ಜಿಎಸ್‌ಟಿ ಮಸೂದೆ ಮಂಡನೆಗೆ ಕ್ಷಣಗಣನೆ

0
294

ವರದಿ: ಲೇಖಾ
ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಬುಧವಾರ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.
 
 
 
ಜಿಎಸ್‌ಟಿ ಮಸೂದೆ ಜಾರಿ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಕಾಲ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ತನ್ನೆಲ್ಲಾ ಸದಸ್ಯರಿಗೆ ಬಿಜೆಪಿ ವಿಪ್‌ ಜಾರಿ ಮಾಡಿದೆ.
 
 
ವಿಪಕ್ಷಗಳ ಸಲಹೆಯಂತೆ ಈಗಾಗಲೇ ಮಸೂದೆಗೆ ಕೆಲವೊಂದು ತಿದ್ದುಪಡಿ ತರಲು ಒಪ್ಪಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈ ಅಂಶಗಳನ್ನು ಮಸೂದೆಯಲ್ಲಿ ಸೇರಿಸಿ ಆದಷ್ಟು ಬೇಗ ಮಸೂದೆ ಮಂಡಿಸಲು ನಿರ್ಧರಿಸಿದೆ.
 
 
ಮಸೂದೆ ಕುರಿತು ಕಾಂಗ್ರೆಸ್‌ ಹೊರತುಪಡಿಸಿ ಬಹುತೇಕ ವಿಪಕ್ಷಗಳು ಸಹಮತ ವ್ಯಕ್ತಪಡಿಸಿವೆ. ಬದಲಾದ ಪರಿಸ್ಥಿತಿಯಲ್ಲಿ, ಕಾಂಗ್ರೆಸ್‌ ಕೂಡ ವಿಧೇಯಕದ ಬಗ್ಗೆ ಬಹುತೇಕ ಸಹಮತ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಆ.12ಕ್ಕೆ ಮುಕ್ತಾಯಗೊಳ್ಳಲಿರುವ ಸಂಸತ್ತಿನ ಮುಂಗಾರು ಅಧಿವೇಶನದೊಳಗೆ ಮಸೂದೆ ಅಂಗೀಕರಿಸುವ ವಿಶ್ವಾಸ ಸರ್ಕಾರದ್ದು.
 
 
 
ಮತ್ತೂಂದೆಡೆ ಕಾಂಗ್ರೆಸ್‌, ಮಸೂದೆ ಕುರಿತು ಇನ್ನೂ ತನ್ನ ಗುಟ್ಟುಬಿಟ್ಟುಕೊಟ್ಟಿಲ್ಲ. ಇಂದು ಸಂಸತ್ತಿನ ಉಭಯ ಸದನಗಳಲ್ಲಿನ ತಮ್ಮ ಸದಸ್ಯರಿಗೆ ಮಸೂದೆಯಲ್ಲಿನ ಅಂಶಗಳ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರಾದ ಪಿ.ಚಿದಂಬರಂ ಮತ್ತು ಆನಂದ್‌ ಶರ್ಮಾ ಅವರು ಮಾಹಿತಿ ನೀಡಲಿದ್ದಾರೆ. ಈ ಸಭೆಯಲ್ಲಿ ಮಸೂದೆಯನ್ನು ಬೆಂಬಲಿಸುವ ಅಥವಾ ಅದಕ್ಕೆ ಕೆಲ ಬದಲಾವಣೆ ತರುವಂತೆ ಸರ್ಕಾರಕ್ಕೆ ಒತ್ತಾಯ ಹೇರುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
 
 
ಜಿಎಸ್ ಟಿ, ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿರುವ ಹಿನ್ನಲೆಯಲ್ಲಿ ಅದಕ್ಕೆ ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಸದ್ಯ ರಾಜ್ಯಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸಹ ವಿಧೇಯಕಕ್ಕೆ ಸಹಮತ ತೋರಿಸಿರುವುದರಿಂದ ಈ ಬಾರಿ ಮಸೂದೆ ಪಾಕ್ ಆಗುವ ಖಚಿತ ವಿಶ್ವಾಸ ಸರ್ಕಾರಕ್ಕಿದೆ.

LEAVE A REPLY

Please enter your comment!
Please enter your name here