ಜಾಗೃತಿ ಸಪ್ತಾಹದ ಅಂಗವಾಗಿ ಆಕಾಶವಾಣಿ ಸರಣಿ ಕಾರ್ಯಕ್ರಮ

0
209

ಮಂಗಳೂರು ಪ್ರತಿನಿಧಿ ವರದಿ
ಎಂ.ಆರ್.ಪಿ ಎಲ್ ಮತ್ತು ಮಂಗಳೂರು ಆಕಾಶವಾಣಿಯ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 31 ರಿಂದ ನವಂಬರ್ 5 ರವರೆಗೆ ನಡೆಯುವ ಜಾಗೃತಿ ತಿಳುವಳಿಕೆ ಸಪ್ತಾಹದ ಅಂಗವಾಗಿ ಮಂಗಳೂರು ಆಕಾಶವಾಣಿ ಕೇಂದ್ರವು ಪ್ರತಿ ರಾತ್ರಿ 8.00 ರಿಂದ 8.30 ರವರೆಗೆ ವಿಶೇಷ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.
 
 
 
ಅ.31 ರಂದು ರಾತ್ರಿ 8.00 ಗಂಟೆಗೆ ಜಾಗೃತಿ ತಿಳುವಳಿಕೆ ಸಪ್ತಾಹದ ಬಗ್ಗೆ ಎಂ ಆರ್ ಪಿ ಎಲ್ ನ ಜಾಗೃತಿ ವಿಭಾಗದ ವ್ಯವಸ್ಥಾಪಕರಾದ ಎಚ್.ವಿ. ಮಂಜುನಾಥ್ ಅವರಿಂದ ಬಾಷಣ ಹಾಗೂ ಜಾಗೃತಿ ತಿಳುವಳಿಕೆ ಸಪ್ತಾಹದ ಉದ್ಘಾಟನೆಯ ವರದಿ, ನ.1 ರಂದು ರಾತ್ರಿ 8 ಗಂಟೆಗೆ ‘`ಭ್ರಷ್ಟಾಚಾರ ತಡೆಗೆ ಸಾರ್ವಜನಿಕರ ಸಹಬಾಗಿತ್ವ`” ಕುರಿತು ಚರ್ಚೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಠಾಚಾರ ನಿಗ್ರಹ ದಳದ ಪೊಲೀಸ್ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ, ಎಂ.ವೆಂಕಟೇಶ್ ನಿರ್ದೇಶಕರು, ಎಂ.ಆರ್ ಪಿ ಎಲ್ ( ರಿಫೈನರಿ), ಗಣೇಶ್ ಆಚಾರ್ ಎಂ ಆರ್ ಪಿ ಎಲ್ ನ ಹಿರಿಯ ವ್ಯವಸ್ಥಾಪಕರು (ಜಾಗೃತ ದಳ) ಭಾಗವಹಿಸಲಿದ್ದು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ.
 
 
 
ನ.2 ರಂದು ರಾತ್ರಿ 8 ಗಂಟೆಗೆ ಎಂ.ಆರ್.ಪಿ.ಎಲ್ ನ ಮುಖ್ಯ ಜಾಗೃತ ಅಧಿಕಾರಿ ವೈ. ರವೀಂದ್ರನಾಥ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಕುಮಾರ್ ಅವರೊಂದಿಗೆ ಸಂದರ್ಶನ, ನ.3 ರಂದು ರಾತ್ರಿ 8 ಗಂಟೆಗೆ ಮಂಗಳೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಭ್ರಷ್ಟಾಚಾರ ರಹಿತ ದಕ್ಷ ಆಡಳಿತಕ್ಕಾಗಿ ಯುವಜನತೆಯ ಮಿಡಿತ’ ಎಂಬ ಚರ್ಚೆ ನಡೆಸಿಕೊಡಲಿದ್ದಾರೆ. ಈ ಚರ್ಚೆಯನ್ನು ಉಪನ್ಯಾಸಕಿ ಶ್ಯಾಮಲಾ ಪಿ. ಎಸ್. ನಡೆಸಿಕೊಡಲಿದ್ದಾರೆ.
 
 
 
ಸುರತ್ಕಲ್ನಲ್ಲಿ ನಡೆಯಲಿರುವ ಜಾಗೃತಿ ನಡಿಗೆ ಕುರಿತು ಉಪನ್ಯಾಸಕರಾದ ಪ್ರೊ. ಕೃಷ್ಣಮೂರ್ತಿ ಅವರಿಂದ ವರದಿ ಹಾಗೂ ಸಂದರ್ಶನಗಳನ್ನಾಧರಿಸಿದ ಕಾರ್ಯಕ್ರಮ ನ.4 ರಂದು ರಾತ್ರಿ 8 ಗಂಟೆಗೆ ಮೂಡಿಬರಲಿದೆ.
 
 
ನ.5 ರಂದು ರಾತ್ರಿ 8 ಗಂಟೆಗೆ ‘ಭ್ರಷ್ಟಾಚಾರ ರಹಿತ ದಕ್ಷ-ಕ್ಷಿಪ್ರ ಆಡಳಿತ’ ಕುರಿತು ಹಿರಿಯರೊಂದಿಗೆ ಮಕ್ಕಳ ಸಂವಾದದಲ್ಲಿ ಬೆಸೆಂಟ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ರವಿಪ್ರಭಾ ಮತ್ತು ವಿದ್ಯಾರ್ಥಿಗಳಾದ ಅನ್ವಿತಾ, ನಿತಿಷಾ ಮತ್ತು ಕಾರ್ತಿಕ್ ಜೆ. ರಾವ್ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಎಂ.ಆರ್.ಪಿ.ಎಲ್ ಪ್ರಾಯೋಜಿಸಲಿದೆ.

LEAVE A REPLY

Please enter your comment!
Please enter your name here