ಜೀವ-ಜೀವನ-ಪ್ರಹಸನ!

0
622

ಮಸೂರ ಅಂಕಣ: ಆರ್ ಎಂ ಶರ್ಮ
ಜೀವ,ಜೀವನ ಇಲ್ಲಿ ಯಾವುದು ದೊಡ್ಡದು,ಏಕೆ,ಹೇಗೆ ಇವೇ ನಮ್ಮ ಈ ಚಿಂತನದ ಕೇಂದ್ರ ಸಂಗತಿ.
ಪ್ರಸವ ಸಮಯದಲ್ಲಿ,ಹೆರಿಗೆ ಕ್ಲಿಷ್ಟವಾದಾಗ,ವೈದ್ಯರು ಕೇಳುವ ಪ್ರಶ್ನೆ-ಯಾವಜೀವ ಉಳಿಸಲ್ಪದಬೇಕು-ದೊಡ್ಡಜೀವವೇ,ಚಿಕ್ಕಜೀವವೇ?
ಇರಲಿ,ಇನ್ನು ಮುಂದಕ್ಕೆ ಹೋಗೋಣ-
“ಚಿತಾಯಾಶ್ಚ ಚಿಂತಾಯಾಶ್ಚ ಬಿಂದುಮಾತ್ರಂ ವಿಷಿಷ್ಯತೇ,
ಚಿತಾದಹತಿ ನಿಜೀ೯ವಂ ಚಿಂತಾ ದಹತಿ ಜೀವಿನಂ”
ಅಲ್ಲಿಗೆ ತಾತ್ಪಯ೯ ಜೀವನ ಹಾನಿಗೊಳಲ್ಪಡುವ ಸಂಗತಿ-ಸಂಗಾತಿ-ಇದೇ ಗತಿ, ಇದೇಮತಿ,ಇಲ್ಲಿದೆ ಮಿತಿ,ಅದೇನೀತಿ.
ಪರಾತ್ಪರದ ಮಾತು,ಭಗವದ್ಗೀತೆಯಲ್ಲಿ-ಎಲ್ಲಾ ಜೀವಗಳಲ್ಲಿಯೂ-ಅಥಾ೯ತ್ ಸೃಷ್ಟಿಗಳಲ್ಲಿ ತಾನು-ಆತ್ಮ-ಹೃದಯಸ್ಥಾನದಲ್ಲಿ ನೆಲೆಸಿರುತ್ತೇನೆ.
ಜೀವ,ಜೀವಾತ್ಮ,ಆತ್ಮ,ಪರಮಾತ್ಮ ಇವು ನಾಶವಿಲ್ಲದವು.
ಮನುಷ್ಯಜೀವನಕ್ಕೆ ಸಂಭಂಧಿಸಿದಂತೆ-ಮರಣಾನಂತರ-ಜೀವನು ಪಂಚೇಂದ್ರಿಯಗಳನ್ನು ಹೊತ್ತು ಹೊಸಜೀವವನ್ನು ಪ್ರವೇಶಿಸುತ್ತಾನೆ-ಇದು ಪರಾತ್ಪರದ ಸತ್ಯನುಡಿ.
“ನವಾನಿ ದೇಹಾನಿ ಗೃಹ್ಣಾತಿ”.
ಹಾಗಾದರೆ ಮರಣ ಯಾವುದಕ್ಕೆ-ಸ್ಪಷ್ಟವಾಗಿ-ದೇಹಕ್ಕೆ-ಜೀವಿಗೆ-ಜೀವನಕ್ಕೆ.
ಜೀವನದಲ್ಲಿ-ಸಾಧನೆ-ಅಥಾ೯ತ್ ಬದುಕಿನಲ್ಲಿ-ಬದುಕಿರುವಾಗ-ಆಯಿಸ್ಸಿರುವಾಗ ಮಾಡುವ,ಮಾಡಿಸುವ ಕೆಲಸಗಳು,ಪಡೆಯುವ ಫಲಗಳು ಇತ್ಯಾದಿ ಸಾಧನೆಗಳಗುತ್ತವೆ.
ಅಲ್ಲಿಗೆ ಜೀವ ಮತ್ತು ಜೀವನ ಇಲ್ಲಿರುವ ಸ್ಥಿತ್ಯಂತರ ನಿದಿ೯ಷ್ಟ.
ಪುನರಪಿ ಜನನ,ಪುನರಪಿ ಮರಣ-ಇವು ಜೀವಕ್ಕೆ ಹೊಸ ಹೊಸ ದೇಹಗಳ ಪ್ರಾಪ್ತಿ.
ಅಲ್ಲಿಗೆ ಮರಣವಿಲ್ಲದ ಜೀವ,ಮರಣವಿರುವ ಜೀವನ ಎಂಬುದು ನಿಧಾ೯ರವಾಯಿತು.
ಆದ್ದರಿಂದ ಜೀವ ದೊಡ್ಡದು,ಜೀವನ ಚಿಕ್ಕದು ಎಂತಲ್ಲವೇ ಉಪಸಂಹಾರ?
ಸ್ವಯಂ ಪ್ರತಿಭೆ,ಪ್ರತಿಷ್ಟೆ ಇರುವ ಜೀವ ದೊಡ್ಡದಾದಮೇಲೆ ಇನ್ನುಳಿದಿರುವುದು ಜೀವನವನ್ನು ದೊಡ್ಡದು ಮಾಡುವ-ಮಾಡಿಸುವ ಕಾಯ೯ ಅಷ್ಟೇ.
“ಶರೀರಮಾದ್ಯಃ ಖಲುಧಮ೯ಸಾಧನಂ”-ಇದು ಮಹಾಕವಿ ಕಾಳಿದಾಸನ ಅನುಭವದ ಮಾತು-ನೀತಿ.
ನಮ್ಮ ದೈನಿಕ ದೇವೋಪಾಸನೆಯಲ್ಲಿ ಪ್ರಾಥ೯ನೆ-“ನಿರಾಯಾಸೇನ ಮರಣಂ,
ವಿನಾದೈನ್ಯೇನ ಜೀವನಂ”.
ಇದರ ಅಥ೯ ಜೀವನ ಮರಣದಲ್ಲಿ ಪಯ೯ವಸಾನ.
ಅಲ್ಲಿಯೂ ಜೀವನದ ಕಿರಿತನ ಸುಸ್ಪಷ್ಟ.
ಹೇಗೆ ನೋಡಿದರೂ,ನೋಡಿಸಲ್ಪಟ್ಟರೂ ಜೀವನ ಖಂಡಿತವಾಗಿಯೂ ಚಿಕ್ಕದೇ ಸರಿ.
ಆದರೆ ಜೀವನ ಹಿರಿದು-ಇದಕ್ಕೆ ಬಿರುದು ಎಂತ ಕೊಂಡಾಡುವ,ಕಚ್ಚಾಡುವ,ಕಿಚ್ಚಿಡುವ-ಆಟ-ಚಲ್ಲಾಟ-ಚೀರಾಟ ಇವು ಪ್ರಹಸನವಲ್ಲದೇ ಮತ್ತೇನು?
ಜೀವಕ್ಕೆ ಸಾಧನೆಯೇ-ಇದು ತಕ೯ವೇ ಕುತಕ೯ವೇ?
ಸಾವಿಲ್ಲದಕೆ ಮತ್ತೇನುಬೇಕು ಮಹತಿಗೆ?
ಮತಿಗೆ ಗ್ರಹಣವಿಲ್ಲದಿದ್ದರೆ,ಗ್ರಹಣಹಿಡಿಯದಿದ್ದರೆ-ಗತಿ,ಸುಗತಿ,ಸದ್ಗತಿ ಎಲ್ಲಾಸರಿ.
ಭಗವಂತನ ಮಾತು,ನಿಲುವು,ನಿಧಾ೯ರ-ಗೀತಾಚಾಯ೯ನ ಮಾತಿನಂತೆ ಭಗವದ್ಗೀತೆಯುದ್ದಕ್ಕೂ-ಶರೀರ ಕೇಂದ್ರವಿದ್ದು ಅದರಿಂದ ಕೆಲಸ ಮಾಡಿಸುವ ಜಾಣ್ಮೆಯೇ ಚಚಿ೯ತ ಸಂಗತಿ.ಹಾಗಾದಮೇಲೆ ಮತ್ತೇನಿದೆ ಪ್ರಶ್ನಿಸಲು-“ಜೀವವೇ ಜೀವನವೇ ಯಾವುದು ದೊಡ್ಡದು?”-ಎಂತ ಕೇಳಲು.
ಪ್ರಾಪ್ಯ ವರಾನ್ ನಿಭೋದತ ಎಂದರೆ ಗುರುತನದ ಗುರುತು ಯಾವುದಕ್ಕೆ-ಜೀವಕ್ಕೋ-ಜೀವನಕ್ಕೋ?
ಹಿರಿದು,ಕಿರಿದು,ಸಂಪಾದನೆ,ನಷ್ಟ ಈ ಏರುಪೇರು-ವ್ಯತ್ಯಯ ಅಕ್ಷ್ರವಾದಜೀವಕ್ಕೇ?
ಇದೇ ಪ್ರಹಸನದ ಪರಾಕಾಷ್ಟೆ.
ಇದು ಚೇಷ್ಟೆಯೆ-ಕುಚೇಷ್ಟೆಯೆ?
ಪರಾತ್ಪರದ ಪ್ರತಿ ಪ್ರಶ್ನೆ,ಉತ್ತರ,ತಕ೯ ಭಗವದ್ಗೀತೆಯೆ ೭೦೦ ಕ್ಕೂ ಮಿಕ್ಕಿ ಶ್ಲೋಕಗಳಲ್ಲಿ ಪರಿಚಯಿಸುವ ಸತ್ಯ ಮನುಷ್ಯ-ಶರೀರಿ ಕಷ್ಟಪಡಬೇಕು-ಕೆಲಸಮಾಡಬೇಕು-ಫಲದಕ್ಕಿಸಿಕೊಳ್ಳಬೇಕು ಎಂಬುದನ್ನೇ ಪ್ರತಿಪಾದಿಸುತ್ತದೆ.
ಈ ಪ್ರತಿಪಾದನೆಗೆ ಸವಾಲುಂಟೇ-ಸೋಲುಂಟೇ?
ಶರೀರ ಎಂದರೆ ಭೌತಿಕ ಸಂಪತ್ತಲ್ಲವೇ?
ಈ ಸಂಪತ್ತಿಗೆ ಸಾವಿಲ್ಲವೇ?
ಸಾವಿದ್ದೂ ಮಹತಿಯೇ?
ಭೌತಿಕವಾದುದು ಆಧ್ಯಾತ್ಮಿಕವಾದುದಕ್ಕಿಂತ ಕೀಳಲ್ಲವೇ-ಮೌಲಿಕವಾಗಿ?
ಮೌಲಿಕತೆ ಇಲ್ಲದಿದ್ದರೂ ಮಹತಿ ಎಂದರೆ ನಗೆಪಾಟಲಲ್ಲವೇ?
ಈ ನಗೆಪಾಟಲಿನದು ಪ್ರಹಸನವಲ್ಲವೇ?
ಜೀವವಿದ್ದರೆ-ಜೀವನ,ಜಿವನದ ಕೆಲಸ ಸಾಧನೆ-ಶೋಧನೆ-ಸಂಶೋಧನೆ-ಸಂಪಾದನೆ ಹೀಗೆ ಮುಂದುವರೆಯುತ್ತಾ ಹೋದರೆ ಭೌತಿಕ ಐಶ್ವಯ೯ ಕ್ಕೆ-ಶರೀರ-ಶರೀರಿ ತಸ್ಮಾತ್ ಫಲಪ್ರಾಪ್ತಿ.
ಶರೀರತ್ಯಾಗ-ಪ್ರಾಪಂಚಿಕ ವ್ಯವಹಾರದ ಮಂಗಳ.
ಜನಹೇಳುವುದು ಪ್ರಾಣತ್ಯಾಗ-ಪ್ರಾಣ ಎಂದರೆ ಜೀವ.
ಜೀವಕ್ಕೆ ತ್ಯಾಗವೆಲ್ಲಿದೆ?
ಜೀವ,ಆತ್ಮ ಇವು ಪರಾತ್ಪರದ ನೆಲೆ-ಸೆಲೆ ಬೆಲೆ.
ಪರಾತ್ಪರದ ಸೃಷ್ಟಿಗೆ ಸೃಷ್ಟಿಕತ೯ನಮೇಲೆ ಹತೋಟಿಯೇ?
ಇದಲ್ಲವೇ ಪ್ರಹಸನ?
ಹೇಗೇ ನೋಡಲಿ ನೋಡಿಸಲ್ಪಡಲಿ ಒಟ್ಟಿನಲ್ಲಿ ಜೀವ ದೊಡ್ಡದೇ ವಿನಃ ಜೀವನವಲ್ಲ.
ಇದೇ ಸತ್ಯ-ನಿತ್ಯ-ತಥ್ಯ.
ಸತ್ಯವೇ ಶಿವ,ಸುಂದರ.
ಅದಕ್ಕೇ ಪರಾತ್ಪರಕ್ಕೆ ಹೇಳುವ ಮಾತು-
“ಸತ್ಯಂ, ಶಿವಂ, ಸುಂದರಂ”.
ಈ ನಮ್ಮ ಚಿಂತನಕ್ಕೆ ಮೂಲಾಧಾರ,ಈಗ್ಯೆ ಸುಮಾರು ೩ ತಿಂಗಳುಗಳ ಹಿಂದೆ ನಾವು ಒಂದು ದಿನಪತ್ರಿಕೆಯಲ್ಲಿ ಓದಿದ್ದ- “ಮಾಡರ್ನ್ ಅಧ್ಯಾತ್ಮ ಎಂಬ ಒಂದು ಲೇಖನ.
ನಾವು ನಮ್ಮ ತಕ೯ವನ್ನು ಮಹನೀಯರಾದ ಓದುಗ ಸಮುದಾಯದ ಮುಂದೆ ಇಟ್ಟಿದ್ದೇವೆ.
ಆ ಬುದ್ಧಿಜನ ವಿಮಶಿ೯ಸಲಿ-ತೀಮಾ೯ನಿಸಲಿ.
ಅದೇ ಉಚಿತ-ಖಚಿತ.
ಆಗಿಲ್ಲ ಪ್ರಹಸನ.
ಎಲ್ಲಾ ಝಳ-ಝಳ.
ಆರ್.ಎಂ.ಶಮ೯

LEAVE A REPLY

Please enter your comment!
Please enter your name here