ಮಂಡ್ಯ ಪ್ರತಿನಿಧಿ ವರದಿ
ಇಂದು ಕಾವೇರಿ ಜಲಾನಯನ ಪ್ರದೇಶಕ್ಕೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದಿಂದ ನೇಮಿಸಲಾಗಿರುವ ತಜ್ಞರ ತಂಡ ಭೇಟಿ ನೀಡಲಿದೆ. ಜಿ.ಎಸ್ ಝಾ ನೇತೃತ್ವದ ತಂಡ ಇಂದು ಭೇಟಿ ನೀಡಲಿದೆ. ಇಂದು 11.30ಕ್ಕೆ ಹೆಲಿಕಾಪ್ಟರ್ ನಲ್ಲಿ ಮದ್ದೂರಿಗೆ ಆಗಮಿಸಲಿದೆ.
ತಜ್ಞರ ತಂಡ ಅಚ್ಚುಕಟ್ಟುಪ್ರದೇಶವನ್ನು ವೀಕ್ಷಿಸಿ, ಪರಿಶೀಲನೆ ನಡೆಸಲಿದೆ. ಮೊದಲು ತೈಲೂರು, ಸೋಮನಹಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ವೀಕ್ಷಿಸಲಿದೆ. ಮಧ್ಯಾಹ್ನ 1.30ಕ್ಕೆ ಮದ್ದೂರಿನ ಪ್ರವಾಸ ಮಂದಿರದಲ್ಲಿ ಊಟದ ಬಳಿಕ 2.45ಕ್ಕೆ ಮದ್ದೂರಿನ ಹನುಮಂತನಗರ, ದೊಡ್ಡರಸಿನಕೆರೆ, ಮಾದರಹಳ್ಳಿಕೆರೆ, ಅಚ್ಚುಕಟ್ಟುಪ್ರದೇಶಕ್ಕೆ ಭೇಟಿ ನೀಡಲಿದೆ.
ಬಳಿಕ ಮಳ್ಳವಳ್ಳಿ ತಾಲೂಕಿನ ಶೆಟ್ಟಹಳ್ಳಿ, ಕಿರುಗಾವಲು, ಮಳವಳ್ಳಿ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.ಮತ್ತೆ ಸಂಜೆ 6.30ಕ್ಕೆ ತಾಂತ್ರಿಕ ತಂಡ ಕೆಆರ್ ಎಸ್ ತಲುಪಲಿದೆ. ಅಲ್ಲಿ ಜಲ ಆಯೋಹದ ಅಧ್ಯಕ್ಷ ಜಿ ಎಸ್ ಝಾ ನೇತೃತ್ವದ ತಂಡ ಡ್ಯಾಂನಲ್ಲಿರುವ ನೀರಿನ ಮಟ್ಟವನ್ನು ಪರಿಶೀಲಿಸಲಿದೆ.