ಜುಲೈತನಕ ಕೊರೊನೋ ಆತಂಕ: ಜ್ಯೋತಿಷ್ಯ ವಿದ್ವಾನ್ ಅಭಿಮತ

0
106

ಇದು ವಿಶೇಷ ವರದಿ

ಮೂಡುಬಿದಿರೆ: ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ವೈರಸ್' ಪ್ರಭಾವ ಕೇವಲ ಕೆಲವು ದಿನಗಳಿಗಷ್ಟೇ ಸೀಮಿತವಾಗಿಲ್ಲವಂತೆ...ಹೀಗನ್ನುತ್ತಾರೆ ಖ್ಯಾತ ಜ್ಯೋತಿಷ್ಯ ವಿದ್ವಾನ್ ಶ್ರೀ ಉಡುಪುಮೂಲೆ ರಾಘವೇಂದ್ರ ಭಟ್. ಧಾರ್ಮಿಕ, ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆಯನ್ವಯವೂ ಇದು ಸಾಬೀತಾಗಿದೆ ಎಂಬುದು ಅವರ ವಾದ. ಪ್ರತೀ 29.5 ವರ್ಷಗಳಿಗೊಮ್ಮೆ ಶನಿಗ್ರಹವು ಉತ್ತರಾಷಾಡ ನಕ್ಷತ್ರವನ್ನು ಪ್ರವೇಶಿಸಿದಾಗ ಒಂದು ರೀತಿಯವೈರಸ್’ ಶನಿಗ್ರಹದಿಂದ ಭೂಮಿಯ ಮೇಲೆ ಪ್ರಭಾವ ಬೀರುತ್ತದೆ.


25-12-2019ರಂದು ಕೊರೊನಾ ವೈರಸ್ ಶನಿಗ್ರಹದಿಂದ ಹೊರಟು10-1-2020ಕ್ಕೆ ಭೂಮಿಯನ್ನು ತಲುಪಿದೆ. ಈ ವೈರಸ್ 25ಡಿಗ್ರಿ ಅಕ್ಷಾಂಶದಿಂದ 35ಡಿಗ್ರಿ ಅಕ್ಷಾಂಶದ ಅಡಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತೀವ್ರತೆಯನ್ನು ಹೊಂದಿರುತ್ತದೆ. ಜಗತ್ತಿನಾದ್ಯಂತ ಇತರ ಸ್ಥಳಗಳಲ್ಲಿಯೂ ತನ್ನ ಪ್ರಭಾವ ಹೊಂದಿರುತ್ತದೆ. ವೈಜ್ಞಾನಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವೂ ಈ ವೈರಸ್ 25-5-2020ರ ವರೆಗೆ ಪ್ರಭಾವ ಬೀರುತ್ತದೆ. ಮತ್ತು ನಂತರದ ದಿನಗಳಲ್ಲಿ ನಿಧಾನವಾಗಿ ಕಡಿಮೆಯಾಗುತ್ತದೆ. 20-7-2020ರ ನಂತರ ಪರಿಪೂರ್ಣವಾಗಿ ನಾಶವಾಗುತ್ತದೆ ಎಂಬುದು ಅವರ ಅಭಿಪ್ರಾಯ.


ಭಾರತದಾದ್ಯಂತ ನವಪಾಷಾಣ ಶಿವಲಿಂಗಗಳ (ಜ್ಯೋತಿರ್ಲಿಂಗ)ಉಪಸ್ಥಿತಿಯ ಕಾರಣದಿಂದ ಈ ವೈರಸ್ಸಿನಿಂದ ತಪ್ಪಿಸಲು ಭಾರತೀಯ ಭೂಮಿ ಅತ್ಯಂತ ಹೆಚ್ಚು ಸುರಕ್ಷಿತ ತಾಣವಾಗಿದೆ ಎಂದವರು ಅಭಿಪ್ರಾಯಿಸುತ್ತಾರೆ.


ಯಾವ ರಾಶಿಗೆ ತೊಂದರೆ: ಮೂಲಾ , ಪೂರ್ವಾಷಾಡ, ಉತ್ತರಾಷಾಡ, ಮೃಗಶಿರಾ, ಆದ್ರ್ರಾ, ಪುನರ್ವಸು ನಕ್ಷತ್ರದ ಜನರು ಈ ವೈರಸ್ ಸೋಂಕಿಗೆ ತುತ್ತಾಗಲು ಸಾಧ್ಯತೆಗಳು ಹೆಚ್ಚಿದೆ ಎಂದು ಜ್ಯೋತಿಷ್ಯ ವಿದ್ವಾನ್ ರಾಘವೇಂದ್ರ ಭಟ್ ಅಭಿಪ್ರಾಯ ಪಡುತ್ತಾರೆ.

LEAVE A REPLY

Please enter your comment!
Please enter your name here