ಜಾತಿ ಮತ ರಾಜಕೀಯವಿಲ್ಲದ ಸಂಘಟನೆ ಎಕೆಪಿಎ

0
236

ವರದಿ: ಶ್ಯಾಮ್ ಪ್ರಸಾದ್
ಜಾತಿ, ಮತ, ರಾಜಕೀಯವಿಲ್ಲದ ಸಂಘಟನೆಯಾಗಿದೆ ಎಕೆಪಿಎ ಎಂದು ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಕಾಸರಗೋಡು ಮೇಘಲಾ ಅಧ್ಯಕ್ಷ ವಾಸು ಎ ಅಭಿಪ್ರಾಯಪಟ್ಟರು.
 
kasargod_apka1
ಅವರು ಶುಕ್ರವಾರ ನೀರ್ಚಾಲು ಶಾರ್ಪ್ ಸ್ಟುಡಿಯೋದಲ್ಲಿ ನಡೆದ ಎಕೆಪಿಎ ಬದಿಯಡ್ಕ ಯೂನಿಟ್ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಕ್ಷಬೇಧವಿದ್ದರೆ ಸಂಘಟನಾ ಶಕ್ತಿ ಕುಂದುತ್ತದೆ. ಈ ಸಂಘಟನೆಯ ಮೂಲಕ ನಾವು ಜನರ ಹತ್ತಿರ ತಲುಪಲು ಯಾವುದೇ ಸಮಸ್ಯೆ ಇರುವುದಿಲ್ಲ. ನಮ್ಮ ಕಲೆಯನ್ನು ಪೋಷಿಸುವುದರ ಜೊತೆಗೆ ಸಮಾಜ ಸೇವೆಯನ್ನು ಕೈಗೊಳ್ಳಬೇಕು ಎಂದರು.
 
 
ಬದಿಯಡ್ಕ ಯೂನಿಟ್ ಅಧ್ಯಕ್ಷ ಉದಯಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಒಂದೇ ಮನಸ್ಸಿನಿಂದ ಇದ್ದರೆ ಸಂಘಟನೆ ಶಕ್ತಿಯುತವಾಗಿರುತ್ತದೆ ಎಂದರು. ಹೇಳಲು ಹೆಮ್ಮೆ ಪಡುತ್ತಿದ್ದೇನೆ ಎಂದು ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕ್ಕುನ್ನು ಶುಭಹಾರೈಸಿದರು.
 
 
 
ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ತೈಕಡಪ್ಪುರಂ, ಜಿಲ್ಲಾ ಉಪಾಧ್ಯಕ್ಷ ಸನ್ನೀ ಜೇಕಬ್, ಜಿಲ್ಲಾ ಕಮಿಟಿ ಸದಸ್ಯರಾದ ಗೋವಿಂದನ್ ಚೆಂಗರಂಕಾಡು, ನಿರ್ಮಲಾಕ್ಷನ್, ದಿನೇಶ್ ಇನ್ಸೈಟ್, ಮೇಘಲಾ ಕಾರ್ಯದರ್ಶಿ ಸುಕು, ಖಜಾಂಜಿ ಚಂದ್ರಶೇಖರ, ಕಾಂಞಂಗಾಡು ಯೂನಿಟ್ ಅಧ್ಯಕ್ಷ ರಮೇಶ್ ಮಾವುಂಗಾಲು ಮೊದಲಾದವರು ಮಾತನಾಡಿದರು.
 
 
ಬದಿಯಡ್ಕ ಯೂನಿಟ್ ಕಾರ್ಯದರ್ಶಿ ವೇಣುಗೋಪಾಲ ವಾರ್ಷಿಕ ವರದಿಯನ್ನು ಮಂಡಿಸಿದರು. ಖಜಾಂಜಿ ನಾರಾಯಣ ವಿ ಲೆಕ್ಕಪತ್ರ ಮಂಡನೆ ಮಾಡಿದರು. ಜೊತೆಕಾರ್ಯದರ್ಶಿ ಅಪ್ಪಣ್ಣ ಧನ್ಯವಾದವನ್ನಿತ್ತರು. ಗಣೇಶ್ ಪೆರ್ಲ, ಸೆಬಾಸ್ಟಿಯನ್ ಸೀತಂಗೋಳಿ, ಶ್ಯಾಮಪ್ರಸಾದ ಸರಳಿ, ವಿನು ಪೆರ್ಲ, ಹರ್ಷಕುಮಾರ್ ಕೀರಿಕ್ಕಾಡು, ಗೋಪಾಲಕೃಷ್ಣ ಅಡ್ಯನಡ್ಕ, ಗಣೇಶ್ ಬೊಳುಂಬು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here