ಜಿಸ್ಯಾಟ್-18 ಯಶಸ್ವಿ ಉಡಾವಣೆ

0
158

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕೊವುರೌನಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
 
 
ಭಾರತೀಯ ಕಾಲಮಾನದಂತೆ ಬುಧವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣಾ ಪ್ರದೇಶದಲ್ಲಿ ವ್ಯತಿರಿಕ್ತ ವಾತಾವರಣವಿದ್ದುದರಿಂದ ಹಾಗೂ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿತ್ತು. ಅದರಂತೆ ಗುರುವಾರ ನಿಗದಿತ ಸಮಯಕ್ಕೆ ಸರಿಯಾಗಿ ಜಿಸ್ಯಾಟ್-18 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
 
ಜಿಸ್ಯಾಟ್-18 ಸುಮಾರು 3,404 ಕೆ.ಜಿ. ತೂಕ ಹೊಂದಿದ್ದು, ಈ ಉಪಗ್ರಹವನ್ನು ಹೊತ್ತ ಏರಿಯಾನ್-5 ವಿಎ-231 ರಾಕೆಟ್ ಅಗಸಕ್ಕೆ ಚಿಮ್ಮಿತು. ಬಳಿಕ 32 ನಿಮಿಷಗಳಲ್ಲಿ ರಾಕೆಟ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here