ಜಲಾವೃತ

0
490

ರಾಯಚೂರು ಪ್ರತಿನಿಧಿ ವರದಿ
ಕೃಷ್ಣಾ ನದಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಗ್ರಾಮಗಳು ಜಲಾವೃತವಾಗಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮೂರು ಗ್ರಾಮಗಳು ಜಲಾವೃತವಾಗಿದೆ.
 
 
ಕರಕಲಗಡ್ಡಿ, ಆರಲಗಡ್ಡಿ ಮತ್ತು ಯಂಕನಗಡ್ಡಿ ಗ್ರಾಮಗಳು ಜಲಾವೃತಗೊಂಡಿದ್ದು, ಮೂರು ಗ್ರಾಮಗಳಲ್ಲಿ 37 ಜನರು ಸಿಲುಕಿಕೊಂಡಿದ್ದಾರೆ. ಕರಕಲಗಡ್ಡಿಯಲ್ಲಿ 27, ಯಂಕನಗಡ್ಡಿಯ 10 ಜನರು ಸಂಕಷ್ಟದಲ್ಲಿದ್ದಾರೆ.
 
 
ಪ್ರಾಣ ರಕ್ಷಣೆಗೆ ನದಿ ದಂಡೆಯಲ್ಲಿ ನಿಂತು ಗ್ರಾಮಸ್ಥರ ಮೊರೆ ಇಡುತ್ತಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಉಪವಿಭಾಗಾಧಿಕಾರಿ ಸೆಲ್ವಮಣಿ, ಲಿಂಗಸುಗೂರು ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಹಿರೇಮಠ, ಲಿಂಗಸುಗೂರು ತಹಶೀಲ್ದಾರ್ ಶಿವಾನಂದ ಸಾಗರ ಭೇಟಿ ನೀಡಿದ್ದಾರೆ.
 
 
ನಡುಗುಡ್ಡೆಯಲ್ಲಿ ಸಿಲುಕಿರುವವರನ್ನು ಸುರಕ್ಷಿತ ಪ್ರದೇಶದಕ್ಕೆ ಸ್ಥಳಾಂತರಕ್ಕೆ ಸಿದ್ಧತೆ ಮಾಡಲಾಗಿದೆ. ಯಾದಗಿರಿ ಜಿಲ್ಲೆ ಶಿವಪುರ ತಾಲೂಕಿನ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲಾಗಿದೆ. ಅಧಿಕಾರಿಗಳು ನದಿಗೆ ನೀರು ಬೀಡುವ ಮಾಹಿತಿ ನೀಡಿದ್ದರು. ಆದರೆ ದ್ವೀಪ ಗ್ರಾಮಗಳ ಜನರನ್ನು ಸ್ಥಳಾಂತರಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here