ಜಲ ವಿವಾದಗಳ ಇತ್ಯರ್ಥಕ್ಕೆ ಒಂದೇ ನ್ಯಾಯಮಂಡಳಿ

0
438

ರಾಷ್ಟ್ರೀಯ ಪ್ರತಿನಿಧಿ ವರದಿ
ಅಂತರ್ ರಾಜ್ಯ ನದಿ ನೀರು ಹಂಚಿಕೆಗೆ ಪರಿಹಾರ ಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪರಿಹಾರ ಸೂಚಿಸಲು ನೂತನ ಕ್ರಮಕ್ಕೆ ಮುಂದಾಗಿದೆ.
ಅಂತರ್ ರಾಜ್ಯ ಜಲವಿವಾದ ಕಾಯ್ದೆ-1956ಕ್ಕೆ ತಿದ್ದುಪಡಿಗೆ ಮುಂದಾಗಿದೆ. ಮುಂದಿನ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ಸಾಧ್ಯತೆ ಇದೆ. ಈಗಿರುವ ನ್ಯಾಯಮಂಡಳಿ ವಿಲೀನಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ನ್ಯಾಯಮಂಡಳಿ ಜತೆಗೆ ಪೀಠಗಳ ಸ್ಥಾಪನೆಗೂ ನಿರ್ಧರಿಸಲಾಗಿದೆ.
 
 
 
ಪ್ರಸ್ತುತ 8 ನ್ಯಾಯಮಂಡಳಿಗಳು ಆಸ್ತಿತ್ವದಲ್ಲಿದೆ. ಕಾವೇರಿ, ಮಹದಾಯಿ, ರಾವಿ, ಬಿಯಾಸ್, ವನ್ಸಧಾರಾ, ಕೃಷ್ಣಾ ನದಿಗಳಿಗೆ ಸಂಬಂಧಿಸಿದ 8 ನ್ಯಾಯಮಂಡಳಿಗಳಿವೆ. ಈ ಎಲ್ಲಾ ವಿವಾದಕ್ಕೂ ಒಂದೇ ನ್ಯಾಯಮಂಡಳಿ ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
 
 
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಅಗತ್ಯಕ್ಕೆ ತಕ್ಕಂತೆ ಪೀಠಗಳನ್ನು ಸ್ಥಾಪಿಸಲಾಗುವುದು. ವಿವಾದ ಇತ್ಯರ್ಥವಾದಂತೆ ಪೀಠವನ್ನು ಮುಚ್ಚಲಾಗುವುದು ಎಂದು ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here