ಜಾಗ್ವರ್' ಟೀಸರ್ ತೋರಿಸಿದ್ರು…

0
558

ರಾಷ್ಟ್ರೀಯ ಪ್ರತಿನಿಧಿ ವರದಿ
ನಟ ಪವನ್ ಕಲ್ಯಾಣ್ ಗಾಗಿ ಬ್ಲ್ಯಾಕ್ ಬಸ್ಟರ್ ಚಿತ್ರ ನಿರ್ಮಿಸುವೆ ಎಂದು ಹೈದ್ರಾಬಾದ್ ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
 
 
ಈ ಮಾತುಕತೆ ವೇಳೆ ಹೆಚ್ ಡಿಕೆ ಮೊಬೈಲ್ ನಲ್ಲಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವರ್’ ಚಿತ್ರದ ಟೀಸರ್ ತೋರಿಸಿದ್ದಾರೆ. ‘ಜಾಗ್ವಾರ್’ ಹಾಡು, ಫೈಟ್, ನಿಖಿಲ್ ನಟನೆ ಬಗ್ಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಎಂಎಲ್ ಸಿ, ನಿರ್ಮಾಪಕ ಸಿ ಆರ್ ಮನೋಹರ್ ಉಪಸ್ಥಿತರಿದ್ದರು.
 
ಬೆಳ್ಳಿ ಬಾಲೆಗೆ ಬಹುಮಾನ
ನಂತರ ಹೈದ್ರಾಬಾದ್ ನಲ್ಲಿ ಮಾತನಾಡಿದ ಹೆಚ್ ಡಿಕೆ, ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ಪಿ ವಿ ಸಿಂಧುಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವೆ. ಪುತ್ರ ನಿಖಿಲ್’ನ ‘ಜಾಗ್ವಾರ್’ ಚಿತ್ರದ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲೇ ಸಿಂಧುಗೆ 10ಲಕ್ಷ ನಗದು ಬಹುಮಾನ ನೀಡುತ್ತೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here