ಜಲಾಶಯಗಳ ವಿವರ ನೀಡಿದ ಅಧಿಕಾರಿಗಳು

0
482

ನಮ್ಮ ಪ್ರತಿನಿಧಿ ವರದಿ
4 ಜಲಾಶಯಗಳಲ್ಲಿ ಬಳಕೆ ಯೋಗ್ಯ ನೀರು 25 ಟಿಎಂಸಿ ಮಾತ್ರ ಎಂದು ನಾಲ್ಕೂ ಜಲಾಶಯಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾವೇರಿ ಕೊಳ್ಳದ 4 ಡ್ಯಾಂನಲ್ಲಿ 25 TMC ನೀರು ಬಳಕೆಯೋಗ್ಯವಾಗಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ಒಟ್ಟು 15.7 ಟಿಎಂಸಿ ನೀರು ಇದೆ.
 
KRSನ 15.7 TMC ಪೈಕಿ 11.2 TMC ನೀರು ಬಳಕೆ ಯೋಗ್ಯವಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ಒಳಹರಿವು 1063 ಕ್ಯೂಸೆಕ್ ಇದೆ.
 
ಹಾರಂಗಿ ಜಲಾಶಯದಲ್ಲಿ ಈಗ ಒಟ್ಟು 7.26 ಟಿಎಂಸಿ ನೀರು ಇದೆ. 7.26 ಟಿಎಂಸಿ ಪೈಕಿ 6.5 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯಕ್ಕೆ ಒಳಹರಿವು ಪ್ರಮಾಣ 2000 ಕ್ಯೂಸೆಕ್ ಇದೆ.
 
ಕಬಿನಿ ಜಲಾಶಯದಲ್ಲಿ ಈಗ ಒಟ್ಟು 12.49 ಟಿಎಂಸಿ ನೀರು ಇದೆ. 12.49 ಟಿಎಂಸಿ ಪೈಕಿ 2.6 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 1200 ಕ್ಯೂಸೆಕ್ ಇದೆ.
 
ಹಾಸನ ತಾಲೂಕಿನ ಗೊರೂರು ಬಳಿ ಹೇಮಾವತಿ ಜಲಾಶಯದಲ್ಲಿ ಈಗ ಒಟ್ಟು 8.63 ಟಿಎಂಸಿ ನೀರು ಇದೆ. 8.63 ಟಿಎಂಸಿ ಪೈಕಿ 4.25 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಡ್ಯಾಂಗೆ ಒಳಹರಿವು ಪ್ರಮಾಣ 1630 ಕ್ಯೂಸೆಕ್ ಇದೆ.

LEAVE A REPLY

Please enter your comment!
Please enter your name here