ಜೀವವನ್ನೆ ತರ್ಪಣ ನೀಡಿದವರನ್ನ ನೆನಪಿಸಿಕೊಳ್ಳದಷ್ಟು ಸ್ವಾರ್ಥಿಗಳಾಗಿ ಬಿಟ್ವಲ್ಲ!

0
3325

ಆತ ಶೋಕಿವಾಲ, ಒಂದಷ್ಟು ತುಂಟ, ಶುಧ್ಧ ಪೋಕರಿ, ಕುಳಿತು ತಿಂದರು ಕರಗುವಷ್ಟು ಆಸ್ತಿಯಿತ್ತು, ಮನೆಯವರೆಲ್ಲ ಬ್ರಿಟೀಷರ ಪರಮ ಭಕ್ತರು, ತಂದೆ ಸಾಹಿಬ್ ಡಿಕ್ತಾರರ ಎರಡನೇ ಪುತ್ರ, ತಂದೆ ಸಾಹಿಬ್ ಡಿಕ್ತಾರ ಅಮೃತಸರದಲ್ಲಿ ವೈದ್ಯನಾಗಿದ್ದವನು, ಬ್ರಿಟೀಷರ ಆಪ್ತ ಮಿತ್ರ, ಧಿಂಗ್ರಾನ ಶಿಕ್ಷಣದ ಪಯಣ ಶುರುವಾದದ್ದು ಇದೆ ಅಮೃತಸರದಿಂದ, ಇಂಜಿನಿಯರಿಂಗ್ ಓದಬೇಕೆಂಬ ಅತೀವ ಆಸೆಯಿಂದ ಧಿಂಗ್ರಾ 1906ರಲ್ಲಿ ಲಂಡನ್ನಿಗೆ ಹಾರಿದ್ದ, ಅದೆ ಅಕ್ಟೋಬರ್ನಲ್ಲಿ ಯುನಿವರ್ಸಿಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾದ! ಅದೆ ಹೊತ್ತಿಗೆ ಸಾವರ್ಕರ್ ಪರಿಚಯವಾಗಿತ್ತು, ಪರಿಚಯ ಸ್ನೇಹವಾಯ್ತು, ನಂತರದಿನಗಳಲ್ಲಿ ಭಾರತಭವನದಲ್ಲಿ ಭಾಗಿಯಾದ 1908ರ ಹೊತ್ತಿಗೆ ಭಾರತ ಭವನ ಎಂಬ ಕ್ರಾಂತಿಕಾರಿಗಳ ಕೇಂದ್ರವೇ ಆತನ ಖಾಯಂ ನಿವಾಸವಾಗಿ ಹೋಯ್ತು! ಧಿಂಗ್ರಾನ ಜೀವನ ಸಾವರ್ಕರ್ ಜೊತೆಗೂಡಿದ ನಂತರ ಸಂಪೂರ್ಣ ಬದಲಾಯ್ತು! ಶೋಕಿವಾಲಾ ಮದನ್ ದೇಶಭಕ್ತನಾಗಿದ್ದ, ಹೀಗೆ ಜಪಾನಿಯರ ಶೌರ್ಯದ ಬಗ್ಗೆ ಒಂದಷ್ಟು ಮಂದಿ ಹರಟುತ್ತಿದ್ದರೆ ಧಿಂಗ್ರಾ ಅವರ ಮಾತಿನ ನಡುವಿನಲ್ಲಿ ಮೂಗು ತೂರಿಸಿ “ನಾವು ಹಿಂದೂಗಳೇನೂ ಕಮ್ಮಿಯಿಲ್ಲ” ಅಂದಾಗ ಇಡೀ ಸಭೆಯೆ ಇವನೆಲ್ಲೊ ಬಚ್ಚಾ ಎಂದು ಕೊಂಡು ನಕ್ಕಿ ಬಿಟ್ಟಿತ್ತು, ಧಿಂಗ್ರಾ ಮತ್ತೆ ಅವರತ್ತ ನಗುತ್ತ “ತಮಾಷಿಯೋ ಅಥವಾ ವ್ಯಂಗ್ಯವೋ ಮಾಡುತ್ತಿಲ್ಲ, ನಾನು ಹೇಳುವುದು ನಿಜ ಬೇಕಾದರೆ ನೀವೆ ಪರೀಕ್ಷಿಸಿ” ಎಂದಿದ್ದ, ಅಲ್ಲಿದ್ದ ವ್ಯಕ್ತಿಯೋರ್ವ ಪಿನ್ ತೆಗೆದುಕೊಂಡು ಬಲವಾಗಿ ಧಿಂಗ್ರಾನ ಕೈಗೆ ಗಾಯ ಮಾಡಿಬಿಟ್ಟ, ರಕ್ತ ಚಿಮ್ಮಿತ್ತು, ಹೀಗೆ ಚಿಮ್ಮಿದ ರಕ್ತ ಟೇಬಲ್ ತುಂಬ ಆವರಿಸಿಕೊಂಡು ಬಿಟ್ಟಿತ್ತು! ಆದರೆ ಮದನ್ ಕಿಂಚಿತ್ತು ಅಳುಕದೆ ಅದೆ ಮಂದಹಾಸದ ನಗೆ ಬೀರುತ್ತಿದ್ದ, ನೆರೆದಿದ್ದವರಿಗೆಲ್ಲ ಆಶ್ಚರ್ಯ!

ಇದೊಂದೆ ಘಟನೆಯಲ್ಲ, ಇನ್ನೊಂದು ಮಜಬುತಾದ ಘಟನೆ ನಡೆದಿತ್ತು, ಭಾರತ ಭವನದ ಮಾಳಿಗೆಯಲ್ಲಿ ಯಾರಿಗೂ ತಿಳಿಯದಂತೆ ಬಾಂಬುಗಳು ರೆಡಿಯಾಗ್ತಿದ್ವು, ಹೀಗೆ ಬಾಂಬು ತಯಾರಿಸುತ್ತ ತಯಾರಿಸುತ್ತ ಸಾವರ್ಕರ್ ಮತ್ತು ಧಿಂಗ್ರಾ ಗಹನವಾಗಿ ಚರ್ಚೆಯಲ್ಲಿ ಮುಳುಗಿಹೋದ್ರು, ಅಲ್ಲೆ ಒಲೆಯ ಮೇಲೆ ಕುದಿಯುತ್ತಿದ್ದ ರಾಸಾಯನಿಕ ದ್ರಾವಣ ಬರೊಬ್ಬರಿ ಮುನ್ನೂರು ಸೆಂಟಿಗ್ರೇಡ್ ದಾಟಿತ್ತು, ಇನ್ನೊಂದಿಷ್ಟು ಕುದ್ದುಹೋದರೆ ಬ್ಲಾಸ್ಟ್ ಆಗಿ ಬಿಡೋದು ಅದೇನಾದರು ಬ್ರಿಟಿಷರಿಗೆ ಗೊತ್ತಾದರೆ ಕ್ರಾಂತಿಕಾರಿಗಳ ಪ್ಲಾನ್ ಚೌಪಟ್ ಆಗೋದರ ಜೊತೆ ಜೊತೆಗೆ ನೇಣು ಕುಣಿಕೆಗೆ ಕುತ್ತಿಗೆಯೊಡ್ಡಬೇಕು! ಇತ್ತ ಸಾವರ್ಕರ್ ಇಕ್ಕಳಕ್ಕಾಗಿ ತಡಕಾಡಿದರೆ ಪುಣ್ಯಾತ್ಮ ಧಿಂಗ್ರಾ ತನ್ನ ಕೈಯಿಂದ ಇಡೀ ಕುದಿಯುತ್ತಿರುವ ದ್ರಾವಣದ ಗಾಜಿನ ಪಾತ್ರೆಯನ್ನ ತೆಗೆದು ಇರಿಸಿದ್ದ! ಕೈ ಸುಟ್ಟು ಕರಕಲಾಯ್ತು, ಮಾಂಸ ಸುಟ್ಟ ವಾಸನೆ, ಮುನ್ನೂರು ಡಿಗ್ರಿ ಸೆಲ್ಸಿಯಸ್ ಅಂದರೆ ಸುಮ್ಮನೇನಾ? ನೂರು ಡಿಗ್ರಿ ಸೆಲ್ಸಿಯಸ್ನ ಕುದಿಯುವ ನೀರನ್ನೆ ನಾವು ಬಿಸಿ ಅಂತೀವಲ್ಲಾ??

ಅದು 1907 ಅಲ್ಲಿಗೆ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಿಡಿಗೆ ಸುವರ್ಣೋತ್ಸವದ ಕಾಲ, ಸಾವರ್ಕರ್ ಅದೆ ವರ್ಷದ ಮೇ ತಿಂಗಳಲ್ಲಿ ೧೮೫೭ರ ಸುವರ್ಣಕಾಲ ಎಂಬ ಕಾರ್ಯಕ್ರಮ ರೂಪಿಸಿದ್ರು ಭಾರತೀಯ ವಿದ್ಯಾರ್ಥಿಗಳಿಗೆಲ್ಲ ಸಣ್ಣ ಬ್ಯಾಡ್ಜು ಅದರಲ್ಲಿ ಭಾರತೀಯತೆಯ ವಿಚಾರಧಾರೆಗಳು, ಆ ಬ್ಯಾಡ್ಜನ್ನ ಕಿತ್ತುಕೊಳ್ಳೋದಕ್ಕೆ ಹೀಗೊಂದಿಷ್ಟು ಬ್ರಿಟಿಷರು ಬಂದಾಗ ಧಿಂಗ್ರಾ ತನ್ನ ಕೈಯಲ್ಲಿದ್ದ ಚಾಕುವಿನಿಂದ ಇರಿದು ಓಡಿಹೋಗಿದ್ದನಂತೆ! ಹೀಗೊಮ್ಮೆ ಬಾಯಿಗೆ ಬಂದಂತೆ ಸಾವರ್ಕರ್ ರಿಂದ ಬೈಯ್ಯಿಸಿಕೊಂಡ ಧಿಂಗ್ರಾ ಒಂದಷ್ಟು ದಿನ ಭಾರತ ಭವನಕ್ಕೆ ತಲೆ ಹಾಕಲಿಲ್ಲ, ಒಂದಷ್ಟು ದಿನ ಬಿಟ್ಟು ವಾಪಸ್ಸಾದ “ನಾನು ಹುತಾತ್ಮನಾಗುವ ಸಮಯ ಬಂದಿದೆಯಾ?” ಎನ್ನುವ ಅಜೀಬ್ ಪ್ರಶ್ನೆಯನ್ನ ಸಾವರ್ಕರ್ಗೆ ಹಾಕಿದ್ದ, ಸಾವರ್ಕರ್ ಮುಗುಳ್ನಗುತ್ತ “ಈ ಪ್ರಶ್ನೆ ನಿನ್ನಲ್ಲಿ ಬಂದಿದೆ ಅಂದ್ರೆ ನೀನು ತಯಾರಾಗಿದ್ದೀಯ ಎಂದರ್ಥ” ಎಂದು ಮುಗುಳ್ನಕ್ಕರು ಧಿಂಗ್ರಾ “ನಾನು ತಯಾರಾಗಿದ್ದೀನಿ, ನನ್ನ ಸಮಯ ಯಾವಾಗ?” ಎಂದಿದ್ದ! ಇತ್ತ ಸಾವರ್ಕರ್ ಹಿರಿಯಣ್ಣ ಬಾಬಾ ಸಾಹಿಬ್ಗೆ 1909ರ ಜೂನ್ 8ರಂದು ಕಾಲಾಪಾನಿಯ ಶಿಕ್ಷೆ ಘೋಷಣೆಯಾಯ್ತು ಕಾಲಾಪಾನಿ ಅದೊಂದು ನರಕ, ರಾಜಕೀಯ ಖೈದಿಗಳಾಗಿದ್ದ ಗಾಂಧಿಯಂತಹ ಮಂದಿ ಅದನ್ನ ಅನುಭವಿಸಿರಲೇ ಇಲ್ಲ! ಅಷ್ಟೆ ಯಾಕೆ ಅಂತಹದೊಂದು ಶಿಕ್ಷೆಯ ರುಚಿಯೂ ಗೊತ್ತಿಲ್ಲ, ಹೆಚ್ಚೆಂದರೆ ಲಾಹೋರ್ ಜೈಲುಗಳಷ್ಟೆ ಅವರಿಗೆ ಗೊತ್ತು! ಅದರಲ್ಲೂ ಲಾಹೋರ್ ಜೈನಿಲ್ಲಿ ರಾಜಕೀಯ ಖೈದಿಗಳಿಗೆ ಪ್ರೀಡಂ ಬೇರೆ! ಹೋಗಲಿ ಬಿಡಿ, ಇದೆ ಹೊತ್ತಿಗೆ ಸೇಡು ತೀರಿಸಿಕೊಳ್ಳೋದಕ್ಕೆ ಮುಂದಾದ,ಸಿದ್ಧತೆಯನ್ನೂ ನಡೆಸಿದ, ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ನಿನ ಟೈಪಿಸ್ಟ್ ಏಮಾ ಜೋಸೆಫಿನ್ ಭೆಕ್ ಜೊತೆ ಸ್ನೇಹ ಬೆಳೆಸಿಕೊಂಡ, ಈ ಸಂಸ್ಥೆ ಭಾರತೀಯ ವಿದ್ಯಾರ್ಥಿಗಳನ್ನ ಇಂಪಿರಿಯಲಿಸ್ಟ್ಗಳನ್ನಾಗಿ ಕನ್ವರ್ಟ್ ಮಾಡುತ್ತಿದ್ದ ಸಂಸ್ಥೆ. ಲಾರ್ಡ್ ಕರ್ಜನ್ ವಾಯಲಿ ಸಂಸ್ಥೆಯ ಮುಖ್ಯಸ್ಥ, ಅವನೆ ಇವನ ಟಾರ್ಗೆಟ್ಟು, ಕರ್ಜನ್ ವಾಯಲಿ ಈ ಹಿಂದೆ ಭಾರತದಲ್ಲಿ ಬ್ರಿಟಿಷ್ ಸೇನೆಯ ಮುಖ್ಯಸ್ಥಿಕೆ ವಹಿಸಿದ್ದ! ಅಂದು 1907ರ ಜುಲೈ 1 ಸಂಸ್ಥೆಯ ವಾರ್ಷಿಕೋತ್ಸವ ಅದೇ ದಿನ ವಾಯಲಿಗೆ ಮೂಹೂರ್ತ ಫಿಕ್ಸ್ ಆಗಿತ್ತು, ಧಿಂಗ್ರಾ ಪಕ್ಕಾ ದೇಸಿ ಉಡುಗೆ ತೊಟ್ಟಿದ್ದ, ಪಂಜಾಬಿ ಪೇಟ, ಮೂರು ಪಿಸ್ತೋಲ್, ಎರಡು ಚಾಕು, ಜೊತೆಗೊಂದು ಗಾಗಲ್ ಹಾಕಿಕೊಂಡು ಸಭೆಗೆ ಬಂದವನೆ ಪಿಸ್ತೋಲು ತೆಗೆದು ಟ್ರಿಗರ್ ಒತ್ತಿಬಿಟ್ಟ ಬರೊಬ್ಬರಿ ಐದು ಗುಂಡುಗಳನ್ನ ಒಂದರಂತೆ ಒಂದು ಹೊಡೆದ, ಗುರಿ ಮಿಸ್ ಆಗಲಿಲ್ಲ, ಒಂದು ಗುಂಡು ವಾಯಲಿಯ ಬಲಗಣ್ಣನ್ನ ಛಿದ್ರ ಗೊಳಿಸಿತ್ತು! ಇನ್ನೊಂದು ಮುಖವನ್ನ ಸೀಳಿತ್ತು ವಾಯಲಿ ಅರಚುತ್ತ ಕೆಳಕ್ಕೆ ಬಿದ್ದ! ಮತ್ತೆ ಏಳಲಿಲ್ಲ, ವಾಯಲಿ ಬಿದ್ದದ್ದೆ ತಡ ಕವಾಸ್​ಜಿ ಲಾಲ್​ ಕಾಕಾ ಎಂಬ ಯುವಕ ಹಿಡಿಯೋದಕ್ಕೆ ಮುಂದೆ ಬಂದ ಧಿಂಗ್ರಾನ ಪಿಸ್ತೋಲಿನ ಆರನೆ ಗುಂಡು ಅವನನ್ನೂ ಜನ್ನತ್ಗೆ ಕಳಿಸಿತ್ತು! ಒಬ್ಬ ಹಿಡಿಯೋದಕ್ಕೆ ಬಂದ್ರೆ ಧಿಂಗ್ರಾ “ಸ್ವಲ್ಪ ನಿತ್ಗೋಳಪ್ಪ ಕನ್ನಡಕ ಸರಿ ಮಾಡ್ಕೋಂತೀನಿ” ಅಂತ ಹೇಳಿದ್ದನಂತೆ! ಮಧನ್ ಸಿಕ್ಕಿಹಾಕಿಕೊಂಡ, ಸಿಕ್ಕಿ ಹಾಕಿ ಬಿದ್ದ ಇಡೀ ರಾತ್ರಿ ಠಾಣೆಯಲ್ಲಿ ನಿದ್ದೆ ಮಾಡಿದ, ವಿಷಯ ಸಾಹಿಬ್ ಡಿಕ್ತಾರ್ಗೆ ತಲುಪಿತ್ತು ಸಾಹಿಬ್ ಡಿಕ್ತಾರ್ “ಅವನು ನನ್ನ ಮಗನಲ್ಲ ಮೂರ್ಖ” ಎಂದು ಕುದ್ದುಹೋದ! ಇತ್ತ ಧಿಂಗ್ರಾನಿಗೆ ಓಲ್ಡ್ ಬೈಲೆ ನ್ಯಾಯಾಲಯದಲ್ಲಿ ಫಾಸಿ ಶಿಕ್ಷೆಯ ತೀರ್ಪು ನೀಡಲಾಯ್ತು! ಕೊನೆದಿನಗಳಲ್ಲೂ ಅದೆ ಶರಾರತ್ ಆತನಲ್ಲಿತ್ತು, ಸಾವರ್ಕರ್ ಆತನನ್ನ ಜೈಲಿನಲ್ಲಿ ಸಂದರ್ಶಿಸಿದಾಗ “ಸಾವರ್ಕರ್ ಜೀ ನನ್ನ ಶವಸಂಸ್ಕಾರ ಹಿಂದೂ ಸಂಸ್ಕಾರದಂತಾಗಲಿ” ಎಂದಿದ್ದ,1909ರ ಆಗಸ್ಟ್ 17ರಂದು ಫಾಸಿಯೂ ಆಯ್ತು ಅದಕ್ಕಿಂತ ಮೊದಲು ಆತ ಹೀಗೆ ಹೇಳಿದ್ದ “ಥ್ಯಾಂಕ್ಸ್ ನನ್ನ ತಾಯ್ನಾಡಿಗೆ, ನನ್ನ ಈ ಅಲ್ಪ ಜೀವನವನ್ನ ತಾಯ್ನಾಡಿಗೆ ಧಾರೆ ಎರೆಯುತ್ತಿರೋದಕ್ಕೆ ಹೆಮ್ಮೆಯಾಗುತ್ತೆ” ಎಂದಿದ್ದ. ಧಿಂಗ್ರಾ ಏನೋ ಹೋರಾಡಿ ಸುಮ್ಮನಾಗಿ ಬಿಟ್ಟ! ನಮ್ಮವರಿಗೆ ಧಿಂಗ್ರಾ ನೆನಪೆಯಿಲ್ಲ! ಒಂದಷ್ಟು ತೆರೆ ಮೇಲೆ ಕಾಣೋ ರೀಲ್ ಹೀರೋಗಳಿಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ, ಆದರೆ ಧಿಂಗ್ರಾ, ಭಗತ್, ಭೋಸ್, ಸಾವರ್ಕರ್ ರಂತಹ ರಿಯಲ್ ಹೀರೋಗಳಿಗೆ ಅಭಿಮಾನಿಗಳಿರೋದು ಅಷ್ಟಕ್ಕಷ್ಟೆ! ಯಾವುದೋ ಸಾಮ್ರಾಜ್ಯ ಶಾಹಿ ಟಿಪ್ಪುವಿನಂತ ಮತಾಂಧನ ದಿನಾಚರಣೆ ಆಚರಿಸೋ ಸರ್ಕಾರಕ್ಕೆ ಧಿಂಗ್ರಾರಂತಹ ವೀರರೂ ಕಾಣಿಸೊಲ್ಲ! ಧಿಂಗ್ರಾ ಬಗ್ಗೆ ಓದಿದ್ದು ನೆನಪಾದಾಗೆಲ್ಲ ” ಸಾರಿ ಧಿಂಗ್ರಾ, ನಮ್ಮ ಜನಕ್ಕೆ ನಿನ್ನಂತವರನ್ನ ಗೌರವಿಸೋದಕ್ಕೆ ಸಮಯವಿಲ್ಲ ಅನ್ನಿಸುತ್ತೆ, ಅಥವಾ ನಿನ್ನಂತ ವೀರರನ್ನ ಪಡೆಯೋದಕ್ಕೆ ನಮ್ಮವರು ಅರ್ಹರಲ್ಲವೇನೋ” ಎನ್ನಿಸಿ ಬಿಡುತ್ತೆ.

ನಾಗರಾಜ್ ಬಾಳೆಗದ್ದೆ

LEAVE A REPLY

Please enter your comment!
Please enter your name here