ಜಿಲ್ಲಾ ಗೃಹರಕ್ಷಕ ದಳ ಗೃಹರಕ್ಷಕರಿಗೆ ಯೋಗ ತರಬೇತಿ

0
594

 
ಮ0ಗಳೂರು ಪ್ರತಿನಿಧಿ ವರದಿ
ಡಿ.12 ರಂದು ಜಿಲ್ಲಾ ಗೃಹರಕ್ಷಕ ದಳ, ಮಂಗಳೂರು ಘಟಕ ಗೃಹರಕ್ಷಕರಿಗೆ 12 ದಿನಗಳ ಉಚಿತ ಯೋಗ ತರಬೇತಿ ಶಿಬಿರ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯುತ್ತಿದೆ.
 
 
 
ಅಂತರಾಷ್ಟ್ರೀಯ ಖ್ಯಾತಿಯ ಯೋಗ ಗುರು ಶ್ರೀ ಗೋಪಾಲ ಕೃಷ್ಣ ದೇಲಂಪಾಡಿ ಇವರ ಯೋಗ್ಯ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ 7.00 ರಿಂದ 8.00 ಗಂಟೆಯವರೆಗೆ ಧ್ಯಾನ, ಯೋಗ, ಪ್ರಾಣಾಯಾಮದ ಬಗ್ಗೆ ಸೂಕ್ತ ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗುತ್ತಿದೆ.
 
 
ಪೊಲೀಸ್ ಇಲಾಖೆಯ ಜೊತೆಗೂಡಿ ಕಾನೂನು ಶಿಸ್ತು ಪಾಲನೆಯಲ್ಲಿ ಹಗಲಿರುಳು ದುಡಿಯುವ ಗೃಹರಕ್ಷಕರಿಗೆ ಸಾಕಷ್ಟು ದೈಹಿಕ ಒತ್ತಡ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಮತ್ತು ಮಾನಸಿಕ ನೆಮ್ಮದಿ ಹಾಗೂ ಶಾಂತಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಗೃಹರಕ್ಷಕ ದಳ ಈ 12 ದಿನಗಳ ಉಚಿತ ಯೋಗ ಶೀಬಿರವನ್ನು ಹಮ್ಮಿಕೊಂಡಿದೆ.
 
 
ಸುಮಾರು 50 ಮಂದಿ ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ಜಿಲ್ಲಾ ಸಮಾದೇಷ್ಟರಾದ ಡಾ: ಮುರಲೀ ಮೋಹನ ಚೂಂತಾರು ಇವರ ನೇತೃತ್ವದಲ್ಲಿ ಈ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದೆ. ಈ ಯೋಗ ಶಿಬಿರದ ಸಮಾರೋಪ ಸಮಾರಂಭ ಡಿ.24ರಂದು ಬೆಳಿಗ್ಗೆ 9.00 ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here