ಜಿಎಸ್ ಟಿ ಮಾಹಿತಿ

0
290

 
ಉಜಿರೆ ಪ್ರತಿನಿಧಿ ವರದಿ
ರಾಜ್ಯಸಭೆಯಲ್ಲಿ ಜಿಎಸ್ ಟಿಗೆ ಅನುಮೋದನೆ ದೊರೆತ ಬೆನ್ನಲ್ಲೇ ದೇಶದ್ಯಾಂತ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಅನಂತ ಕೃಷ್ಣ ಮಾತನಾಡಿದರು.
ಎಸ್ ಡಿ ಎಂ ಪದವಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ವಾಣಿಜ್ಯ ವಿಭಾಗವು ಬಿಕಾಂ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ ಜಿಎಸ್ಟಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.
 
ಈ ಹಿಂದೆ ರಾಜ್ಯಗಳ ಬೊಕಸಕ್ಕೆ ಹೊರೆ ಜಾಸ್ತಿಯಾಗಿತ್ತು. ಇದಕ್ಕಾಗಿಯೇ ತಮಿಳುನಾಡು ಸರ್ಕಾರ ತಿದ್ದುಪಡಿ ಮಸೂದೆಯನ್ನು ಒಪ್ಪಿಕೊಂಡಿರಲಿಲ್ಲ. ಇದೀಗ ಇದಕ್ಕೆ ಸಂಬಂಧಿಸಿದ ದ್ವಂದ್ವ ಪರಿಹಾರವಾಗಿದೆ ಎಂದರು. ವರ್ಷ ಸ್ವಾಗತಿಸಿದರು. ಹರಿಪ್ರಕಾಶ್ ವಂದಿಸಿದರು. ಭಾಗ್ಯಶ್ರೀ ನಿರೂಪಿಸಿದರು.
 
ujire_commerce1
 
‘ವ್ಯಾವಹಾರಿಕ ಜ್ಞಾನ ಅಗತ್ಯ’
ವಿದ್ಯಾರ್ಹತೆಯ ಆಧಾರದಲ್ಲಿ ವ್ಯವಹಾರ ಜ್ಞಾನ ಬೆಳಸಿಕೊಂಡು ಉದ್ಯಮರಂಗದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಬಾಂಬೆ ಷೇರು ವಿನಿಮಯದ ಸದ್ಯಸರಾದ ಆರ್ ವಿ ರಘುನಂದನ್ ಅಭಿಪ್ರಾಯಪಟ್ಟರು.
ಎಸ್ ಡಿ ಎಂ ಪದವಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ವಾಣಿಜ್ಯ ವಿಭಾಗವು ಬಿಕಾಂ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ ವಿದ್ಯಾರ್ಥಿಗಳ ಬಂಡವಾಳ ಹೊಡಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕ ಗಳಿಸುವುದರ ಕಡೆಗಷ್ಟೇ ಗಮನ ನೀಡದೇ ಜಗತ್ತಿನ ವ್ಯವಹಾರ ಜ್ಞಾನ ಪಡೆದುಕೊಳ್ಳುವುದರೆಡಗೂ ಆದ್ಯತೆ ನೀಡಬೇಕು. ಅರ್ಧಕ್ಕೆ ಓದು ನಿಲ್ಲಿಸಿದ ಹಲವರು ಉದ್ಯಮ ಕ್ಷೇತ್ರದಲ್ಲಿ ಯಶ್ವಸಿಯಾಗಿದ್ದಾರೆ ಎಂದು ಹೇಳಿದರು. ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here