ಜಿಎಸ್​ಟಿ ಮಸೂದೆ ತಿದ್ದುಪಡಿಗೆ ಕೇಂದ್ರ ಸಂಪುಟ ಒಪ್ಪಿಗೆ

0
311

ವರದಿ: ಲೇಖಾ
ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಸೂದೆ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ, ಈ ಹಿನ್ನಲೆಯಲ್ಲಿ ಸಂಸತ್ ಅಧಿವೇಶನದಲ್ಲೇ ಮಂಡನೆಯಾಗುವ ಸಾಧ್ಯತೆ ಹೆಚ್ಚಿದೆ.
 
 
ಮಸೂದೆಯಲ್ಲಿ ಮಹತ್ವದ ತಿದ್ದುಪಡಿಗಳನ್ನು ಮಾಡಲಾಗಿದ್ದು, ಕಾಂಗ್ರೆಸ್​ನ ಬೇಡಿಕೆಯ ಮೇರೆಗೆ ಶೇ.1 ಹೆಚ್ಚುವರಿ ಲೆವಿ ಹಾಗೂ ಶೇ.1 ಉತ್ಪಾದನಾ ತೆರಿಗೆ ಪ್ರಸ್ತಾಪವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ ರಾಜ್ಯಗಳಿಗೆ ಉಂಟಾಗುವ ನಷ್ಟವನ್ನು ಸಂಪೂರ್ಣ 5 ವರ್ಷಗಳವರೆಗೂ ತುಂಬಿಕೊಡಲು ನಿರ್ಧರಿಸಲಾಗಿದೆ. ದೂರು ನಿರ್ವಹಣೆಯನ್ನು ಜಿಎಸ್​ಟಿ ಸಮಿತಿ ನಿರ್ವಹಿಸಲಿದೆ ಎಂಬುದನ್ನೂ ಸಂವಿಧಾನ ತಿದ್ದುಪಡಿ ಮಸೂದೆಯಲ್ಲೇ ಸೇರಿಸಲು ನಿರ್ಧರಿಸಲಾಗಿದೆ.
 
 
ಜಿಎಸ್​ಟಿ ಮಸೂದೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರಾಜ್ಯಗಳ ಹಣಕಾಸು ಸಚಿವರನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ಜಿಎಸ್​ಟಿ ದರವನ್ನು ನಮೂದಿಸದಿರಲು ಎಲ್ಲ ರಾಜ್ಯಗಳೂ ಒಪ್ಪಿಕೊಂಡಿವೆ.

LEAVE A REPLY

Please enter your comment!
Please enter your name here