ಜಿಟಿಟಿಸಿಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ

0
230

ಮ0ಗಳೂರು ಪ್ರತಿನಿಧಿ ವರದಿ
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಮಂಗಳೂರು, ಇಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿಯಲ್ಲಿ ಎಸ್. ಎಸ್.ಎಲ್. ಸಿ/ಐಟಿಐ/ಡಿಪ್ಲೂಮ/ಬಿ.ಇ (ಮೆಕ್ಯಾನಿಕಲ್ ವಿಭಾಗ) ಪಾಸಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಉಚಿತವಾಗಿ ಕೌಶಲ್ಯಾಭಿವೃದ್ದಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
 
 
ಸಿ.ಎನ್.ಸಿ ಟಿಕ್ನಾಲಜಿಸ್ಟ (6ತಿಂಗಳು), ಕ್ಯಾಡ್/ಕ್ಯಾಮ್, ಟರ್ನರ್, ಮಿಲ್ಲರ್, ಗ್ರೈಂಡರ್ (4ತಿಂಗಳು) ವಿಷಯಗಳಲ್ಲಿ ತರಬೇತಿ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ತಿಂಗಳಿಗೆ ರೂ. 2500 ಶಿಷ್ಯವೇತನ ನೀಡಲಾಗುವುದು.
 
 
2016-17 ನೇ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ (ಎನ್‍ಯುಎಲ್‍ಎಮ್) ಅಡಿಯಲ್ಲಿ ಮಂಗಳೂರು ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಎಸ್.ಎಸ್.ಎಲ್.ಸಿ/ಐಟಿಐ/ಡಿಪ್ಲೂಮ/ಬಿ.ಇ (ಮೆಕ್ಯಾನಿಕಲ್ ವಿಭಾಗ)ಪಾಸಾದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಉಚಿತವಾಗಿ ಸಿ.ಎನ್.ಸಿ ಪ್ರೋಗ್ರಾಮಿಂಗ್ ಮತ್ತು ಅಪರೇಷನ್, ಆಟೊಕ್ಯಾಡ್, ಮಾಸ್ಟರ್‍ಕ್ಯಾಮ್, ಟರ್ನರ್, ಸಾಲಿಡ್ ವಕ್ರ್ಸ ನಲ್ಲಿ (3ತಿಂಗಳು) ತರಬೇತಿ ನೀಡಲಾಗುವುದು.
 
 
 
ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನಂ 7ಇ, ಬೈಕಂಪಾಡಿ, ಮಂಗಳೂರು (ದೂರವಾಣಿ ಸಂಖೈ 0824-2408003,9141629595) ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here