುತ್ತಿದ್ದರು.
ಬೆಲ್ಜಿಯಂ ಪ್ರವಾಸದಲ್ಲಿದ್ದ ವೇಳೆ ರಾಕೇಶ್ ಗೆ ಅನಾರೋಗ ಕಾಣಿಸಿಕೊಂಡಿದೆ. ಪುತ್ರನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತಂಕಗೊಂಡಿದ್ದರು.
ಸರ್ಕಾರದ ಮಾಸ್ಟರ್ ಪ್ಲಾನ್
ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರದ ಮಾಸ್ಟರ್ ಪ್ಲಾನ್ ಮಾಡಿದೆ. ಸರ್ಕಾರ ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೂ ಪರ್ಮಿಟ್ ನೀಡಲು ಮುಂದಾಗಿದೆ. ಶೇ.60:40 ಅನುಪಾತದಲ್ಲಿ ಸಂಚಾರಕ್ಕೆ ಚಿಂತನೆ ನಡೆಸಲಾಗಿದೆ. ಮಂಗಳೂರು ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಚಿಂತಿಸಲಾಗಿದೆ. ಸರ್ಕಾರದ ಯೋಜನೆ ಜಾರಿಯಾದರೆ ಭಾರೀ ಬದಲಾವಣೆಯಾಗಲಿದೆ. ಖಾಸಗಿ ಬಸ್ ಗಳು ಬಿಎಂಟಿಸಿ ರೀತಿಯಲ್ಲೇ ಸಂಚರಿಸಲಿದೆ. ಮುಷ್ಕರಗಳು ನಡೆದಾಗ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಅಂಗನವಾಡಿ ಮಕ್ಕಳಿಗೂ ಕ್ಷೀರ ಭಾಗ್ಯ: ಸಚಿವ ಸಂಪುಟದಲ್ಲಿ ಅನುಮೋದನೆ
ಕ್ಷೀರ ಭಾಗ್ಯ ಯೋಜನೆಯ ಅಡಿಯಲ್ಲಿ ಇತರೆ ಮಕ್ಕಳಿಗೆ ನೀಡುತ್ತಿರುವಂತೆಯೇ ರಾಜ್ಯದ 39 ಲಕ್ಷ ಅಂಗನವಾಡಿ ಮಕ್ಕಳಿಗೂ ವಾರಕ್ಕೆ ಮೂರು ದಿನ 150 ಮಿಲಿ ಲೀಟರ್ ಕೆನೆ-ಭರಿತ ಹಾಲು ವಿತರಿಸಲು ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿತ್ತು.
ಐಟಿ ಅಧಿಕಾರಿಗಳ ದಾಳಿ
ಶಾಮನೂರು ಶಿವಶಂಕರಪ್ಪ ಮಕ್ಕಳ ಮನೆ ಮೆಲೆ ಐಡಿ ದಾಳಿ ನಡೆದಿದೆ. ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಎಸ್ ಎಸ್ ಗಣೇಶ್ ಮತ್ತು ಎಸ್ ಎಸ್ ಬಕ್ಕೇಶ್ ನಿವಾಸದ ಮೇಲೆ ಐಟಿ ಸಿಬ್ಬಂದಿಗಳು ದಾಳಿ ನಡೆಸಿದ್ದರು. ಬೆಂಗಳೂರು, ದಾವಣಗೆರೆ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಮಹದಾಯಿ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ ಹಿನ್ನಡೆ
ಮಹಾದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಕರ್ನಾಟಕದ ಮಧ್ಯಂತರ ಅರ್ಜಿಯನ್ನು ಟ್ರಿಬ್ಯುನಲ್ ತಿರಸ್ಕೃರಿಸಿದೆ. ನೀರು ಬಳಕೆಗೆ ಅವಕಾಶ ನೀರಲು ಸಾಧ್ಯವಿಲ್ಲ ಎಂದು ಟ್ರಿಬ್ಯುನಲ್ ಹೇಳಿತ್ತು. ಇದರಿಂದ ಮಹದಾಯಿಗೆ ಮಲಪ್ರಭೆಯಿಂದ ನೀರು ಬಿಡುಗಡೆ ವಿವಾದದಲ್ಲಿ ಕರ್ನಾಟಕಕ್ಕೆ ಭಾರೀ ಹಿನ್ನೆಡೆಯಾಗಿದೆ. 7.65 ಟಿಎಂಸಿ ನೀರು ಬಳಕೆ ಮಾಡಲು ಕರ್ನಾಟಕ ಸರ್ಕಾರ ಕೋರಿತ್ತು. ಜಸ್ಟೀಸ್ ಜೆ ಎಂ ಪಾಂಚಾಲ್ ಅಧ್ಯಕ್ಷತೆಯ ನ್ಯಾಯಾಧೀಕರಣ ತೀರ್ಪು ಪ್ರಕಟಿಸಿದೆ. ಕರ್ನಾಟಕದ ಪರವಾಗಿ ಹಿರಿಯ ವಕೀಲ ಎಸ್ ನಾರಿಮನ್ ವಾದ ಮಂಡಿಸಿದ್ದರು. ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಬಳಕೆಗೆ ಕೋರಿಕೆ ಮಾಡಲಾಗಿತ್ತು. ನಾರಿಮನ್ ಅವರು ಸಾಕಷ್ಟು ಪ್ರಬಲ ವಾದ ಮಂಡಿಸಿದ್ದರು. ಆದರೂ ನ್ಯಾಯಾಧೀಕರಣದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಬೆಳಗಾವಿ, ಧಾರವಾಡ ಹುಬ್ಬಳ್ಳಿ ಆಸೆಗೆ ತಣ್ಣಿರೇರಿಚಿ ಹಾಗೆ ಆಗಿದೆ. ನಾಲ್ಕು ಜಿಲ್ಲೆಗಳ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
ನೌಕರರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ
ಸಾರಿಗೆ ಸಂಸ್ಥೆ ನೌಕರರ ವೇತನ ಶೇಕಡ 12ರಷ್ಟು ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದರು. ಶೇ.12ರಷ್ಟು ವೇತನ ಹೆಚ್ಚಳಕ್ಕೆ ಸಾರಿಗೆ ಸಂಸ್ಥೆಯ ನೌಕರರ ಮುಖಂಡರು ಒಪ್ಪಿದ್ದಾರೆ.
ಜುಲೈ 28
ಬ್ಯಾಂಕ್ ಬಂದ್
ಕೇಂದ್ರ ಸರ್ಕಾರದ ಜನವಿರೋಧಿ ಬ್ಯಾಂಕಿಂಗ್ ನೀತಿಯನ್ನು ವಿರೋಧಿಸಿ ಜು.29ಕ್ಕೆ ಬಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್(ಯುಎಫ್ ಬಿಯು) ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಈ ಮುಷ್ಕರಕ್ಕೆ ರಾಜ್ಯದ ಬ್ಯಾಂಕ್ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿದೆ.
ವಿಶ್ವ ಹೈಪಟೈಟಿಸ್ ದಿನ
ಜು.28ರಂದು ವಿಶ್ವ ಹೈಪಟೈಟಿಸ್ ದಿನವನ್ನಾಗಿ ಆಚರಿಸಲಾಗಿದೆ. ಯಕೃತ್ತಿನಲ್ಲಿ ಉರಿಯೂತವನ್ನುಂಟು ಮಾಡುವ ಲಕ್ಷಣಗಳು ಅಥವಾ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ. ಬಗೆಯ ಉರಿಯೂತ ಸತತ ಮದ್ಯಪಾನ ಸೇವನೆಯಿಂದಲೂ ಉಂಟಾಗಿರಬಹುದು ಅಥವಾ ವೈರಸ್ಸುಗಳೂ ಕಾರಣವಾಗಿರಬಹುದು.
ಜುಲೈ 29
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ ಸ್ಪರ್ಧೆ
ಕಾವೇರಿದ ಅಮೆರಿಕ ಅಧ್ಯಕ್ಷೀಯ ಚುನಾವಣೆ-2016ಕ್ಕೆ ಡೆಮಾಕ್ರೆಟಿಕ್ ನ್ಯಾಷನಲ್ ನಾಮನಿರ್ದೇಶನವನ್ನು ಹಿಲರಿ ಕ್ಲಿಂಟನ್ ಒಪ್ಪಿಕೊಂಡಿದ್ದಾರೆ. ಇದರಿಂದ ಅಮೆರಿಕದ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆಗೆ ಮಹಿಳೆ ಸ್ಪರ್ಧಿಸಿದ್ದಾರೆ.
ವರುಣನ ಅರ್ಭಟಕ್ಕೆ ನಗರ ತತ್ತರ
ರಾಜಧಾನಿ ಬೆಂಗಳೂರಲ್ಲಿ ಸುರಿಯುತ್ತಲೇ ಇದೆ ಮಳೆ. ರಾತ್ರಿಯಿಂದ ಸುರಿಯುತ್ತಿರುವ ಮಳೆ ಇನ್ನೂ ಮುಂದುವರಿದಿದೆ. ಸತತ ಮಳೆಯಿಂದ ಬೆಂಗಳೂರು ನಗರ ತತ್ತರಿಸಿ ಹೋಗಿತ್ತು. ಹಲವೆಡೆ ಮನೆಗಳಿಗೆ, ಅಪಾರ್ಟ್ ಮೆಂಟ್ ಗಳಿಗೆ ಮಳೆ ನೀರು ನುಗ್ಗಿದೆ. ಹಲವು ರಸ್ತೆಗಳಲ್ಲಿ 3-4 ಅಡಿ ನೀರು ನಿಂತು ಅವಾಂತರ ಸೃಷ್ಠಿಯಾಗಿತ್ತು. ನಗರದ ಮಾರತ್ ಹಳ್ಳಿ ಬಳಿ ಸಂಜಯನಗರದಲ್ಲಿ ಕಾಂಪೌಂಡ್ ಕುಸಿತವಾಗಿತ್ತು. ಕಾಂಪೌಂಡ್ ಬಳಿ ನಿಂತಿದ್ದ 7ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿತ್ತು. ಬಿಳೇಕಹಳ್ಳಿ ಸಮೀಪವಿರುವ ಕೋಡಿಚಿಕ್ಕನಹಳ್ಳಿ ಕೆರೆ ಭರ್ತಿಯಾಗಿದೆ. ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆ ಅಕ್ಷರಶಃ ಕೆರೆಯಂತಾದೆ. ಮಳೆನೀರು ರಸ್ತೆ ಮೇಲೆ ಸುಮಾರು 3-4 ಅಡಿಗಳಷ್ಟು ನಿಂತಿದೆ. ನೀರು ನಿಂತಿರುವ ಹಿನ್ನೆಲೆ ಬೈಕ್ ಸವಾರರ ತೀವ್ರ ಪರದಾಡುತ್ತಿದ್ದರು.
ಪ್ರಧಾನಿ ಮೇಲೆ ಡ್ರೋನ್ ದಾಳಿಗೆ ಸಂಚು
ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಮೇಲೆ ಡ್ರೋನ್ ದಾಳಿಗೆ ಉಗ್ರರ ಸಂಚು ರೂಪಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ಡ್ರೋನ್ ದಾಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಭಾರೀ ಮಳೆಯಾಗಿತ್ತು. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಜುಲೈ 30
ಸಿಲಿಕಾನ್ ಸಿಟಿಯಲ್ಲಿ ಉದ್ವಗ್ನಿ ಪರಿಸ್ಥಿತಿ
ಕನ್ನಡಪರ ಸಂಘಟನೆಯಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ಎಲ್ಲೆಡೆ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ. ಬೆಂಗಳೂರಿನ ಮೆಜಿಸ್ಟಿಕ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕನ್ನಡಪರ ಸಂಘಟನೆಯ ಕಾರ್ಯಕರ್ತರು ವಾಹನ ಸಂಚಾರಕ್ಕೆ ತಡೆಹಿಡಿದಿದ್ದಾರೆ. ಆಟೋ, ಕಾರು ಮತ್ತು ಬಸ್ ಗಳ ಸಂಚಾರಕ್ಕೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಆಟೋ, ಕಾರು ಮತ್ತು ಬಸ್ ಗಳ ಮೇಲೆ ಕಲ್ಲುತೂರಾಟ ನಡೆದಿದೆ. ಇದರಿಂದ ವಾಹನಗಳ ಗಾಜುಗಳು ಪೀಸ್ ಪೀಸ್ ಆಗಿದೆ. ದೊಣೆ ಹಿಡಿದು ಕಾರ್ಯಕರ್ತರು ಓಡಾಟ ನಡೆಸಿದ್ದಾರೆ. ಕರವೇ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದ್ದಾರೆ.
ಗೋಹತ್ಯೆ ನಿಷೇಧಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಆರು ತಿಂಗಳ ಒಳಗಾಗಿ ದೇಶದಲ್ಲಿ ಗೋ ಹತ್ಯೆಯನ್ನು ನಿಷೇಧಿಸಿ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ಗಡುವು ನೀಡುವ ಮೂಲಕ ಖಡಕ್ ಸೂಚನೆ ನೀಡಿತ್ತು. ರಾಜ್ಯದ ಹಿಂದೂ ಸಂಘಟನೆಗಳು ಹಾಗೂ ಭಾರತೀಯ ಗೋವಂಶ ರಕ್ಷಣಾ ಸಂವರ್ಧನ ಪರಿಷದ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿರುವ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಸಿಎಂ ಪುತ್ರ ನಿಧನ
ಸಿಎಂ ಸಿದ್ದರಾಮಯ್ಯ ಅವರ ಜೇಷ್ಠ ಪುತ್ರ ರಾಕೇಶ್ ಸಿದ್ದರಾಮಯ್ಯ(39) ಅವರು ಅಕಾಲಿಕವಾಗಿ ನಿಧನರಾಗಿದ್ದರು. ಬೆಲ್ಜಿಯಂ ಆಸ್ಪತ್ರೆಯಲ್ಲಿ ರಾಕೇಶ್ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದಾರೆ. ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿರುವ ಆ್ಯಂಟ್ ವರ್ಪ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಕೇಶ್ ನಿಧನರಾಗಿದ್ದಾರೆ. ರಾಕೇಶ್ ಅವರು ಪ್ಯಾಂಕ್ರಿಯಾಸ್ ತೊಂದರೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಕಳೆದ ಒಂದು ವಾರದಿಂದ ಬೆಲ್ಜಿಯಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಕೇಶ್ ಆರೋಗ್ಯ ವಿಚಾರಿಸಲು ಸ್ವತಃ ಸಿಎ ಸಿದ್ದರಾಮಯ್ಯ ಬೆಲ್ಜಿಯಂಗೆ ತೆರಳಿದ್ದರು.

LEAVE A REPLY

Please enter your comment!
Please enter your name here