ಜಲ ಸಂರಕ್ಷಣೆ ಪ್ರತಿಯೊಬ್ಬರ ಆಧ್ಯ ಕರ್ತವ್ಯ : ಪ್ರಶಾಂತ್ ಆಚಾರ್ಯ

0
670

ಪುತ್ತೂರು ಪ್ರತಿನಿಧಿ ವರದಿ
ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ವಿಶ್ವ ಜಲ ದಿನದ ಅಂಗವಾಗಿ ಇಕೋ ಕ್ಲಬ್ ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಜತೆಗೂಡಿ ಜಲ ಸಂಪನ್ಮೂಲ ಸಂರಕ್ಷಣೆ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು .
 
 
 
ವಿವೇಕಾನಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಯ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ಆಚಾರ್ಯ ಮಾತನಾಡುತ್ತಾ ನೀರನ್ನು ಸದ್ಬಳಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ನೀರಿನ ಹಾಗೂ ಅಂತರ್ಜಲದ ಮಟ್ಟ ಕೂಡಾ ಕಡಿಮೆಯಾಗುತ್ತಿದೆ ಮಂಗಳೂರು ನಗರಕ್ಕೆ ತುಂಬೆ ಅಣೆಕಟ್ಟು , ಪುತ್ತೂರು ನಗರಕ್ಕೆ ಉಪ್ಪಿನಂಗಡಿಯಿಂದ ಕುಡಿಯುವ ನೀರಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕುಸುದಿದೆ ಮತ್ತು ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನದಲ್ಲಿ ಕೇವಲ ನೀರಿಗಾಗಿ ಯುದ್ಧ ನಡೆದರೂ ಸಂದೇಹವಿಲ್ಲ ಆದುದರಿಂದ ನೀರಿನ ಮಿತ ಬಳಕೆ ಹಾಗೂ ನೀರಿನ ಬಳಕೆಯ ಬಗ್ಗೆಜನರಲ್ಲಿ ಕಾಳಜಿ ಮೂಡಿಸುವುದು ಅತ್ಯಗತ್ಯ ಎಂದು ಎಂದು ಹೇಳುತ್ತಾ ನೀರನ್ನು ಸಂರಕ್ಷಿಸುವ ಪರಿಹಾರ ಕ್ರಮಗಳನ್ನು ವಿವರಿಸಿದರು.
 
 
 
ವೇದಿಕೆಯಲ್ಲಿ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಕೆ.ಜಿ., ಇಂಜಿನಿಯರಿಂಗ್ ಕಾಲೇಜಿನ ಇನ್ನೋರ್ವ ಉಪನ್ಯಾಸಕರಾದ ಪ್ರಶಾಂತ್ ಎಚ್.ಡಿ. ಉಪಸ್ಥಿತರಿದ್ದರು. ತದನಂತರ ಅತಿಥಿಗಳಿಗೆ ಕಿರುಕಾಣಿಕೆ ಇತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ/ ಉಪನ್ಯಾಸಕೇತರ ವೃಂದ , ವಿದ್ಯಾರ್ಥಿವೃಂದ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿದ್ಯಾರ್ಥಿ ತೇಜಸ್ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here