ಜಿಲ್ಲಾ ಸ್ಲಂ ಮೋರ್ಚಾ ಉದ್ಘಾಟನೆ

0
361

ಮಂಗಳೂರು ಪ್ರತಿನಿಧಿ ವರದಿ
ಜಿಲ್ಲಾ ಸ್ಲಂ ಮೋರ್ಚಾ ಉದ್ಘಾಟನೆ ಭೌಗೋಳಿಕ ಮತ್ತು ಸಾಮಾಜಿಕ ಸ್ತರದಲ್ಲಿ ಎಲ್ಲಾ ಸಮುದಾಯಗಳನ್ನು ತಲುಪುವ ದೃಷ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲೆಯಲ್ಲಿ ಉಪೇಕ್ಷಿತ ವರ್ಗದ ಸಮುದಾಯವನ್ನೊಳಗೊಂಡ ಸ್ಲಂ ಮೋರ್ಚಾವನ್ನು ಆರಂಭಿಸಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
 
 
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅವರು ನೂತನ ಜಿಲ್ಲಾ ಸ್ಲಂ ಮೋಚರ್ಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೆ ಜಿಲ್ಲೆಯಲ್ಲಿ 7 ವಿವಿಧ ಮೋರ್ಚಾಗಳನ್ನು ರಚಿಸಲಾಗಿದೆ. ಸ್ಲಂ ಮೋರ್ಚಾ ಕೊನೆಯ ಮೋರ್ಚಾವಾಗಿದೆ. ಪಕ್ಷದ ಧ್ಯೇಯೋದ್ದೇಶಗಳನ್ನು ತಿಳಿಸುವುದರೊಂದಿಗೆ ಕೊಳಜೆ ನಿರ್ಮೂಲನೆ ಮಾಡುವ ಜವಾಬ್ದಾರಿ ವಹಿಸಬೇಕು. ಈ ಮೂಲಕ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ನಗರದ ಯೋಜನೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
 
 
ಪಕ್ಷದ ಕಾರ್ಯಚಟುವಟಿಕೆಯನ್ನು ಸರ್ವವ್ಯಾಪಿಯಾಗಿ ಹಮ್ಮಿಕೊಂಡು ಪ್ರಧಾನಿ ಮೋದಿ ಅವರ ಕನಸಿನ ಸ್ವಚ್ಚ ಭಾರತ ಯೋಜನೆಗೆ ಪೂರವಕಾಗಿ ಸ್ಲಂ ಮೋರ್ಚಾ ಕಾರ್ಯನಿರ್ವಹಿಸಲಿದೆ. ದ.ಕ. ಜಿಲ್ಲೆಯಲ್ಲಿ 18 ಕೊಳಚೆ ಪ್ರದೇಶಗಳನ್ನು ಸರ್ಕಾರ ಗುರುತಿಸಿದೆ. ಇಲ್ಲಿರುವ ಬಡತನ ರೇಖೆಗಿಂತ ಕೆಳಗಿನ ದುರ್ಬಲ ವರ್ಗದ ಜನತೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಜೀವನಮಟ್ಟ ಪರಿವರ್ತನೆಗೆ ಕಾರ್ಯಪ್ರವೃತ್ತವಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
 
 
ಸ್ಲಂ ಮೋರ್ಚಾದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್, ದೇಶದ ಅಭಿವೃದ್ದಿಯ ಲೆಕ್ಕಾಚಾರದಲ್ಲಿ ಕೊಳಚೆ ಪ್ರದೇಶಗಳನ್ನು ಸ್ಥಿತಿಗತಿಯನ್ನು ಪರಿಗಣಿಸಲಾಗುತ್ತದೆ. ಸ್ಲಂ ಪ್ರದೇಶಗಳು ಅಭಿವೃದ್ದಿಯಾದರೆ ದೇಶವೇ ಅಭಿವೃದ್ದಿಯಾದಂತೆ. ಈ ನಿಟ್ಟಿನಲ್ಲಿ ನೂತನ ಜಿಲ್ಲಾ ಪದಾಕಾರಿಗಳು ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಿಕೊಂಡು ಕೊಳಚೆ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.
 
 
ವಿಧಾನಪರಿಷತ್ ಮಾಜಿ ಉಪಸಭಾಪತಿ ಯೋಗೀಶ್ ಭಟ್ ಮಾತನಾಡಿ, ಸ್ಲಂ ಮೋರ್ಚಾಗಳ ಪ್ರತಿನಿಧಿಗಳು ಸಮರ್ಪಕವಾಗಿ ದುಡಿದಾಗ ಪಕ್ಷದ ಮೇಲೆ ಉಪೇಕ್ಷಿತ ವರ್ಗಗಳ ಜನತೆಗೆ ವಿಶ್ವಾಸ ಮೂಡುತ್ತದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
 
 
ಅಧ್ಯಕ್ಷತೆ ವಹಿಸಿದ್ದ ಸ್ಲಂ ಮೋರ್ಚಾದ ಜಿಲ್ಲಾಧ್ಯಕ್ಷ ರಾಮ ಅಮೀನ್ ಪದಾಕಾರಿಗಳನ್ನು ಘೋಷಿಸಿದರು. ವೇದಿಕೆಯಲ್ಲಿ ಪಾಲಿಕೆ ಸದಸ್ಯ ನವೀನ್ ಚಂದ್ರ ಹಾಗೂ ಜಿಲ್ಲಾ ಬಿಜೆಪಿ ನಾಯಕ ಸುದರ್ಶನ್ ಮೂಡುಬಿದಿರೆ ಉಪಸ್ಥಿತರಿದ್ದರು. ನೂತನ ಪದಾಕಾರಿಗಳನ್ನು ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಶಾಲುಹೊದಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here